Advertisement

ಸಾವಯವ ಕೃಷಿಗೆ ಮುಂದಾಗಿ; ಸಚಿವ ಬಿ.ಸಿ ಪಾಟೀಲ

06:02 PM May 02, 2022 | Team Udayavani |

ಅಡಹಳ್ಳಿ: ಕೃಷಿಗೆ ರಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಸಾವಯವ ಕೃಷಿ ಪದ್ಧತಿಗೆ ರೈತರು ಬದಲಾಗಿ ಆರೋಗ್ಯ ಕಾಪಾಡಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದರು.

Advertisement

ಸಮೀಪದ ಶೇಗುಣಶಿ ಗ್ರಾಮದಲ್ಲಿ ಶಂಕರ ಸ್ವಾಮೀಜಿ ಅಮೃತ ಮಹೋತ್ಸವ ಹಾಗೂ ಡಾ| ಮಹಾಂತ ದೇವರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ನಿಮಿತ್ತ ರವಿವಾರ ನಡೆದ ಸಾವಯವ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರೈತರು ಸ್ವಾವಲಂಬಿಯಾಗಿ ಬದುಕಬೇಕಾದರೆ ಒಕ್ಕಲುತನದ ಜೊತೆಗೆ ಉಪ ಕಸುಬುಗಳನ್ನು ಮಾಡಬೇಕು.ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಬೆಳೆಯಲು ಸರ್ಕಾರ ಅನುದಾನ ನೀಡುತ್ತಿದೆ. ಕೃಷಿ ಮಹಾವಿದ್ಯಾಲಯದಲ್ಲಿ ಕಲಿಯಲು ರೈತರ ಮಕ್ಕಳಿಗೆ ಶೇ 50 ಮೀಸಲಾತಿ ಇದೆ.

ಅಥಣಿ ತಾಲೂಕಿನ ಕೊಕಟನೂರ ಗ್ರಾಮಕ್ಕೆ ಕೃಷಿ ಕಾಲೇಜು ಮಂಜೂರಾಗಿದೆ. ಆಧುನಿಕ ಯಂತ್ರೋಪಕರಣ ಬಳಸಿ ರೈತ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷ್ಣಾ ನದಿ ದಡದ ರೈತರು ಅತಿಯಾದ ನೀರು ಬಳಕೆ ಮಾಡಿ ಸವಳು- ಜವಳು ಸಮಸ್ಯೆ ಎದುರಿಸುತ್ತಿದ್ದು, ಇಸ್ರೇಲ್‌ ಮಾದರಿಯಲ್ಲಿ ಕೃಷಿ ಕೈಗೊಂಡು ಸಾವಯವ ಕೃಷಿ ಮೊರೆ ಹೋಗುವುದು ಅನಿವಾರ್ಯ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮಾತನಾಡಿ, ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪೂರ ಈ ಮೂರು ಜಲ್ಲೆಯಲ್ಲಿಯೇ 1.50 ಲಕ್ಷ ಎಕರೆ ಭೂಮಿ ಸವಳು-ಜವಳಾಗಿದೆ. ಇದನ್ನು ಸರಿಪಡಿಸಲು ರೈತರು ಬೆಳೆ ಪದ್ದತಿಯನ್ನು ಬದಲಾಯಿಸಿ ಈ ಪ್ರದೇಶದ ಭೂಮಿಯಲ್ಲಿ ಬಿದಿರು ಬೆಳೆಯಬೇಕು ಎಂದು ತಿಳಿಸಿದರು.

Advertisement

ಗದಗ-ಡಂಬಳ ತೋಂಟದಾರ್ಯಮಠದ ಜಗದ್ಗುರು ಡಾ| ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಗಳ ಅಮೃತ ಮಹೋತ್ಸವ ಹಾಗೂ ನಿರಂಜನ ಪಟ್ಟಾ ಧಿಕಾರ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜಿಸಿರುವುದು ವ್ಯಕ್ತತ್ವ ವಿಕಸನಕ್ಕೆ ಗ್ರಾಮಸ್ಥರು ಮುನ್ನುಡಿ ಬರೆದಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಬೆಂಗಳೂರ ಸಾವಯವ ಕೃಷಿ ಮಿಷನ್‌ ಅಧ್ಯಕ್ಷ ಆನಂದ ಶ್ರೀ, ವಿಜಯಪುರ ಕೃಷಿ ತಜ್ಞ ಎ.ಪಿ ಬಿರಾದಾರ ಹಾಗೂ ಬಿಳ್ಳೂರ ಗುರುಬಸವೇಶ್ವರ ವಿರಕ್ತಮಠದ ಮುರಘೇಂದ್ರ ಸ್ವಾಮೀಜಿ, ಚಿಕ್ಕೋಡಿ ಸಂಸದ ಅಣ್ಣಸಾಬ ಜೊಲ್ಲೆ ಮಾತನಾಡಿದರು.

ಶಂಕರ ಸ್ವಾಮೀಜಿ, ಡಾ| ಮಹಾಂತ ದೇವರು, ಪ್ರಭುಚನ್ನಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಾಸಕರಾದ ಮಹೇಶ ಕುಮಠಳ್ಳಿ, ಪಿ. ರಾಜೀವ, ದುರ್ಯೋಧನ ಐಹೊಳೆ,  ಶ್ರೀಶೈಲ ನಾರಗೊಂಡ, ಅಮೂಲ ನಾಯಿಕ, ಚಿದಾನಂದ ಸವದಿ, ಚಿಕ್ಕೋಡಿ ಕೃಷಿ ಇಲಾಖೆ ಉಪನಿರ್ದೇಶಕ ಎಲ್‌.ಐ. ರೂಡಗಿ ಸೇರಿದಂತೆ ಶ್ರೀಗಳು ಮತ್ತು ಗಣ್ಯರು ಉಪಸ್ಥಿತರಿದ್ದರು. ಎ.ವೈ ಗಲಗಲಿ ಸ್ವಾಗತಿಸಿದರು, ಗುರುದೇವ ಸ್ವಾಮೀಜಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next