Advertisement

Bollywood: ʼಅನಿಮಲ್‌ʼ ಅಡ್ವಾನ್ಸ್‌ ಬುಕಿಂಗ್‌ ಆರಂಭ; 2000 ದಾಟಿದ ಟಿಕೆಟ್‌ ಬೆಲೆ.!

05:09 PM Nov 25, 2023 | Team Udayavani |

ಮುಂಬಯಿ: ರಣ್ಬೀರ್‌ ಕಪೂರ್‌ ಅವರ ʼಅನಿಮಲ್‌ʼ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ. ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಅನಿಮಲ್‌ʼ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದ್ದು, ಗಮನ ಸೆಳೆದಿದೆ.

Advertisement

ತಂದೆ – ಮಗನ ಕಥೆಯೊಂದಿಗೆ ಮಾಸ್‌ ಅಂಶವನ್ನೊಳಗೊಂಡಿರುವ ʼಅನಿಮಲ್‌ʼ ನಲ್ಲಿ ಚಾಕ್ಲೇಟ್‌ ಬಾಯ್‌ ರಣ್ಬೀರ್‌ ಕಪೂರ್‌ ಇದೆಂದೂ ಕಾಣಿಸಿಕೊಳ್ಳದ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೇಲರ್‌ ರಿಲೀಸ್ ಆಗುತ್ತಿದ್ದಂತೆ ಇತ್ತ ಮುಂಗಡವಾಗಿ ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ.

ಸಂದೀಪ್‌ ವಂಗಾ ಅವರ ನಿರ್ದೇಶನ ಸಿನಿಮಾಕ್ಕಿರುವುದರಿಂದ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ. ಸಿನಿಮಾ ರಿಲೀಸ್‌ ಆಗಲು ಐದು ದಿನ ಬಾಕಿ ಇರುವುದರಿಂದ ಅಡ್ವಾನ್ಸ್‌ ಬುಕಿಂಗ್‌ ಆರಂಭವಾಗಿದೆ. ಆದರೆ ದುಬಾರಿ ಸಿಟಿಗಳಲ್ಲಿ ಟಿಕೆಟ್‌ ಬೆಲೆ ಸಾವಿರದಾಟಿದೆ.!

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಟಿಕೆಟ್ ದರಗಳು ರೂ 250 ರಿಂದ ಪ್ರಾರಂಭವಾಗಿದ್ದು, ರಿಕ್ಲೈನರ್ ಸೀಟ್‌ನಲ್ಲಿ(ಮಲಗಿಕೊಂಡು ನೋಡುವ ಸೀಟು) ಕೂತು ಸಿನಿಮಾ ನೋಡಬೇಕಾದರೆ 2200 ರೂ.ಕೊಡಬೇಕು. ಸಾಮಾನ್ಯವಾಗಿ ರಿಕ್ಲೈನರ್‌ಗಳ ಬೆಲೆಗಳು ರೂ 900 ರಿಂದ ರೂ 1800 ರ ವರೆಗೆ ಇರುತ್ತದೆ. ಇನ್ನು  ಮುಂಬೈಯಲ್ಲಿ ಕೂಡ ರಿಕ್ಲೈನರ್‌ ಸೀಟ್‌ ಗೆ  2200 ರೂ.ಬೆಲೆಯನ್ನು ನಿಗದಿಗೊಳಿಸಲಾಗಿದೆ.

ಡಿ. 1 ರಂದು ಪ್ಯಾನ್‌ ಇಂಡಿಯಾದಲ್ಲಿ ʼಅನಿಮಲ್‌ʼ ರಿಲೀಸ್‌ ಆಗಲಿದೆ. ರಣಬೀರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಮುಂತಾದವರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next