Advertisement

ಕಾಲಡಿಯಲ್ಲಿ  ಅದ್ವೈತ ಕೇಂದ್ರ: ಡಾ|ಶರ್ಮಾ

08:15 AM Feb 10, 2018 | Team Udayavani |

ಮಂಗಳೂರು: ಶಂಕರಾ ಚಾರ್ಯರ ಹುಟ್ಟೂರಾದ ಕಾಲಡಿಯಲ್ಲಿ ಅದ್ವೈತ ಕೇಂದ್ರವನ್ನು ಆರಂಭಿಸಲಾಗಿದ್ದು, ವೇದಾಂತ, ಇಂಡಾಲಜಿ, ಇಂಡಿಕ್‌ ಸೈನ್ಸ್‌ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಜ್ಞಾನ ಪರಂಪರೆಯನ್ನು ಅರಿಯುವ ಉತ್ಸಾಹ ಇರುವ ಎಲ್ಲರಿಗೂ ಇಲ್ಲಿ ಕಲಿಕೆಯ ಅವಕಾಶವಿದೆ. ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ. ಕಲಿಕೆಯ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಚಿನ್ಮಯ ಮಿಷನ್‌ ಮಂಗಳೂರು ಶಾಖೆಯ ಅಧ್ಯಕ್ಷ ಡಾ| ಎಸ್‌.ಎಂ. ಶರ್ಮಾ ಹೇಳಿದರು.

Advertisement

ಕೆನರಾ ಹೈಸ್ಕೂಲ್‌ ಅಸೋಸಿಯೇ ಶನ್‌ ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ನಡೆದ “ಏರ್ಯ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಮಾತನಾಡಿ, “ಜಗತ್ತಿ ನಲ್ಲಿರುವ ಒಳ್ಳೆಯ ವಿಷಯಗಳೆಲ್ಲ ನಮ್ಮೆಡೆಗೆ ಹರಿದು ಬರಲಿ ಎಂದು ವೇದಗಳ ಕಾಲದಲ್ಲಿಯೇ ಸಾರಿದ ನಾಡು ನಮ್ಮದು. ಅಂತಹ ಉದಾತ್ತ ಚಿಂತನೆಗಳ ದೇಶದಲ್ಲಿ ಇಂದಿನ ಪರಿಸ್ಥಿತಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ವಿಶ್ಲೇಷಿಸಿದರು.

ನಾವು ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ಬೆಳೆದಿದ್ದೇವೆಯೇ ಹೊರತು ಆಂತರಿಕವಾಗಿ ಬೆಳವಣಿಗೆ ಸಾಧ್ಯ ವಾಗಿಲ್ಲ. ಆಂತರಿಕವಾಗಿ ಸೋತಿದ್ದೇವೆ. ಮನುಷ್ಯ ಮನುಷ್ಯರನ್ನು ನಂಬುವ ಪರಿಸ್ಥಿತಿಯೇ ಇಂದು ಇಲ್ಲವಾಗಿದೆ. ಇದು ಬೇಸರದ ಸಂಗತಿ ಎಂದರು.

ಕೆನರಾ ಹೈಸ್ಕೂಲ್‌ ಅಧ್ಯಕ್ಷ ಎಸ್‌. ಎಸ್‌. ಕಾಮತ್‌ ಅಧ್ಯಕ್ಷತೆ ವಹಿಸಿದ್ದರು.  ಕೆನರಾ ಕಾಲೇಜಿನ ನಿವೃತ್ತ ಗ್ರಂಥಪಾಲಕರಾದ ಇಂದಿರಾ ಟಿ. ಅಭಿನಂದನ ಭಾಷಣ ಮಾಡಿದರು. ಪ್ರಾಂಶುಪಾಲರಾದ ಡಾ| ಕೆ.ವಿ. ಮಾಲಿನಿ, ಗೌರವ ಕಾರ್ಯದರ್ಶಿ ರಂಗನಾಥ ಭಟ್‌ ಉಪಸ್ಥಿತರಿದ್ದರು. ಡಾ| ಕಲ್ಪನಾ ಪ್ರಭು ನಿರೂಪಿಸಿದರು. ಡಾ| ಶಾಂತಲಾ ವಿಶ್ವಾಸ್‌ ಪ್ರಶಸ್ತಿಯ ವಿವರ ನೀಡಿದರು. ತಾರಾಕುಮಾರಿ ಪ್ರಶಸ್ತಿ ಪತ್ರ ವಾಚನ ಮಾಡಿದರು. ಡಾ| ಮನೋಹರ ಜೋಷಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next