Advertisement

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರ: ಶೇ. 8.23ರಷ್ಟು ಮತದಾನ, ಬಿಗಿ ಪೊಲೀಸ್ ಬಂದೋಬಸ್ತ್

01:14 PM Oct 28, 2020 | Mithun PG |

ಕಲಬುರಗಿ:  ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ ಇಂದು ನಡೆಯುತ್ತಿದ್ದು, ಕಲಬುರಗಿ ಕ್ಷೇತ್ರದಲ್ಲಿ  ಬೆಳಿಗ್ಗೆ 10 ಗಂಟೆಯವರೆಗೆ ಶೇ.8.23 ರಷ್ಟು ಮತದಾನವಾಗಿದೆ.

Advertisement

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿದ್ದು, ಮಂದಗತಿಯಲ್ಲಿ ಸಾಗಿದೆ. ಕಲಬುರ್ಗಿ ಜಿಲ್ಲೆಯ 41 ಮತಗಟ್ಟೆಗಳಲ್ಲಿ ಮತ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿ 9,529 ಮತದಾರರಿದ್ದಾರೆ. ಸಂಜೆ 5 ಗಂಟೆಗೆ ಮತದಾನ ಅಂತ್ಯಗೊಳ್ಳಲಿದೆ.

ಒಟ್ಟು ಆರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಿರೋ ಕ್ಷೇತ್ರ ಇದಾಗಿದ್ದು, ಈಶಾನ್ಯ ಕ್ಷೇತ್ರದಲ್ಲಿ 147 ಮತದಾನ ಕೇಂದ್ರ ಸ್ಥಾಪನೆ  ಮಾಡಲಾಗಿದೆ. ಇಲ್ಲಿ ಒಟ್ಟು 29,236 ಮತದಾರರಿದ್ದಾರೆ.

ಮತದಾನ ಕೇಂದ್ರಗಳ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಡಿವೈಎಸ್ಪಿ, ಸಿಪಿಐ, ಪಿ.ಎಸ್ಐ, ಪೇದೆ ಸೇರಿ 687 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Advertisement

ಕಾಂಗ್ರೆಸ್ ನ ಶರಣಪ್ಪ ಮಟ್ಟೂರ, ಬಿಜೆಪಿಯ ಶಶೀಲ್ ಜಿ. ನಮೋಶಿ, ಜೆಡಿಎಸ್ ನ ತಿಮ್ಮಯ್ಯ ಪುರ್ಲೆ, ವಾಟಾಳ್ ನಾಗರಾಜ್ ಸೇರಿ ಐವರು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next