ಹುಬ್ಬಳ್ಳಿ: ಲಿಂಗಾಯತರು ಹಿಂದೂಗಳಲ್ಲ ಎಂದು ಐಎಎಸ್ ನಿವೃತ್ತ ಅಧಿಕಾರಿ ಡಾ. ಎಸ್.ಎಂ. ಜಾಮದಾರ ಹಾಕಿರುವ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕರಿಸಿರುವ ಕೊಲ್ಲಾಪುರ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಚರ್ಚೆಗೆ ದಿನಾಂಕ, ಸ್ಥಳ ನಿಗದಿ ಮಾಡಲು ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಿಂಗಾಯತ ಸ್ವತಂತ್ರ ಧರ್ಮ ಕುರಿತಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥಸ್ವಾಮೀಜಿಯವರ ಹೇಳಿಕೆಗೆ ಡಾ.ಜಾಮದಾರ, ಲಿಂಗಾಯತರು ಹಿಂದೂಗಳಲ್ಲ ಈ ಬಗ್ಗೆ ಪೇಜಾವರ ಶ್ರೀ ಸೇರಿ ಯಾರಾದರೂ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ಸವಾಲು ಸ್ವೀಕರಿಸಿದ್ದು, ಚರ್ಚೆಗೆ ಸಿದಟಛಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಅತಂತ್ರ ಹುನ್ನಾರ:ಹಿಂದೂ ಧರ್ಮವನ್ನು ಅತಂತ್ರಗೊಳಿಸುವ ಷಡ್ಯಂತ್ರಗಳು ಹಲವು ರೂಪದಲ್ಲಿ ನಡೆಯುತ್ತಿವೆ. ಅನ್ಯ ಧರ್ಮಗಳು ಹೇಗಾದರೂ ಮಾಡಿ ಹಿಂದೂ ಧರ್ಮದ ಸಾಮರ್ಥ್ಯ ಕುಗ್ಗಿಸುವ ಯತ್ನದಲ್ಲಿ ತೊಡಗಿದ್ದು, ಇದರ ಭಾಗವಾಗಿಯೇ ಇಲ್ಲಸಲ್ಲದ ಆಸೆ, ಸೌಲಭ್ಯಗಳ ಭ್ರಮೆ ಸೃಷ್ಟಿಸಲಾಗುತ್ತದೆ. ಒಗ್ಗಟ್ಟು ಮುರಿ ಯಲು ಅನ್ಯ ಧರ್ಮಗಳು ಕೆಲ ಸಂಸ್ಥೆಗಳ ಮೂಲಕ ಹಣ ರವಾನೆ ಮಾಡುತ್ತಿದ್ದು, ಹಿಂದೂ ಧರ್ಮದಲ್ಲಿ ಗೊಂದಲ ಸೃಷ್ಟಿಸುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತಿದೆ. ಈಗಾಗಲೇ ಹಲವು ಗೊಂದಲ, ಷಡ್ಯಂತ್ರಗಳನ್ನು ರೂಪಿಸಿ ಹಿಂದೂ ಧರ್ಮದ ಅನೇಕರನ್ನು ದಾರಿ ತಪ್ಪಿಸುವ ಕಾರ್ಯ ಮಾಡಲಾಗಿದೆ. ಮತಾಂತರ ನಿರಂತರವಾಗಿದೆ. ಇದರ ಬಗ್ಗೆ ಜಾಗರೂಕತೆ ಅಗತ್ಯ ಎಂದರು.
ಧರ್ಮ-ಸಂಸ್ಕೃತಿ ಮುಖ್ಯ:ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಡೆಯುತ್ತಿರುವ ಹೋರಾಟ, ಈ ವಿಚಾರದಲ್ಲಿ ಹೊರಬೀಳುವ ಹೇಳಿಕೆಗಳು ಧರ್ಮ, ಸಂಸ್ಕೃತಿ, ಲಿಂಗಾಯತ ಸಮಾಜದ್ದಾಗಿದೆ. ಲಿಂಗಾಯತರು ಹಿಂದೂ ಧರ್ಮಕ್ಕೆ ಸೇರಿದವರು ಎಂಬುದು ಸ್ಪಷ್ಟ ನಿಲುವು ತಮ್ಮದಾಗಿದೆ. ಈ ಬಗ್ಗೆ ಡಾ. ಜಾಮದಾರ ಸೇರಿ ಯಾರೇ ಚರ್ಚೆಗೆ ಬಂದರೂ ತಾವು ಸಿದ್ಧ ಎಂದು ಸ್ವಾಮೀಜಿ ತಿಳಿಸಿದ್ದಾರೆ.