Advertisement
ಸೆ.24ರಂದು ರಾಜ್ಯ ಸರ್ಕಾರ ಸ್ಮಾರಕಗಳನ್ನು ದತ್ತು ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಹೊಂದಿರುವ ಖಾಸಗಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಸ್ಮಾರಕಗಳಿಗೆ ಮೂಲ ಸೌಕರ್ಯ ಹಾಗೂ ಅವುಗಳನ್ನು ಉತ್ತಮ ಪ್ರವಾಸಿತಾಣವಾಗಿಸುವ ಉದ್ದೇಶದೊಂದಿಗೆ ಸ್ಮಾರಕಗಳ ದತ್ತು ಯೋಜನೆಯನ್ನು ಪರಿಚಯಿಸಿದೆ.
Related Articles
Advertisement
ಆ ದಿಸೆಯಲ್ಲಿ ಸ್ಮಾರಕ ಮಿತ್ರವು ನೋಡಲ್ ಇಲಾಖೆಯೊಂದಿಗೆ ಸಮಾಲೋಚಿಸಿ ಸ್ಮಾರಕ ಅಭಿವೃದ್ಧಿಗೆ ಮುಂದಾಗಲಿದೆ. ಸ್ಮಾರಕ ಸಂರಕ್ಷಣೆಗೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದು ಪ್ರಮುಖವಾಗಿದೆ. ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್ ನಿರ್ಮಾ ಣ, ಉದ್ಯಾನ ನಿರ್ವ ಹಣೆ, ಅಂತರ್ಜಾಲ ಸಂಪರ್ಕ, ಸಿಸಿಟೀವಿ ಅಳವಡಿ ಸುವುದು, ಅಗತ್ಯ ಪೀಠೊಪಕರಣ ಗಳನ್ನು ಇಡುವುದು, ಧ್ವನಿ ಬೆಳಕು ಕಾರ್ಯಕ್ರಮದ ಅನುಷ್ಠಾನಕ್ಕೆ ಕ್ರಮ ವಹಿಸಬಹುದಾಗಿದೆ.
ಅಧ್ಯಯನ ಕೇಂದ್ರವನ್ನೂ ಮಾಡಬಹುದು. ದತ್ತು ಪಡೆಯಲು ಮುಂದಾಗುವ ಸಂಘ-ಸಂಸ್ಥೆಗಳು ದಾಸ್ತಾ ವೇಜನ್ನು ಪರಿಶೀಲಿಸಿ ಅನುಮೋದನೆ ನೀಡಲು ಪ್ರವಾಸೊ àದ್ಯಮ ಇಲಾ ಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಮಾರಕ ದತ್ತುಗಾಗಿ ಅಧಿಕಾರ ಸಮಿತಿ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಲಿದೆ. ಇನ್ನು ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡುವುದು ಮಾತ್ರ ದತ್ತು ಪಡೆದವರ ಜವಾಬ್ದಾರಿಯಾಗಿದ್ದು ಸ್ಮಾರಕಗಳ ಮಾಲಿಕತ್ವ ಸರ್ಕಾರವೇ ಹೊಂದಿರುತ್ತದೆ. ಈ ದತ್ತು ಸೀಮಿತ ಅವಧಿಗೆ ಮಾತ್ರ ನಿಗದಿಯಾಗಿರುತ್ತದೆ.
ಜಿಲ್ಲೆಯಲ್ಲಿ 6 ಸ್ಮಾರಕಗಳು : ಜಿಲ್ಲೆಯ 6 ಸ್ಮಾರಕಗಳ ಪೈಕಿ ಎರಡು ಸ್ಮಾರಕಗಳನ್ನು ಮೊದಲ ಹಂತದಲ್ಲಿ ದತ್ತು ನೀಡುವುದಕ್ಕೆ ಪುರಾತತ್ವ ಮತ್ತು ಪಾರಂಪರಿಕ ಇಲಾಖೆ ಮುಂದಾಗಿದೆ. ಚನ್ನಪಟ್ಟಣ ತಾಲೂಕಿನ ದೊಡ್ಡ ಮ ಳೂರು ಗ್ರಾಮದ ಅಪ್ರಮೇಯಸ್ವಾಮಿ ದೇವಾ ಲಯ ಮತ್ತು ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ರಾಮದೇವರು ಮತ್ತು ಸೀತಾದೇವಿ ದೇವಾ ಲಯದ ದತ್ತುಗೆ ಇಓಪಿ ಸಿದ್ದಪಡಿಸಿದ್ದು, ಜಾಗತಿಕವಾಗಿ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆಯುವುದಕ್ಕೆ ಟೆಂಡರ್ ಕರೆಯಲಾಗಿದೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ: ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಅನುಷ್ಠಾನ ಮತ್ತು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಮಾರಕ ಸಮಿತಿ ರಚಿಸಲಾಗುತ್ತದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ, ಸ್ಮಾರಕಗಳ ಬಳಿ ಪ್ರವಾಸೋದ್ಯಮ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯಡಿ ರಾಜ್ಯದ ಕಲೆ, ಸಂಸ್ಥೆ
– ಸು.ನಾ.ನಂದಕುಮಾರ್