ಬೆಂಗಳೂರು: ನಟ ದರ್ಶನ್ ಅವರ ಒಂದೇ ಒಂದು ಮನವಿಗೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸ್ಪಂದಿಸುತ್ತಿದ್ದಾರೆ. ಈ ಮೂಲಕ ಒಂದು ಉತ್ತಮ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಶನಿವಾರ ನಟ ದರ್ಶನ್ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದು, ಸಹಕರಿಸುವಂತೆ ಮನವಿ ಮಾಡಿದ್ದರು. ದರ್ಶನ್ ಮನವಿಗೆ ರಾಜ್ಯಾದ್ಯಂತ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಅವರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಮೃಗಾಯಲದಿಂದ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ದರ್ಶನ್ ಕೂಡಾ ತಮ್ಮ ಮನವಿಗೆ ಸ್ಪಂದಿಸಿದವರಿಗೆ ಧನ್ಯವಾದ ಹೇಳಿದ್ದಾರೆ. ಪ್ರಾಣಿ ದತ್ತು ಪಡೆದವರಿಗೆ ನೀಡಲಾಗುವ ಸರ್ಟಿಫಿಕೆಟ್ ಅನ್ನು ಟ್ವೀಟರ್ ನಲ್ಲಿ ಹಾಕಿ ದರ್ಶನ್ ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ.
ಸಿಂಹಕ್ಕೆ ದರ್ಶನ್ ಹೆಸರು:
ನಿರ್ಮಾಪಕಿ ಶೈಲಜಾ ನಾಗ್ ಮೈಸೂರಿನ ಮೃಗಾಲಯದಲ್ಲಿರುವ “ದರ್ಶನ್’ ಹೆಸರಿನ ಸಿಂಹವೊಂದನ್ನು ದತ್ತು ಪಡೆದಿದ್ದಾರೆ.
ಇದನ್ನೂ ಓದಿ:ಟೆಲಿಗ್ರಾಂ ವಾಟ್ಸ್ಯಾಪ್ ಗಿಂತ ಹೇಗೆ ಭಿನ್ನ.? ಟೆಲಿಗ್ರಾಂ ಬಗ್ಗೆ ನಿಮಗೆಷ್ಟು ಗೊತ್ತು..?
ಅಷ್ಟಕ್ಕೂ ದರ್ಶನ್ ಹೇಳಿದ್ದೇನು?:
ದರ್ಶನ್ ಶನಿವಾರ ವಿಡಿಯೋವೊಂದರಲ್ಲಿ, ಒಂದೂವರೆ ವರ್ಷದಿಂದ ಕೊರೊನಾ ನಮ್ಮೆಲ್ಲರಿಗೂ ತೊಂದರೆ ಕೊಟ್ಟಿದೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಇದರಿಂದ ಪ್ರಾಣಿಗಳಿಗೂ ತೊಂದರೆಯಾಗಿದೆ. ರಾಜ್ಯದಲ್ಲಿ 9 ಮೃಗಾಲಯಗಳಿದ್ದು, ಇವೆಲ್ಲವೂ ಪ್ರವಾಸಿಗರ ಟಿಕೆಟ್‌ನಿಂದ ನಿರ್ವಹಣೆಯಾಗುತ್ತಿದ್ದವು. ಆದರೆ, ಕೊರೊನಾ ಅವೆಲ್ಲದಕ್ಕೂ ಬ್ರೇಕ್ ಹಾಕಿ, ಸಂಕಷ್ಟಕ್ಕೆ ದೂಡಿದೆ. ಹಾಗಾಗಿ, ನಾವೆಲ್ಲರೂ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಒಳ್ಳೆಯ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದರು.