Advertisement

ಉದ್ಯೋಗದಲ್ಲಿ ಮೌಲ್ಯಯುತ ಗುಣ ಅಳವಡಿಸಿಕೊಳ್ಳಿ

07:12 PM Aug 29, 2020 | Suhan S |

ಶಿರಸಿ: ಕಲಿತ ಮೌಲ್ಯಯುತ ಗುಣಗಳನ್ನು ಉದ್ಯೋಗದಲ್ಲಿ ರೂಡಿಸಿಕೊಂಡಾಗ ವಿದ್ಯಾರ್ಜನೆ ಸಾರ್ಥಕವಾಗುತ್ತದೆ ಎಂದು ಎಂಇಎಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹೇಳಿದರು.

Advertisement

ಅವರು ಇಲ್ಲಿನ ಸ್ಕೊಡ್‌ವೆಸ್‌ ಸಂಸ್ಥೆ, ಸ್ವದೇಶ್‌ ಫೌಂಡೇಶನ್‌ ಹಾಗೂ ಎಂಇಎಸ್‌ ಇನ್ಸ್ಟಿಟೂಟ್‌ ಆಫ್‌ ನರ್ಸಿಂಗ್‌ ಸಹಯೋಗದಲ್ಲಿ ಎಚ್‌ ಎಸ್‌ಬಿಸಿ-ಜೀವನಕ್ಕಾಗಿ ಕೌಶಲ್ಯ ಯೋಜನೆಯಡಿ ರೀಟೇಲ್‌ ಅಸಿಟ್ಟೆಂಟ್‌ ವಲಯದಲ್ಲಿ ಒಂದು ತಿಂಗಳ ವಸತಿಯುತ ತರಬೇತಿ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂಉದ್ಯೋಗ ವಿನಿಮಯ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೌಶಲ್ಯಾಭಿವೃದ್ಧಿಯಲ್ಲಿ ಕಲಿತ ಜ್ಞಾನದಿಂದ ಔದ್ಯೋಗಿಕ ಕೇತ್ರದಲ್ಲಿ ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿ ಉದ್ಯೋಗಿಯಾಗಬೇಕು ಎಂದರು. ಲಯನ್ಸ್‌ ಅಧ್ಯಕ್ಷ ಕೆ.ಬಿ. ಲೊಕೇಶ ಹೆಗಡೆ, ವಿದ್ಯೆ ನೀಡಿದ ಸಂಸ್ಥೆಗೆ ಸದಾ ಸ್ಮರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು, ಉದ್ಯೋಗಿಗಳಾಗಿ ಉನ್ನತ ಹಂತ ತಲುಪಿದಂತೆ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಸ್ಕೊಡ್‌ವೇಸ್‌ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ವೆಂಕಟೇಶ ನಾಯ್ಕ, ಜಿಲ್ಲೆಯ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೌಶಲ್ಯಾಭಿವೃದ್ಧಿಯ ಅವಶ್ಯಕತೆಯನ್ನು ಮನಗೊಂಡು ಕಳೆದ 4 ವರ್ಷದಿಂದ ವಿವಿಧ ಉದ್ಯೋಗವಕಾಶ ಇರುವ ವಲಯಗಳಲ್ಲಿ ತರಬೇತಿಯನ್ನು ನೀಡಿ ಉದ್ಯೋಗಿಗಳನ್ನಾಗಿಸುವ ಕೆಲಸ ಮಾಡುತ್ತಿದ್ದೇವೆ. ಇಂತಹ ಉದ್ದೇಶಕ್ಕೆ ಎಂಇಎಸ್‌ ನಂತಹ ಸಂಸ್ಥೆ ಕೂಡ ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿ ಸಹಕಾರ ನೀಡುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಎಂಇಎಸ್‌ ಇನ್ಸ್ಟಿಟೂಟ್‌ ಆಫ್‌ ನರ್ಸಿಂಗ್‌ ಪ್ರಾಂಶುಪಾಲ ಬೇಬಿ ನಾಯಕ್‌, ಸ್ಕೊಡ್‌ವೆಸ್‌ ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್‌ ರವಿ, ಉದ್ಯೋಗ ವಿನಿಮಯ ಕೇಂದ್ರದ ಆಪ್ತ ಸಮಾಲೋಚಕ ಕಿರಣ್‌ ಭಟ್‌, ಸಂಸ್ಥೆಯ ಸಿಬ್ಬಂದಿಗಳಾದ ಶೆರ್ಲಿನ್‌ ಫರ್ನಾಂಡಿಸ್‌, ರಾಜೇಶ್ವರಿ ಭಟ್ಟ್ ಉಪಸ್ಥಿತರಿದ್ದರು.

Advertisement

ಸಂಸ್ಥೆಯ ಕಾರ್ಯಕ್ರಮಾಧಿಕಾರಿ ರಿಯಾಜ್‌ ಸಾಗರ ಸ್ವಾಗತಿಸಿದರು. ಶ್ರೀನಿವಾಸ ನಾಯ್ಕ ವಂದಿಸಿದರು. ಉಮೇಶ ಮರಾಠಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next