Advertisement

ನಿವೇದಿತಾರ ಚಿಂತನೆ ಅಳವಡಿಸಿಕೊಳ್ಳಿ: ವಿಜಯಾನಂದ ಸರಸ್ವತಿ ಶ್ರೀ

03:06 PM Aug 18, 2017 | |

ಶಿವಮೊಗ್ಗ: ಸ್ವಾಮಿ ವಿವೇಕಾನಂದರ ಹಾಗೂ ಅಕ್ಕ ನಿವೇದಿತಾರ ಚಿಂತನೆಗಳನ್ನು ಭಾರತದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ನೀಡಿದ್ದರೆ ದೇಶ ಎಂದೋ ವಿಶ್ವಗುರು ಆಗುತ್ತಿತ್ತು ಎಂದು ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿಜಯಾನಂದ ಸರಸ್ವತಿ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಯುವ ಬ್ರಿಗೇಡ್‌ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವಿವೇಕಾನಂದರ ಸಾಹಿತ್ಯದಿಂದ ಜೀವನದಲ್ಲಿ ಆಗಾಧ ಬದಲಾವಣೆಯಾಗುತ್ತದೆ. ಆದರೆ
ಅಂತಹ ಚಿಂತನೆಗಳನ್ನು ಯುವ ಪೀಳಿಗೆಗೆ ನೀಡುವಲ್ಲಿ ನಾವು ಎಡವಿದ್ದೇವೆ. ಇನ್ನಾದರೂ ಆ ಕೆಲಸವಾಗಬೇಕು. ವಿವೇಕಾನಂದರು ಹಾಗೂ ನಿವೇದಿತಾರ ಚಿಂತನೆಗಳು ಸಕಾರಾತ್ಮಕವಾದವು. ಎಂತಹ ಅಸಹಾಯಕನೂ ಈ ಚಿಂತನೆಗಳನ್ನು ಓದಿದರೆ ಹೊಸರೂಪ ಪಡೆಯುತ್ತಾನೆ. ಅಂತಹ ಶಕ್ತಿ, ಸ್ಫೂರ್ತಿ ಅವುಗಳಲ್ಲಿದೆ ಎಂದರು.

ನೂರು ವರ್ಷಗಳ ನಂತರ ವಿವೇಕಾನಂದರ ಚಿಂತನೆಗಳು ಸ್ಫೂರ್ತಿಯಾಗಿ ಹೊರಹೊಮ್ಮುತ್ತವೆ ಎಂದು ನಿವೇದಿತಾ ಹೇಳಿದ್ದರು. ಅದರಂತೆ ಆ ಚಿಂತನೆಗಳ ಅಧ್ಯಯನ ಮಾಡುವವರು ಹೆಚ್ಚುತ್ತಿದ್ದಾರೆ. ಭಾರತ ಅನಾಗರೀಕರ ದೇಶ ಎಂದು ತಿಳಿದಿದ್ದ ಜಗತ್ತಿಗೆ ಚಿಕಾಗೋ ಭಾಷಣದ ಮೂಲಕ ಕಣ್ಣು ತೆರೆಸಿದವರು ವಿವೇಕಾನಂದರು. ಗುಲಾಮಗಿರಿಯ ಚಿಂತನೆಯನ್ನು ಹೋಗಲಾಡಿಸಿದರು. ಸ್ತ್ರಿಶಕ್ತಿ ಜಾಗ್ರತಿಗಾಗಿ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ವಿವೇಕಾನಂದರ ಕೊಡುಗೆಗಳನ್ನು ಅವಲೋಕಿಸಿದರು.ವಿವೇಕಾನಂದರ ನಿಧನದ ನಂತರ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಅದನ್ನು ಎಲ್ಲರಿಗೂ ತಲುಪಿಸುವ ಮಹತ್ವದ ಕೆಲಸವನ್ನು ಮಾಡಿದವರು ಅಕ್ಕ ನಿವೇದಿತಾ. ಅವರು ಭಾರತಕ್ಕಾಗಿಯೇ ಜೀವಿಸಿದ ಮಹಿಳೆ ಎಂದರು.
ಸಾಹಿತ್ಯ ಮನುಷ್ಯನಿಗೆ ಗೊತ್ತಿಲ್ಲದೆಯೇ ಅವರ ಮೇಲೆ ಬೆಳಕು ಚೆಲ್ಲುತ್ತದೆ. ಜ್ಞಾನ ಜ್ಯೋತಿಯನ್ನು ಬೆಳಗಿಸುತ್ತದೆ. ಇಂತಹ ಜ್ಞಾನ ಬೆಳಗಿಸುವ ಸಾಹಿತ್ಯ ಸಮ್ಮೇಳನವನ್ನು ಯುವ ಬ್ರಿಗೇಡ್‌ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಸಮ್ಮೇಳನಾಧ್ಯಕ್ಷ ಡಾ| ಕೆ.ಎಸ್‌. ನಾರಾಯಣಚಾರ್ಯ ಮಾತನಾಡಿ, ನಮ್ಮನ್ನಾಳಿದವರು 70 ವರ್ಷ ದೇಶವನ್ನು ಹಾಳು ಮಾಡಿದರು. ನಮ್ಮ ಸಂಸ್ಕೃತಿಯ ಮೂಲವನ್ನೇದಮನ ಮಾಡಿದರು ಎಂದರು. ದೇಶದ್ರೋಹಿ ಸಾಹಿತಿಗಳು, ಜಾತಿ, ಧರ್ಮಕ್ಕೆ ಸೀಮಿತವಾಗಿ ಸಾಹಿತ್ಯ ನೀಡಿದವರಿಂದ ದೇಶ ದುರ್ಬಲವಾಯಿತು. ಆದರೆ ಈಗ ದೇಶ ಕಟ್ಟುವ ಕೆಲಸವನ್ನು ಸಾಹಿತ್ಯದಿಂದಲೇ ಮಾಡಬೇಕೆಂಬ ಉದ್ದೇಶದಿಂದ ಯಂಗ್‌ ಬ್ರಿಗೇಡ್‌ ಹೊರಟಿದೆ.
ಇದಕ್ಕೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಗೆ ಅಗತ್ಯವಿದೆ ಎಂದು ಹೇಳಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸರಸ್ವತಿ, ಯುವ ಬ್ರಿಗೇಡ್‌ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಡಿ.ಎಸ್‌. ಅರುಣ್‌, ಡಾ| ಮಹಾದೇವಸ್ವಾಮಿ , ಪತ್ರಕರ್ತ ಶ್ರೀನಿವಾಸನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next