Advertisement

ಯೋಜನಾ ಬದ್ಧವಾಗಿ ವೃತ್ತಿ ಅಳವಡಿಸಿಕೊಳ್ಳಿ

02:55 PM Jun 18, 2018 | |

ಹಗರಿಬೊಮ್ಮನಹಳ್ಳಿ: ಸಹಕಾರಿ ಸಂಘಗಳ ಸಹಾಯವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸದೃಢತೆಯನ್ನು ಹೊಂದಿ ಎಂದು ಸೋಮಶೇಖರ ದೇವರು ಹೇಳಿದರು.

Advertisement

ತಾಲೂಕಿನ ಕಡ್ಲಬಾಳು ಗ್ರಾಮದ ಗವಿಸಿದ್ದೇಶ್ವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಡೆದ ಸೋಲಾರ್‌ ಆಧಾರಿತ ಸ್ವಉದ್ಯೋಗ ಘಟಕದ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಕೆಲಸವನ್ನು ಯೋಜನಬದ್ಧವಾಗಿ ನಿರಂತರ ಶ್ರಮದಿಂದ ಮಾಡಿದರೆ ನಷ್ಟ ಅನುಭವಿಸುವುದಿಲ್ಲ. ಪ್ರಾರಂಭದಲ್ಲಿ ಕಡಿಮೆ ಲಾಭವೆನಿಸಿದರೂ ನಂತರ ಅದರ ಲಾಭ ಹೆಚ್ಚುತ್ತಾ ಹೋಗುತ್ತದೆ. ಜೊತೆಗೆ ವೃತ್ತಿ ಅನುಭವ ಹೊಸ ಯೋಜನೆಗಳಿಗೆ ದಾರಿ ಹುಡುಕಿಕೊಡುತ್ತದೆ. ಪ್ರತಿಯೊಬ್ಬರು ನಿರಂತರ ಕೆಲಸದಲ್ಲಿ ತೊಡಗಿದರೆ
ದುಶ್ಚ ಆಲೋಚನೆಗಳಿಂದ ದೂರವಾಗಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ. ಈಗೀನ ಸ್ಪರ್ಧಾತ್ಮಕ ಯುಗದಲ್ಲಿ ಸಮಯಕ್ಕೆ ಅತ್ಯಮೂಲ್ಯ ಬೆಲೆ ಕೊಡಬೇಕು.

ಧರ್ಮಸ್ಥಳ  ಗ್ರಾಮಾಭಿವೃದ್ಧಿಯೋಜನೆ ತಾಲೂಕಿನಾದ್ಯಂತ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು, ಸಂಘದ ಮಹಿಳೆಯರು ಆರ್ಥಿಕ ಹಿಡಿತ ಸಾಧಿಸಿ ಕುಟುಂಬಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.

ಸೋಲಾರ್‌ ಪ್ರಾತ್ಯಕ್ಷಿಕೆ ವೀಕ್ಷಿಸಿದ ನಂತರ ಯಾವ ರೀತಿ ನೀವು ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಮರ್ಪಕ ಯೋಜನಾ ವರದಿ ತಯಾರಿಸಿಕೊಂಡು ಅಳವಡಿಸಿಕೊಳ್ಳಬೇಕೆಂದರು.

Advertisement

ಸೋಲಾರ್‌ ಮೂಲಕ ರೊಟ್ಟಿ ತಯಾರು ಮಾಡುವ ಮಿಷನ್‌, ಟೈಲರಿಂಗ್‌ ಮಿಷನ್‌, ಜೆರಾಕ್ಸ್‌ ಮಿಷನ್‌ಗಳ ಪ್ರಾತ್ಯಕ್ಷಿಕೆಯನ್ನು ಸಂಘದ 60 ಜನರಿಗೆ ತೋರಿಸಲಾಯಿತು. ಇದರಲ್ಲಿ 25 ಜನ ಫಲಾನುಭವಿಗಳು ಆಸಕ್ತಿ ಹೊಂದಿದ್ದು ವಿವಿಧ ರೀತಿಯ ಸೋಲಾರ್‌ ಅಳವಡಿಕೆ ಮಾಡಿಕೊಂಡು ಸ್ವಉದ್ಯೋಗ ರೂಪಿಸಿಕೊಳ್ಳುವರು.

ಸೋಲಾರ್‌ ಅಳವಡಿಸಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಪ್ರಗತಿನಿಧಿಯನ್ನು ನೀಡಲಾಗುವುದು.
ಒಂದು ಕುಟುಂಬಕ್ಕೆ ಕನಿಷ್ಠ 50 ಸಾವಿರ ಸಾಲ ನೀಡಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯ ಕೃಷಿ ಮೇಲ್ವಿಚಾರಕ ಅರುಣ್‌ ತಿಳಿಸಿದರು. ಅಲ್ಲಾಭಕ್ಷಿ, ಲಿಂಗರಾಜ ಪ್ರಾತ್ಯಕ್ಷಿಕೆ ತೋರಿಸಿದರು.
ಯೋಜನಾಧಿಕಾರಿ ಸಂಜೀವಗೌಡ ಮಾತನಾಡಿದರು. ಸೆಲ್ಕೋ ಸೋಲಾರ್‌ ಕಂಪನಿ ವ್ಯವಸ್ಥಾಪಕ
ಪ್ರಕಾಶ್‌, ಕೇದಾರಸ್ವಾಮಿ, ಅಂಜಿನಪ್ಪ, ಯೋಜನೆಯ ಸೇವಾಪ್ರತಿನಿಧಿ ಸರ್ವಮಂಗಳ, ಸಂಘದ
ಪ್ರತಿನಿಧಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next