Advertisement

ಆಳಂದ: ಕೋವಿಡ್ ಲಸಿಕೆ ಪಡೆಯಲು ಜನರ ನಿರುತ್ಸಾಹ

06:51 PM Apr 12, 2021 | Team Udayavani |

ಆಳಂದ: ಕೋವಿಡ್ 2ನೇ ಅಲೆಗೆ ನಿನ್ನೆ (ಶನಿವಾರ), ಒಂದೇ ದಿನದಲ್ಲಿ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸುಮಾರು 49 ಮಂದಿಗೆ ಕೋವಿಡ್ ಸೋಂಕು
ದೃಢಪಟ್ಟದೆ, ಅಲ್ಲದೆ ಸೋಂಕಿಗೆ ತುತ್ತಾಗಿ ಶನಿವಾರ ಓರ್ವ ಮಹಿಳೆ ಹಾಗೂ ಪುರುಷ ಮೃತಪಟ್ಟ ಬಗ್ಗೆ ವರದಿಯಾಗಿದೆ. ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಖಜೂರಿ ವಲಯದ ಆಳಂಗಾ ಗ್ರಾಮದಲ್ಲಿ ನಿನ್ನೆ ಬರೋಬ್ಬರಿ 22 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಗ್ರಾಮದ 65 ವರ್ಷ ಮಹಿಳೆ ಉಮರಗಾದ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಬಲಿಯಾಗಿದ್ದಾರೆ.

Advertisement

ಅಲ್ಲದೆ ದರ್ಗಾಶಿರೂರ ಗ್ರಾಮದಲ್ಲಿ 45 ವರ್ಷದ ಪುರುಷನೋರ್ವ ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ಎದೆ ಎದೆನೋವಿಗೆ ಚಿಕಿತ್ಸೆಗೊಳಗಾದ ಮೇಲೆ ಮೃತಪಟ್ಟಿದ್ದು, ನಂತರ ಪಾಸಿಟಿವ್‌ ವರದಿ ಬಂದಿದೆ ಹೀಗಾಗಿ ಸಾವಿನ ಕಾರಣ ಸ್ಪಷ್ಟತೆ  ಹೊರಬೀಳಬೇಕಾಗಿದೆ. ಇದರಿಂದಾಗಿ 2ನೇ ಅಲೆಯಲ್ಲಿ ಪಟ್ಟಣ ಸೇರಿ ಗ್ರಾಮೀಣದಲ್ಲಿ ಮೂವರು ಮೃತಪಟ್ಟಂತಾಗಿದೆ.

ತಾಲೂಕಿನ ಇನ್ನೂಳಿದ ಗ್ರಾಮದ ಅಂಬಲಗಾ 9, ಬೆಳಮಗಿ 1, ಬೋಧನ 1, ಬೊಮ್ಮನಳ್ಳಿ 2, ಮಾದನಹಿಪ್ಪರಗಾ 1, ದರ್ಗಾಶಿರೂರ 2, ಕಡಗಂಚಿ 2, ತಡೋಳಾ 1, ಚಿಂಚೋಳಿ ಕೆ. 1, ಆಳಂದ ಪಟ್ಟಣ 3, ಕಮಲಾನಗರ 1, ವಿ.ಕೆ.ಸಲಗರ 1, ಹಡಲಗಿ 2 ಸೇರಿ ಒಟ್ಟು 49 ಮಂದಿಗೆ ಶನಿವಾರ ಕೋವಿಡ್‌-19 ಸೋಂಕು ಆವರಿಸಿದ ಬಗ್ಗೆ ಆರೋಗ್ಯ ಇಲಾಖೆ ದೃಢಪಡಿಸಿದೆ. ಇನ್ನೂ ಹಂತ, ಹಂತವಾಗಿ ತಪಾಸಣೆ ಕಾರ್ಯ ಮುಂದುವರಿದರೆ ಸಂಖ್ಯೆ ಹೆಚ್ಚುವ ಸಾಧ್ಯತೆ ಅಲ್ಲಗಳೆಯುವಂತ್ತಿಲ್ಲ.

ಇಷ್ಟೇಯಲ್ಲ ಆದರೂ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಏನೆಲ್ಲ ಪ್ರಯತ್ನ ನಡೆಸಿದರು ಸಹ ಪ್ರಕರಣಗಳು ಕದ್ದುಮುಚ್ಚಿ ಉಲ್ಬಣಗೊಳ್ಳತೊಡಗಿದ್ದು, ಗಡಿ ಭಾಗದಲ್ಲಿ ಆತಂಕ ಮೂಡಿಸ ತೊಡಗಿದೆ. ಆದರೆ ಜನರು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ವೈರಸ್‌ ನಿಯಂತ್ರಣಕ್ಕಾಗಿಯೇ 45 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ತಾಲೂಕಿನ ಎಲ್ಲ ಪ್ರಾಥಮಿಕ, ಉಪ ಕೇಂದ್ರಗಳು ಸಾಲದಕ್ಕೆ ಹಳ್ಳಿಯ ಮನೆಗಳಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಕೊರೊನಾ ಲಸಿಕೆ ಹಾಕಲು ಮುಂದಾದರು ಸಹಿತ ಸಾರ್ವಜನಿಕರು ಲಸಿಕಾಕರಣಕ್ಕೆ ನಿರುತ್ಸಾಹ ಕಂಡು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪುರಸಭೆ ಹಾಗೂ ಗ್ರಾಮೀಣ ಭಾಗದಲ್ಲಿನ ಗ್ರಾಪಂ ಆಡಳಿತ  ಮಂಡಳಿಯು ಲಸಿಕೆ ಪಡೆಯುವಂತೆ ಜನರಲ್ಲಿ ಅರಿವು
ಮೂಡಿಸಲು ಸಮರ್ಪಕ ಕಾರ್ಯನಿರ್ವಹಿಸಲು ಮುಂದಾಗಬೇಕಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

Advertisement

ಎಲ್ಲಡೆ ಲಸಿಕೆ ಲಭ್ಯ:
ತಾಲೂಕಿನ ಪ್ರಾಥಮಿಕ ಆರೋಗ ಕೇಂದ್ರಗಳು 17, ಸಮುದಾಯ ಆರೋಗ್ಯ ಕೇಂದ್ರ 3, ನಗರ ಆರೋಗ್ಯ ಕೇಂದ್ರ 1, ಮತ್ತು ಸಾರ್ವಜನಿಕ ಆಸ್ಪತ್ರೆ ಆಳಂದ ಹಾಗೂ ಗ್ರಾಮೀಣ ಭಾಗದ ಉಪ ಕೇಂದ್ರ ಹಾಗೂ ಅದರ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲೂ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ. ಆದರೆ ಜನರ ತೋರುವ ಸಭಾಗಿತ್ವದ ಕೊರತೆಯಿದೆ ಎನ್ನಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಜನರು ಒಟ್ಟು ಜನಸಂಖ್ಯೆಯ ಶೇ.20ರಷ್ಟು ಇದ್ದು, 70 ಸಾವಿರ ಜನಸಂಖ್ಯೆ ಲೆಕ್ಕದಲ್ಲಿ 18 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇನ್ನೂ ಗುರಿ ಬಹಳಷ್ಟಿದೆ. ಈ ಕೆಲಸ ಮಾಡಿ ಮುಗಿಸಬಹುದಾಗಿತ್ತು. ಆದರೆ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂಬ ಆರೋಗ್ಯ ಇಲಾಖೆಯ ಗಂಭೀರವಾಗಿ ವಾದಿಸುತ್ತಿದೆ.

ಆರೋಗ್ಯಾಧಿಕಾರಿಗಳು ಗುಡುಗು: ಜನತೆಗೆ ಲಸಿಕೆ ಮಹತ್ವ ಗೊತ್ತಾಗುತ್ತಿಲ್ಲ. ಹೋಬಳಿ ಕೇಂದ್ರ ನಿಂಬರಗಾ, ಮಾದನಹಿಪ್ಪರಗಾ ನರೋಣಾ ವಿಶೇಷವಾಗಿ
ಆಳಂದನಲೂ ಜನರ ನಿರುತ್ಸಾಹ ತೋರುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯುವಂತೆ ಸರ್ಕಾರ ಹೇಳಿದರು. ಮೇಲಾಗಿ ಆರೋಗ್ಯ ಇಲಾಖೆಯ
ಸಿಬ್ಬಂದಿಎಲ್ಲಾ ಹಳ್ಳಿಗಳ ಮನೆ, ಮನೆಗೆ ಹೋಗಿ ಲಸಿಕೆ ಪಡೆಯುವಂತೆ ಕೇಳಿಕೊಂಡರು ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ. ಲಸಿಕೆ ಪಡೆದರೆ ಶೇ 70-80ರಷ್ಟು
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ
ಹೇಳಿದರು.

ಕೋವಿಡ್ ಲಸಿಕೆ ವೈಜ್ಞಾನಿಕ
ಕೋವಿಡ್‌-19 ಲಸಿಕಾಕರಣವೂ ಸಾರ್ವಜನಿಕರು ವೈಜ್ಞಾನಿಕವಾಗಿ ಪಡೆದುಕೊಳ್ಳುವುದು ಅವಶ್ಯಕತೆ ಇದೆ. ಲಸಿಕಾಕರಣಕ್ಕೆ ರಾಜಕೀಯ ಬಣ್ಣಬಳೆಯುವುದು ಸರಿಯಲ್ಲ. ಲಸಿಕೆ ಹಾಕಿದ ಮೇಲೆ ಸೋಂಕು ತಗುಲಿದರೆ ಸಾವಿನ ಉದಾಹರಣೆ ಇಲ್ಲ. ಲಸಿಕೆ ಎಲ್ಲರು ಕಡ್ಡಾಯವಾಗಿ ಪಡೆದುಕೊಳ್ಳಲು ಮುಂದಾಗಬೇಕು. ಸರ್ಕಾರ ವಿಧಿ ಸಿದ 45 ವಯೋಮಿತಿ 20ಕ್ಕೆ ಇಳಿಕೆ ಮಾಡಿ ಎಲ್ಲರಿಗೂ ಹಾಕಬೇಕು. ವಿಶ್ವದಲ್ಲೇ ವೈರಸ್‌ ಭಾರತ 3ನೇ ಸ್ಥಾನದಲ್ಲಿದೆ. ಇದರ ಮುಕ್ತಗೊಳಿಸಲು ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದೆ. ಲಸಿಕೆಯಿಂದ ಆತಂಕಬೇಡ, ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಲ್ಲ ನಿಯಮಗಳು ಪಾಲನೆ ಅಗತ್ಯವಾಗಿದೆ. ಲಸಿಕಾ ಹಾಕಿಕೊಂಡ ಮೇಲೂ ನಿರ್ಲಕ್ಷಿಸದೆ ಆಗಾಗ ಆಟಿಪಿಸಿಆರ್‌ ಸೆಟ್‌ ತಪಾಸಣೆ ಮಾಡಿಕೊಳ್ಳುವುದು ಅಗತ್ಯ. ನಾನು ಸಹ ಲಸಿಕೆ ಪಡೆದುಕೊಂಡಿದ್ದೇನೆ.
ರಮೇಶ ಲೋಹಾರ, ಸೋಂಕಿನಿಂದ ಗುಣಮುಖರಾದವರು.

*ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next