Advertisement

ಹೊಸ ಪಠ್ಯಕ್ರಮಕ್ಕೆ ಹೊಂದಿಕೊಳ್ಳುವುದು ಅಗತ್ಯ

04:50 PM Apr 09, 2018 | Team Udayavani |

ಶಿವಮೊಗ್ಗ: ಹೊಸ ಪಠ್ಯಕ್ರಮಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೊಂದಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗೀತಾ ಹೇಳಿದರು. ನಗರದ ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಪಠ್ಯಕ್ರಮ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಶೈಕ್ಷಣಿಕ ಸುಧಾರಣೆಗಾಗಿ ಪಠ್ಯಕ್ರಮದಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡಲಾಗುತ್ತದೆ. ಆಗ ಒಂದಿಷ್ಟು ಗೊಂದಲ ಆಗುವುದು ಸಹಜ. ಆದರೆ ಈ ಬಗ್ಗೆ ಮಾಹಿತಿ ಕಾರ್ಯಗಾರಗಳ ಮೂಲಕ ಶಿಕ್ಷಕರಿಗೆ, ಪೋಷಕರಿಗೆ ಮತ್ತು ಮಕ್ಕಳಲ್ಲಿ ಅರಿ ಮೂಡಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದರು. 

ಗಣಿತ ಮತ್ತು ವಿಜ್ಞಾನ ವಿಷಯಗಳು ತುಂಬಾ ಕಠಿಣ ಎಂಬ ಕಲ್ಪನೆ ಇದೆ. ಆದರೆ ಮನಸಿಟ್ಟು ಓದಿದರೆ ಮತ್ತು ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡದರೆ ಮಕ್ಕಳಿಗೆ ಈ ಎರಡು ವಿಷಯ ಕಷ್ಟವಾಗಲಾರದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್‌. ರಮೇಶ್‌, ಸಂಸ್ಥೆ ವತಿಯಿಂದ ಶೈಕ್ಷಣಿಕ ಕಾರ್ಯಗಾರಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದೇವೆ. ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಗಣಿತ ಪಠ್ಯಪುಸ್ತಕ ರಚನಾ ಸಮಿತಿ ಮುಖ್ಯಸ್ಥ ಟಿ.ಕೆ. ಪ್ರಸನ್ನ ಮೂರ್ತಿ, ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ ಮುಖ್ಯಸ್ಥ
ರಾಮಚಂದ್ರ ಭಟ್‌ ಕಾರ್ಯಗಾರದಲ್ಲಿ ಭಾಗವಹಿಸಿ ಪ್ರಾತ್ಯಕ್ಷತೆ ಮೂಲಕ ಮಕ್ಕಳು, ಪೋಷಕರು ಮತ್ತು ಶಿಕ್ಷಕರಿಗೆ ಹೊಸ ಪಠ್ಯ ಪುಸ್ತಕ ಬಗ್ಗೆ ಮಾಹಿತಿ ನೀಡಿದರು. ಜಯಣ್ಣಗೌಡ, ಪ್ರವೀಣ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next