Advertisement
ಹೊಸ ರಸ್ತೆಯು ನಿರ್ಮಾಣವಾಗಿ ವರ್ಷ ಕಳೆದಿದ್ದರೂ ಯಾವುದೇ ರೀತಿಯ ಸೂಚನಾ ಫಲಕವನ್ನು ಅಳವಡಿಸಿದೇ ಇದ್ದುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಇದೆ ಹಾಗೂ ಇಲ್ಲಿನ ಮೂಲಸೌಕರ್ಯದ ಬಗ್ಗೆ ’ಉದಯವಾಣಿಯ’ ಸುದಿನದಲ್ಲಿ ಎ. 5ರಂದು ವಿಶೇಷ ವರದಿಯ ಮೂಲಕ ಗಮನ ಸೆಳೆದಿತ್ತು.
ಪಡುಪಣಂಬೂರು ಹಾಗೂ ಚಿತ್ರಾಪುವಿನ ಮೂಲಕ ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕಿಸುವ ಈ ನೂತನ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನ ಸವಾರರು ಆಯಾ ತಪ್ಪಿದರೇ ನೇರವಾಗಿ ನದಿಗೆ ಬೀಳುವ ಸಾಧ್ಯತೆ ಇದೆ. ತಿರುವು ರಸ್ತೆಗಳಿರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಸಹ ಅಪಾಯ ತಪ್ಪಿದ್ದಲ್ಲ. ರಾತ್ರಿ ಸಮಯದಲ್ಲಿ ಸೂಕ್ತವಾದ ಬೆಳಕಿನ ಆವಶ್ಯಕತೆ ಇರುವುದರಿಂದ ದಾರಿ ದೀಪವನ್ನು ಅಳವಡಿಸುವ ಬಗ್ಗೆ ಪಡುಪಣಂಬೂರು ಗ್ರಾ. ಪಂ. ಕ್ರಮ ಕೈಗೊಳ್ಳಬೇಕಾಗಿದೆ.