ಪಾಟ್ನಾ: ವಿಪಕ್ಷಗಳಿಗಾಗಿ ಹಮ್ಮಿಕೊಂಡಿರುವ ಸಭೆಯಲ್ಲಿ ಆಯಾ ಪಕ್ಷಗಳ ಮುಖ್ಯಸ್ಥರು ಮಾತ್ರ ಭಾಗವಹಿಸಬೇಕು. ಈ ಹಿಂದೆ ಜೂ.12ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ ಅದೀಗ ಮುಂದೂಡಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಎಲ್ಲ ವಿಪಕ್ಷಗಳನ್ನು ಸಂಪ ರ್ಕಿಸಿ ಸಭೆಯ ಮುಂದಿನ ದಿನಾಂಕವನ್ನು ನಿರ್ಧ ರಿಸಲಾಗುವುದು. ಈ ಹಿಂದೆ ಜೂ.12ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ ಈ ದಿನಾಂಕ ಕಾಂಗ್ರೆಸ್ ಮತ್ತು ಇನ್ನೊಂದು ಪಕ್ಷಕ್ಕೆ ಅನನುಕೂಲವಾಗಿತ್ತು. ಹಾಗಾಗಿ ಎಲ್ಲ ವಿಪಕ್ಷಗಳನ್ನು ಸಂಪರ್ಕಿಸಿ ಸೂಕ್ತ ದಿನಾಂಕವನ್ನು ನಿರ್ಧರಿಸುವಂತೆ ಕಾಂಗ್ರೆಸ್‌ಗೆ ತಿಳಿಸಲಾಗಿದೆ’ ಎಂದರು.