Advertisement

ಇಂಗ್ಲೆಂಡ್- ಆಸೀಸ್ ಸೆಮಿ ಪಂದ್ಯದಲ್ಲಿ ಆದಿತ್ಯ ರಾಯ್ ಕಪೂರ್

09:03 AM Jul 13, 2019 | keerthan |

ಬರ್ಮಿಗಂ: ಬಾಲಿವುಡ್ ಸ್ಟೈಲಿಶ್ ಹೀರೋ, ಪ್ರತಿಭಾನ್ವಿತ ನಟ ಆದಿತ್ಯ ರಾಯ್ ಕಪೂರ್, ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಕಾಣಿಸಿ ಕೊಂಡಿದ್ದಾರೆ. ಆಸೀಸ್ ಮತ್ತು ಇಂಗ್ಲೆಂಡ್ ನಡುವಿನ ಸೆಮಿ ಫೈನಲ್ ಪಂದ್ಯವನ್ನು ಆದಿತ್ಯ ರಾಯ್ ಕಪೂರ್ ವೀಕ್ಷಿಸಿದ್ದಾರೆ.

Advertisement

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆದಿತ್ಯ ರಾಯ್ ಕಪೂರ್ ಹಂಚಿಕೊಂಡಿದ್ದಾರೆ. ಬರ್ಮಿಗಂನ ಎಡ್ಜ್ ಬಾಸ್ಟನ್ ಮೈದಾನದ ಫೋಟೋವನ್ನು ಅಪ್ಲೋಡ್ ಮಾಡಿರುವ ಆದಿತ್ಯ ರಾಯ್ ಕಪೂರ್ ವಿಶ್ವಕಪ್ ಪಂದ್ಯಾವಳಿಯನ್ನು ಆನಂದಿಸುತ್ತಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯವನ್ನು ಕೂಡಾ ಆದಿತ್ಯ ರಾಯ್ ಕಪೂರ್ ಮೈದಾನಲ್ಲಿ ವೀಕ್ಷಿಸಿದ್ದರು. ಮ್ಯಾಂಚೆಸ್ಟರ್ ನಲ್ಲಿ ವಿರಾಟ್ ಪಡೆಯನ್ನು ಬೆಂಬಲಿಸಿದ್ದ ಕಪೂರ್ ಅದರ ಚಿತ್ರವನ್ನು ಕೂಡಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next