Advertisement

‘5ಡಿ’ ಯಲ್ಲೊಂದು ಮರ್ಡರ್‌ ಮಿಸ್ಟರಿ!

12:26 PM Jul 09, 2021 | Team Udayavani |

ನಟ ಆದಿತ್ಯ ಶೀಘ್ರದಲ್ಲಿಯೇ ಮತ್ತೂಂದು ಸಸ್ಪೆನ್ಸ್‌, ಥ್ರಿಲ್ಲರ್‌, ಮರ್ಡರ್‌ ಮಿಸ್ಟರಿ ಜೊತೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಆ ಸಿನಿಮಾದ ಹೆಸರು “5 ಡಿ’. ಈಗಾಗಲೇ ಸದ್ದಿಲ್ಲದೆ “5 ಡಿ’ಯ ಮುಕ್ಕಾಲು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದು ತಲುಪಿದೆ.

Advertisement

ಸ್ಯಾಂಡಲ್‌ ವುಡ್‌ನ‌ಲ್ಲಿ ಫ್ಯಾಮಿಲಿ ಕಂಟೆಂಟ್‌ ಸಿನಿಮಾಗಳ ಮೂಲಕವೇ ಹೆಚ್ಚಾಗಿ ಗುರುತಿಸಿಕೊಂಡಿರುವ ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌  ಮೊದಲ ಬಾರಿಗೆ “5 ಡಿ’ ಮೂಲಕ ಸಸ್ಪೆನ್ಸ್‌, ಥ್ರಿಲ್ಲರ್‌ ಶೈಲಿಯ ಕಥೆಯನ್ನ ತೆರೆಮೇಲೆ ಹೇಳಲು ಹೊರಟಿದ್ದಾರೆ. ರವಿ ಗುಂಟಿಮಡುಗು ಅವರ ಮರ್ಡರ್‌ ಮಿಸ್ಟರಿ ಸ್ಟೋರಿಯನ್ನು ಎಸ್‌. ನಾರಾಯಣ್‌ ತೆರೆಮೇಲೆ ತರುತ್ತಿದ್ದಾರೆ.

ಇನ್ನು “5 ಡಿ’ ಚಿತ್ರದಲ್ಲಿ ಆದಿತ್ಯಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, “ಒನ್‌ ಟು ಹಂಡ್ರೆಡ್‌ ಡ್ರಿಮ್ಸ್‌ ಮೂವೀಸ್‌ (ಪ್ರೈ) ಲಿ’ ಬ್ಯಾನರ್‌ನಲ್ಲಿ ಸ್ವಾತಿ ಕುಮಾರ್‌ “5 ಡಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ನಾನೊಬ್ಬ ಕಾಮನ್‌ ಮ್ಯಾನ್‌, ಜನ ಸ್ಟಾರ್‌ ಡಮ್‌ ಕೊಟ್ಟಿದ್ದಾರಷ್ಟೇ.: ಶಿವಣ್ಣ special ಮಾತು

“5 ಡಿ’ ಚಿತ್ರದ ಬಗ್ಗೆ ಮಾತನಾಡುವ ಎಸ್‌. ನಾರಾಯಣ್‌, “ನಾನು ಇಲ್ಲಿಯವರೆಗೆ ಲವ್‌, ಫ್ಯಾಮಿಲಿ, ಸೆಂಟಿಮೆಂಟ್‌ ಹೀಗೆ ಎಲ್ಲ ಥರದ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದೇನೆ. ಆದ್ರೆ, ಇದೇ ಮೊದಲ ಬಾರಿಗೆ ಸಸ್ಪೆನ್ಸ್‌, ಥ್ರಿಲ್ಲರ್‌, ಮರ್ಡರ್‌ ಮಿಸ್ಟರಿಯೊಂದನ್ನ ಆಡಿಯನ್ಸ್‌ ಮುಂದೆ ಹೇಳ್ಳೋಕೆ ಹೊರಟಿದ್ದೇನೆ. ನನ್ನ ಇಷ್ಟು ವರ್ಷದ ಸಿನಿಮಾ ಕೆರಿಯರ್‌ನಲ್ಲಿ, ನನಗೂ ಇದು ಫ‌ಸ್ಟ್‌ ಎಕ್ಸ್‌ ಪೀರಿಯನ್ಸ್‌. ಸಿನಿಮಾದ ಸಬ್ಜೆಕ್ಟ್ ಹೊಸದಾಗಿದೆ. ಆಡಿಯನ್ಸ್‌ಗೆ ಮಾತ್ರವಲ್ಲ ನನಗೂ ಈ ಸಬ್ಜೆಕ್ಟ್ ಮೇಲೆ ತುಂಬ ಕುತೂಹಲ, ನಿರೀಕ್ಷೆ ಇದೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next