Advertisement

ಹೊಸಬರ ಮೊಗದಲ್ಲಿ ‘ಆನ’ನಗು

02:27 PM Mar 31, 2021 | Team Udayavani |

ನಟಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ “ಆನ’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.

Advertisement

ಟೀಸರ್‌ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗೊಂಡ ಖುಷಿಯನ್ನು ಹಂಚಿಕೊಂಡಿತು. ಈ ಚಿತ್ರವನ್ನು ಮನೋಜ್‌ ನಡಲುಮನೆ ನಿರ್ದೇಶಿಸಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡುವ ಅವರು, “ಆನ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನೆರೆರಾಜ್ಯಗಳಿಂದಲೂ ಟೀಸರ್‌ ವೀಕ್ಷಿಸಿದವರು ನನಗೆ ದೂರವಾಣಿ ಮೂಲಕ ಪ್ರಶಂಸೆ ನೀಡುತ್ತಿದ್ದಾರೆ. ಹತ್ತು ದಿನಗಳಲ್ಲಿ ಸಿನಿಮಾದ ಮೊದಲ ಪ್ರತಿ ಸಿದ್ಧವಾಗಲಿದ್ದು, ಏಪ್ರಿಲ್‌ ಕೊನೆವಾರ ಅಥವಾ ಮೇ ನಲ್ಲಿ ತೆರೆಗೆ ತರುತ್ತೇವೆ’ ಎಂದರು.

ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಅದಿತಿ ಕೂಡಾ ಖುಷಿಯಾಗಿ ದ್ದಾರೆ. “ಲಾಕ್‌ ಡೌನ್‌ ಸಮಯದಲ್ಲಿ ಎಲ್ಲರಿಗೂ ಮುಂದೇನು ಎಂಬ ಪ್ರಶ್ನೆ ಎದುರಾಗಿತ್ತು. ಅಂತ ಸಮಯದಲ್ಲಿ ನಮ್ಮ ನಿರ್ಮಾಪಕರು ಈ ಚಿತ್ರದ ಕಥೆ ಇಷ್ಟಪಟ್ಟು ಚಿತ್ರ ನಿರ್ಮಾಣ ಮಾಡಿದ್ದಾರೆ. ನಾನು ಮೊದಲಿನಿಂದಲೂ ಹಾರರ್‌, ಫ್ಯಾಂಟಸಿ ಸಿನಿಮಾ ಹೆಚ್ಚು ನೋಡುತ್ತೇನೆ . ಈ ತರಹದ ಒಂದು ಪಾತ್ರ ಮಾಡಬೇಕೆಂದುಕೊಂಡಿದ್ದೆ. ಈಗ ಅಂತಹ ಪಾತ್ರ ನನಗೆ ಸಿಕ್ಕಿರುವುದು ನನಗೆ ಸಂತಸ ತಂದಿದೆ’ ಎಂದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುನೀಲ್‌ ಪುರಾಣಿಕ್‌ ಅವರು ಇಡೀ ತಂಡದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಚಿತ್ರವನ್ನು ಪೂಜಾ ವಸಂತಕುಮಾರ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ಉದಯ್‌ ಲೀಲಾ ಛಾಯಾಗ್ರಾಹಕ, ವಿನೀತ್‌ ಚಂದ್ರ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next