Advertisement

Adipurush‌: ʼಚಂದ್ರಯಾನ-3ʼ ಬಜೆಟ್ ʼಆದಿಪುರುಷ್‌ʼ ಬಜೆಟ್‌ಗಿಂತ ಕಡಿಮೆ; ಟ್ರೋಲ್‌ ಆದ ಸಿನಿಮಾ

11:46 AM Aug 24, 2023 | Team Udayavani |

ಮುಂಬಯಿ: ಭಾರತ ವೈಜ್ಞಾನಿಕ ಲೋಕದಲ್ಲಿ ಚಂದ್ರಯಾನ-3ಯ ಯಶಸ್ಸಿನ ಮೂಲಕ ಹೊಸ ಐತಿಹಾಸಿಕ ಸಾಧನೆಯನ್ನು ಮಾಡಿದೆ. ದೇಶ – ವಿದೇಶದೆಲ್ಲೆಡೆ ಇಸ್ರೋ ಸಾಧನೆಗೆ ಶ್ಲಾಘಿಸಿ ಅಭಿನಂದಿಸಲಾಗುತ್ತಿದೆ.

Advertisement

ಇತ್ತ ಚಂದ್ರಯಾನ -3 ಯಶಸ್ಸನ್ನು ನೆಟ್ಟಿಗರು ಸಂಭ್ರಮಿಸುತ್ತಿದ್ದಾರೆ. ಇಸ್ರೋ ಸಾಧನೆ ಕುರಿತು ಸಾವಿರಾರು ಟ್ವೀಟ್‌ ಗಳು  ಮಾತನಾಡುತ್ತಿವೆ. ಇನ್ನೊಂದೆಡೆ ಚಂದ್ರಯಾನ-3 ಬಜೆಟ್‌ ನ್ನು ಕೆಲ ನೆಟ್ಟಿಗರು ಪ್ರಭಾಸ್‌ ಅಭಿನಯದ ʼಆದಿಪುರುಷ್‌ʼ ಸಿನಿಮಾಕ್ಕೆ ಹೋಲಿಕೆ ಮಾಡುತ್ತಿದ್ದಾರೆ.

ʼಆದಿಪುರುಷ್‌ʼ ಸಿನಿಮಾ ಡಾರ್ಲಿಂಗ್‌ ಪ್ರಭಾಸ್‌ ಅವರ ಬಹುಕೋಟಿ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದಾಗಿತ್ತು. ಸಿನಿಮಾ ರಿಲೀಸ್‌ ಗೂ ಒಂದಷ್ಟು ಕಾರಣಗಳಿಗೆ ವಿವಾದಕ್ಕೆ ಸಿಲುಕಿತ್ತು. ಆದಾದ ಬಳಿಕ ಎಲ್ಲಾ ತಪ್ಪುಗಳನ್ನು ಸರಿ ಮಾಡಿಕೊಂಡು ಸಿನಿಮಾ ಥಿಯೇಟರ್‌ ನಲ್ಲಿ ರಿಲೀಸ್‌ ಆಗಿತ್ತು. ಆದರೆ ಬಹುಕೋಟಿ ನಿರ್ಮಿತ ಸಿನಿಮಾಕ್ಕೆ ದೊಡ್ಡಮಟ್ಟದ ಹಿನ್ನೆಡೆ ಉಂಟಾಗಿತ್ತು.‌

ಇದನ್ನೂ ಓದಿ: Prakash Raj: ಚಂದ್ರಯಾನ-3 ಯಶಸ್ಸು: ಪ್ರಕಾಶ್ ರಾಜ್‌ ಬಂಧನಕ್ಕೆ ಆಗ್ರಹಿಸಿ ಸಾವಿರಾರು ಟ್ವೀಟ್

ಕಳಪೆ ಗುಣಮಟ್ಟದ ವಿಎಫ್‌ ಎಕ್ಸ್‌, ಹನುಮಾನ್‌ ಡೈಲಾಗ್ಸ್‌ ಗಳಿಂದ ಸಿನಿಮಾಕ್ಕೆ ಹಿನ್ನೆಡೆ ಉಂಟಾಗಿತ್ತು. 700 ಕೋಟಿ ವೆಚ್ಚದಲ್ಲಿ ತಯಾರಾದ ʼಆದಿಪುರುಷ್‌ʼ ಬಾಕ್ಸ್‌ ಆಫೀಸ್‌ ನಲ್ಲಿ ಮುಗ್ಗರಿಸಿತ್ತು.

Advertisement

ಸಿನಿಮಾದ ಬಜೆಟ್‌ ನ್ನು ಹಾಗೂ ಚಂದ್ರಯಾನ-3 ಬಜೆಟ್‌ ನ್ನು ಹೋಲಿಕೆ ಮಾಡಿ ನೆಟ್ಟಿಗರು ʼಆದಿಪುರುಷ್‌ʼ ಗೆ ಟ್ರೋಲ್‌ ಮಾಡುತ್ತಿದ್ದಾರೆ.

ಚಂದ್ರಯಾನ-3 ರ ಒಟ್ಟು ಬಜೆಟ್ ಆದಿಪುರುಷ್ ಬಜೆಟ್‌ಗಿಂತ ಕಡಿಮೆಯಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

ʼಆದಿಪುರುಷ್‌ʼ 700 ಕೋಟಿ ರೂ.ನಲ್ಲಿ ತಯರಾಗಿದೆ. ʼಚಂದ್ರಯಾನ-3ಗೆ  615 ಕೋಟಿ ರೂ.ವನ್ನು ವೆಚ್ಚ ಮಾಡಲಾಗಿದೆ ಎಂದು ಮತ್ತೊಬ್ಬ ನೆಟ್ಟಿಗರು ಟ್ವೀಟ್‌ ಮಾಡಿದ್ದಾರೆ.

ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next