ಬೆಂಗಳೂರು: ರಾಜ್ಯದ ಪ್ರಸಿದ್ಧ ಪ್ರವಾಸಿ ಸಂಸ್ಥೆಗಳಲ್ಲೊಂದಾಗಿರುವ ವಂದೇ ಮಾತರಂ ಟ್ರಾವೆಲ್ಸ್ ಹಾಗೂ ಅಡಿಗಾಸ್ ಯಾತ್ರಾ ಇತ್ತೀಚೆಗೆ ರಜತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದೆ.
1994ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ತನ್ನ ಧ್ಯೇಯೋದ್ದೇಶ ಹಾಗೂ ಸ್ಥಾಪಕ ಕೆ. ನಾಗರಾಜ ಅಡಿಗರ ಸತತ ಪರಿಶ್ರಮ ಮತ್ತು ನೈಪುಣ್ಯದಿಂದ 24 ವರ್ಷಗಳನ್ನು ಪೂರೈಸಿದೆ.
ರಜತೋತ್ಸವ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿಯಲ್ಲಿರುವ ದ್ವಾರಕಾನಾಥ ಭವನದಲ್ಲಿ ಗಣ್ಯ ಅತಿಥಿಗಳು, ಪತ್ರಕರ್ತರು ಹಾಗೂ ಸಹಸ್ರಾರು ಪ್ರವಾಸಿಗರ ಉಪಸ್ಥಿತಿಯಲ್ಲಿ ನೆರವೇರಿತು. ಬಸವನಗುಡಿ ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್ ರೇಶ್ಮಾ, ಭೂ ವಿಜ್ಞಾನ ಸಂಸ್ಥೆಯ ಮಾಜಿ ಅಧಿಕಾರಿ ಹಾಗೂ ಲೇಖಕ ಇ.ಡಿ. ನರಹರಿ, ವಾಗ್ಮಿ ಕೋಟೇಶ್ವರ ಸೂರ್ಯನಾರಾಯಣ ರಾವ್, ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಕೆ. ನಾಗರಾಜ ಅಡಿಗ ಹಾಗೂ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕಿ ಆಶಾ ಎನ್. ಅಡಿಗ ಅವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಚಾಲನೆಯನ್ನು ನೀಡಲಾಯಿತು. ಇನ್ಸ್‌ಸ್ಪೆಕ್ಟರ್ ರೇಶ್ಮಾ ರಜತ ಮಹೋತ್ಸವದ ಕೈಪಿಡಿ ಬಿಡುಗಡೆಗೊಳಿಸಿದರು.
ಇ.ಡಿ. ನರಹರಿ ಅವರು ಅಡಿಗಾಸ್ ಯಾತ್ರಾ ಉತ್ತಮ ಪ್ರವಾಸಗಳನ್ನು ಆಯೋಜಿಸುವುದರ ಮೂಲಕ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ಎಂದರು. ಸೂರ್ಯನಾರಾಯಣ ರಾವ್ ಅವರು ತಮ್ಮ ಪ್ರವಾಸದ ಅನುಭವಗಳೊಂದಿಗೆ ಅಡಿಗಾಸ್ ಯಾತ್ರಾದ ವೈಶಿಷ್ಟ್ಯಗಳನ್ನು ವಿವರಿಸಿದರು. ಪ್ರತಿಕೂಲ ಹವಾಮಾನಗಳಲ್ಲೂ ಅಪರಿಚಿತ ತಾಣಗಳಲ್ಲೂ ಸಂಸ್ಥೆಯ ಸಿಬ್ಬಂದಿ ಪ್ರವಾಸಿಗರ ಬಗ್ಗೆ ವಹಿಸುವ ಕಾಳಜಿ ಸ್ತುತ್ಯರ್ಹ. ಸಂಸ್ಥೆಯ ಸೇವೆಗಳು ಉತ್ತಮ ಗುಣಮಟ್ಟದಿಂದ ಕೂಡಿದೆ. ಅಡಿಗಾಸ್ ಯಾತ್ರಾ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುವಂತಾಗಲಿ ಎಂದು ಹರಸಿದರು.
ರಿಯಾಯತಿ ದರದ ಕೊಡುಗೆ: ಸ್ಥಾಪಕ ಕೆ. ನಾಗರಾಜ ಅಡಿಗರು ಸ್ವಾಗತಿಸಿ, ರಜತ ಮಹೋತ್ಸವ ಅಂಗವಾಗಿ ಈ ವರ್ಷದ ಪ್ರವಾಸದ ವೈಶಿಷ್ಟ್ಯಗಳಾದ ಕಡಿಮೆ ದಿನಗಳಲ್ಲಿ ದೂರದ ಈಶಾನ್ಯ ರಾಜ್ಯಗಳಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಅಮರನಾಥ, ಕೇದಾರನಾಥ ಹಾಗೂ ಕೈಲಾಸ ಮಾನಸ ಸರೋವರಕ್ಕೆ ಹೆಲಿಕಾಪ್ಟರ್ ಮೂಲಕ ಯಾತ್ರೆ ಆಯೋಜಿಸಲಾಗಿದೆ. 4-5 ದಿನಗಳಿಂದ 8-10 ದಿನಗಳಲ್ಲಿ ಸಂದರ್ಶಿಸುವಂತೆ ವಿಶೇಷವಾಗಿ ದುಬೈ, ಬಾಲಿ, ಮಾಲ್ಡೀವ್ಸ್, ಶ್ರೀಲಂಕಾ, ಥೈಲ್ಯಾಂಡ್, ಸಿಂಗಾಪುರ, ಮಲೇಷ್ಯಾ, ಲಢಾಖ್, ನೇಪಾಳ, ಭೂತಾನ್, ಹಾಂಕಾಂಗ್ ಮಕಾವ್, ಇಂಡೋನೇಷ್ಯಾ, ಅಂಡಮಾನ್, ಕಾಶ್ಮೀರ, ಹಿಮಾಚಲ ಪ್ರದೇಶ, ಮೇಘಾಲಯ, ಉತ್ತರಾಂಚಲ ಪ್ರವಾಸಗಳನ್ನು ರೂಪಿಸಲಾಗಿದೆ. ಈ ಬಾರಿ
Believe in the best- 24 years of Trustಗೆ ಬದ್ಧರಾಗಿದ್ದೇವೆ ಎಂದರು. ರಜತ ಮಹೋತ್ಸವದ ಪ್ರಯುಕ್ತ ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ ಈ ಬಾರಿ ವಿಶೇಷವಾಗಿ 20,000 ರೂ.ಗಳ ರಿಯಾಯಿತಿಯನ್ನು ಘೋಷಿಸಿದರು.
ಒಮ್ಮೆಲೆ ಒಂದು ಪ್ರವಾಸ ಕಾದಿರಿಸಿದವರಿಗೆ ಶೇ. 5, 2 ಪ್ರವಾಸ ಕಾದಿರಿಸಿದವರಿಗೆ ಶೇ.15 ಹಾಗೂ 3 ಪ್ರವಾಸ ಕಾದಿರಿಸಿದವರಿಗೆ ಶೇ. 25ರ ವರೆಗೆ ರಿಯಾಯಿತಿಯನ್ನು ಸೀಮಿತ ಅವಧಿಯ ವರೆಗೆ, ಪ್ರವಾಸಿ ಕೈಪಿಡಿಯಲ್ಲಿನ ಎಲ್ಲ ಪ್ರವಾಸಗಳಿಗೂ ನೀಡಲಾಗಿದೆ. ಈ ಸೌಲಭ್ಯದಲ್ಲಿ 2019ರಾದ್ಯಂತ ಪ್ರವಾಸ ಕೈಗೊಳ್ಳ ಬಹುದಾಗಿದೆ. ಆಶಾ ಎನ್. ಅಡಿಗ ಧನ್ಯವಾದ ಸಮರ್ಪಿಸಿದರು.