ಕಂಪ್ಲಿ: ಮನುಷ್ಯನಲ್ಲಿರುವ ರಾಕ್ಷಸ ಗುಣಗಳನ್ನು ದಹಿಸಿ ಆತನನ್ನು ಮಹಾದೇವನನ್ನಾಗಿಸುವ ಅಪೂರ್ವ ಸಿದ್ಧಾಂತವನ್ನು ನೀಡಿದ ಜಗದ್ಗುರುಗಳು ಶ್ರೀ ರೇಣುಕಾಚಾರ್ಯರಾಗಿದ್ದಾರೆಂದು ಪಟ್ಟಣದ ಕಲ್ಯಾಣಚೌಕಿ ಮಠದ ಕೆ.ಎಂ. ಬಸವರಾಜ ಶಾಸ್ತ್ರಿಗಳು ತಿಳಿಸಿದರು.
ಅವರು ಪಟ್ಟಣದ ಕಲ್ಯಾಣ ಚೌಕಿ ಮಠದ ಆವರಣದಲ್ಲಿ ಏರ್ಪಡಿಸಿದ್ದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಯುಗಮಾನೋತ್ಸವ ಸಮಾರಭಂದಲ್ಲಿ ಲಂಗೋದ್ಬವ ರೇಣುಕಾಚಾರ್ಯರ ಪಂಚಲೋಹದ ಪ್ರತಿಮೆಗೆ ವಿವಿಧ ಅಭಿಷೇಕ, ವೈವಿಧ್ಯಮಯ ಹೂವಿನ ಅಲಂಕಾರ, ಮಹಾಮಂಗಳಾರತಿಯ ನಂತರ ಪುಷ್ಪಾರ್ಚನೆ ಮಾಡಿ ಆಶೀರ್ವಚನ ನೀಡಿ ಮಾತನಾಡಿದರು.
ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಗೌರವ ಪ್ರಾಚಾರ್ಯ ಎಂ.ಎಸ್. ಶಶೀಧರ ಶಾಸ್ತ್ರಿಗಳು ಮಾತನಾಡಿ, ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಸ್ವಯಂಭು ಸೋಮೇಶ್ವರ ಲಿಂಗದಿಂದ ಅವತರಿಸಿದ ಜಗದ್ಗುರು ರೇಣುಕಾಚಾರ್ಯರು ಮಲಯಾಚಲಕ್ಕೆ ಬಂದು ಮಹಾಮುನಿ ಅಗಸ್ತ್ಯ ಶಿವಾದ್ವೈತ ಸಿದ್ಧಾಂತವನ್ನು ಬೋಧಿ ಸಿದ್ದಾರೆ. ಆ ಸಾರ ಸಂಗ್ರಹವೇ ರೇಣುಕಾಗಸ್ತ್ಯ ಸಂವಾದ ರೂಪದಲ್ಲಿ ರಚಿಸಲ್ಪಟ್ಟ ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವಾಗಿದ್ದು, ಪ್ರತಿಯೊಬ್ಬರೂ ಈ ಧರ್ಮಗ್ರಂಥವನ್ನು ಪಠಣ ಮಾಡಬೇಕೆಂದರು.
ಜೆ.ಎಂ. ಸಿದ್ದರಾಮಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ನೆರೆದಿದ್ದ ಕೆಲವೇ ಭಕ್ತರು ಜಗದ್ಗುರುಗಳ ಪಂಚಲೋಹದ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದರು. ಕೊನೆಯಲ್ಲಿ ಪ್ರಸಾದ ವಿತರಣೆ ಜರುಗಿತು. ಕಾರ್ಯಕ್ರಮದಲ್ಲಿ ಕಲ್ಯಾಣಿಚೌಕಿ ಮಠದ ಚನ್ನಮಲ್ಲಶಾಸ್ತ್ರಿ, ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಘನಮಠದಯ್ಯ ಶಾಸ್ತ್ರಿ, ಪಂಚಯ್ಯಸ್ವಾಮಿ ಬೆನಕ್ನಾಳಮಠ, ಯು.ಎಂ. ವಿದ್ಯಾಶಂಕರ್, ಅರವಿ ಅಮರೇಶಗೌಡ, ಮಂಜುನಾಥಗೌಡ, ಪ್ರದೀಪಶಾಸ್ತ್ರಿ, ಜೆ.ಎಂ. ಚನ್ನಬಸವರಾಜ, ಚಂದ್ರಶೇಖರಶಾಸ್ತ್ರಿ, ಹೂಗಾರ ರಮೇಶ್, ಕಂಪ್ಲಿ ತಾಲೂಕು ಅರ್ಚಕರ ಮತ್ತು ಪುರೋಹಿತರ ಸಂಘದ ಪದಾ ಧಿಕಾರಿಗಳು,ವೀರಶೈವ ಸಮಾಜದ ಮುಖಂಡರು ಸದ್ಭಕ್ತರು ಭಾಗವಹಿಸಿದ್ದರು.