Advertisement
ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರ ಪದೇ ಪದೇ ಆಧಾರ್ ಕಾಡ್‌ನ್ನು ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದೆ. ಅದಕ್ಕೆ ವಿರುದ್ಧವಾದ ಚಟುವಟಿಕೆ ಆಡಳಿತದಲ್ಲಿ ನಡೆದಿದೆ. ಈಗ ಮಕ್ಕಳ 5 ಯೋಜನೆಗಳ ಫಲಾನುಭವಿಗಳಿಗೇ ಆಧಾರ್ ಕಡ್ಡಾಯ! ಪಾನ್ ನಂಬರ್ ಜೊತೆ ಆಧಾರ್ ಜೋಡಿಸಿ, ಡಿಎಲ್ ದಾಖಲೆಗೆ ಆಧಾರ್ ಸಂಖ್ಯೆ ಸೇರ್ಪಡೆಯಾಗಲೇಬೇಕು…… ಆದರೂ ಹೇಳುತ್ತಾರೆ, ಆಧಾರ್ ಕಡ್ಡಾಯವಲ್ಲ!
ಆಧಾರ್ ಮಾಡಿಸಿ 6 ತಿಂಗಳಾದರೂ ಅಂಚೆಯಲ್ಲಿ ಕಾರ್ಡ್ ಬಾರದಿರುವುದು, ಕಾರ್ಡ್ ಕಳೆದುಕೊಂಡಿರುವುದು, ಹಾಳಾಗಿರುವುದು ಬದಲಿಗೆ ಡೂಪ್ಲಿಕೇಟ್ ಆಧಾರ್ ಕಾರ್ಡ್ ಪಡೆಯಲು ಜನ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತು. ಅಧಾರ್ ಕಾರ್ಡ್ ಸ್ವೀಕೃತಿ ಪತ್ರದಿಂದ ತಮ್ಮ ಕಾರ್ಡ್‌ನ ಸ್ಥಿತಿಗತಿ ಏನಾಗಿದೆಯೆಂದು ತಿಳಿದುಕೊಂಡು ಅದು ರವಾನೆಯಾಗಿದ್ದರೂ ತಮಗೆ ಬಾರದಿದ್ದರೆ ಏನು ಮಾಡಬೇಕೆಂದು ಹಲವರಿಗೆ ತಿಳಿಯದು. ಈ ಹಿನ್ನೆಲೆಯಲ್ಲಿ ಕೆಲವು ಮಾಹಿತಿ ನಮ್ಮ ಜೊತೆಗಿರುವುದು ಅತ್ಯಗತ್ಯ.
Related Articles
Advertisement
ನೆನಪಿರಲಿ, ಇ ಆಧಾರ್ ಮೂಲಕ ಅಂತಜಾìಲದಿಂದ ತಮ್ಮ ಆಧಾರ್ ನಂಬರನ್ನು ಪಡೆದರೆ ಡೂಪ್ಲಿಕೇಟ್ ಆಧಾರ್ ಕಾರ್ಡ್ ಪಡೆಯಲು ಸುಲಭವಾಗುತ್ತದೆ. ಆಧಾರ್ ಕಾರ್ಡ್ ಮಾಡಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೀಡಿದ್ದರೂ ಅಥವಾ ಹಿಂಬರಹ ಪಡೆದ ಮೇಲೆ ತಪ್ಪನ್ನು ಸರಿಪಡಿಸಿಕೊಂಡಿದ್ದರೂ ಅದು ನಮ್ಮ ಕೈ ಸೇರಿದಾಗ ಅದರಲ್ಲಿ ವಿವರಗಳು ತಪ್ಪಾಗಿದ್ದಾಗ ಇದು ಕೂಡ ಮತ್ತೂಂದು ವೋಟರ್ ಐಡಿ ತರಹ ಅಂತ ಬೇಸರಿಸುವ ಅಗತ್ಯವಿಲ್ಲ. ಆಧಾರ್ ಕಾರ್ಡ್ ಮುಂದೆ ಬೇಕೋ ಬೇಡವೋ, ಈಗಾಗಲೇ ನೀವು ಮಾಡಿಸಿದ್ದರೆ ಮತ್ತು ಅವುಗಳಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಬದಲಾದ ವಿಳಾಸವನ್ನು ಆನ್‌ಲೈನಿನಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದು ಈಗಾಗಲೇ ಆಧಾರ ಕಾರ್ಡ್ ಸಂಖ್ಯೆ ಪಡೆದವರಿಗೆ ಮಾತ್ರ.
ಅವರು ಸರ್ಚ್ ಇಂಜಿನ್ನಿನಲ್ಲಿ https://ssup.uidai. gov.in/web/guest/update ಎಂದು ದಾಖಲಿಸಿದಾಗ ವೆಬ್‌ಪುಟ ಪ್ರತ್ಯಕ್ಷ. ಅದರಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ ಮಾಹಿತಿಗಳನ್ನು ತುಂಬಿದಾಗ ಈಗಾಗಲೇ ನೊಂದಾಯಿಸಿದ ಮೊಬೈಲ್ ನಂಬರಿಗೆ ಒಂದು ಪಾಸ್‌ವರ್ಡ್ ಎಸ್‌ಎಂಎಸ್ ಮೂಲಕ ಬರುತ್ತದೆ. ನೆನಪಿರಲಿ, ಅದರ ಅವಧಿ ಕೇವಲ 15 ನಿಮಿಷಗಳು ಮಾತ್ರ. ನೀವು ಮೊಬೈಲ್ ನಂಬರನ್ನು ನೋಂದಣಿ ಮಾಡಿಸುವಾಗ ದಾಖಲಿಸದಿದ್ದರೆ ಅದು ನಿಮಗೆ ಎಸ್‌ಎಂಎಸ್ ಕಳಿಸಲು ಒಂದು ಮೊಬೈಲ್ ಸಂಖ್ಯೆಯನ್ನು (ಏರ್‌ಟೆಲ್ ಹೊರತುಪಡಿಸಿ) ಕೇಳುತ್ತದೆ. ಆ ಪಾಸ್‌ವರ್ಡ್‌ನ್ನು ಕೇಳಿದ ಜಾಗದಲ್ಲಿ ಹಾಕಿ ಲಾಗಿನ್ ಆಗಿರಿ.
ಮುಂದೆ ನೀವು ತಿದ್ದುಪಡಿ ಮಾಡಬೇಕಾದ ಕಿಟಕಿ ತೆರೆದುಕೊಳ್ಳುತ್ತದೆ, ನೀವು ಬದಲಾಯಿಸಬೇಕಾದ ಅಂಶದ ಚೆಕ್ ಬಾಕ್ಸ್ ಗುರುತಿಸಿ. ಅಲ್ಲಿ ನಿಮ್ಮ ವಿಳಾಸದ ಪಿನ್‌ಕೋಡ್ ಹಾಕಿ ನಂತರ ಆಧಾರ್ ಕೇಂದ್ರದಲ್ಲಿ ನೀವು ವಿವರ ತುಂಬಿದ ಹಾಗೆ ವಿವರ ಆಂಗ್ಲ ಭಾಷೆಯಲ್ಲಿ ನಮೂದಿಸಿ. ಅದಾಗಿಯೇ ಕನ್ನಡಕ್ಕೆ ಭಾಷಾಂತರಗೊಳ್ಳುತ್ತದೆ. ಅಲ್ಲಿ ಕೆಲವು ಅಕ್ಷರಗಳು ತಪ್ಪಾಗಬಹುದು. ಅವುಗಳನ್ನು ನಂತರ ತಿದ್ದಿ. ಆಮೇಲೆ ‘Submit Update Request’ ಕ್ಲಿಕ್ಕಿಸಿದಾಗ ನೀವು ತಿದ್ದುಪಡಿ ಮಾಡಿದ ವಿವರಗಳು ಪ್ರತ್ಯಕ್ಷವಾಗುತ್ತದೆ. ಅದನ್ನು ಪರಿಶೀಲಿಸಿ ಸರಿಯಾಗಿದ್ದರೆ ಮುಂದೆ ಹೋಗಿ. ಇಲ್ಲದಿದ್ದರೆ ಪುನಃ ಸರಿಪಡಿಸಬಹುದು. ನಂತರ ತಿದ್ದುಪಡಿಗೆ ಸಂಬಂಧಿಸಿದ ಸ್ವಯಂ ಸಹಿ ಮಾಡಿ ಪೂರ್ಣ ಹೆಸರನ್ನು ಸರಿಯಾಗಿ ಸಹಿಯ ಕೆಳಗೆ ನಮೂದಿಸಿದ ಸ್ಕ್ಯಾನ್ ಮಾಡಿದ ದಾಖಲೆಯನ್ನು (ವಿಳಾಸ, ಹುಟ್ಟಿದ ದಿನಾಂಕ, ಹೆಸರುಗಳ ದಾಖಲೆ) ಕಂಪ್ಯೂಟರಿನಿಂದ ಅಪ್‌ಲೋಡ್ ಮಾಡಬೇಕು. ಇಲ್ಲಿ ಪರಮಾವಧಿ 2 ಎಂಬಿ ಗಾತ್ರದ ದಾಖಲೆಯನ್ನು ಮಾತ್ರ ಅಪ್‌ಲೋಡ್ ಮಾಡಲು ಸಾಧ್ಯ. ಕೆಲವೇ ಸೆಕೆಂಡುಗಳಲ್ಲಿ ಅರ್ಜಿ ದಾಖಲಾದ ಬಗ್ಗೆ ನಿಮಗೆ URN ಸಂಖ್ಯೆ (0000/00111/0XXXX) ಬರುತ್ತದೆ. ಅದನ್ನು ತಪ್ಪದೇ ನಿಮ್ಮ ಆಧಾರ್ ಕಾರ್ಡಿನ ಜೊತೆಜೊತೆಯಾಗಿ ಬರೆದಿಟ್ಟುಕೊಳ್ಳಿ. ನೀವು ಸ್ವೀಕೃತಿ ಪತ್ರವನ್ನು ಸಹ ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು. ಈ ನಂಬರಿನಿಂದ ಮುಂದೆ ನಿಮ್ಮ ಅರ್ಜಿಯ ಸ್ಥಿತಿಗತಿ ತಿಳಿದುಕೊಳ್ಳಬಹುದು ಹಾಗೂ ಸರಿಯಾದ ವಿಳಾಸಕ್ಕೆ ಅದನ್ನು ಪಡೆಯಬಹುದು. 15 ದಿನಗಳ ನಂತರ ಇದೇ ಅಂತಜಾìಲದಲ್ಲಿ update statusನಲ್ಲಿ 12 ಸಂಖ್ಯೆಗಳ URN ನಮೂದಿಸಿ ನಿಮ್ಮ ಅರ್ಜಿಯ ಸ್ಥಿತಿಯನ್ನು ನೋಡಬಹುದು.
ಕಂಪ್ಯೂಟರ್ ಇಲ್ಲದವರು //uidai.gov.in/images/ application_form_11102012.pdf ಅಂತಜಾìಲದಲ್ಲಿರುವ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು ಸರಿಯಾಗಿ ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಅಂಚೆ ಮೂಲಕ ಸಲ್ಲಿಸಬೇಕು. ವಿಳಾಸವನ್ನು ಕೂಡಾ ಅರ್ಜಿಯ ಕೆಳಭಾಗದಲ್ಲಿ ನಮೂದಿಸಲಾಗಿದೆ.
ತಲುಪದ ಆಧಾರ್ ಕಾರ್ಡ್‌ಗೆ ಬದಲಿ ವ್ಯವಸ್ಥೆಇಂದಲ್ಲ ನಾಳೆ, ಆಧಾರ್ ಕಾರ್ಡ್ ನಮ್ಮ ಹಲವು ದಾಖಲೆಗಳಿಗೆ ಪರ್ಯಾಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಆಧಾರ್ ಕಾರ್ಡ್‌ಗೆ ನೊಂದಣಿ ಆಗುವುದೊಳ್ಳೆಯದು. ನಮ್ಮ ಫೋಟೋ, ಬೆರಳ ಛಾಯೆ ಕೊಟ್ಟು ಹಲವು ತಿಂಗಳಾದರೂ ಅಂಚೆಯಲ್ಲಿ ಆಧಾರ್ ಕಾಡ್ ಬಂದಿಲ್ಲ ಎಂತಾದರೆ ತುಂಬಾ ತಲೆಬಿಸಿ ಬೇಡ. ಈಗ ಇ ಆಧಾರ್ ಪ್ರತಿ ಕೂಡ ಆಧಾರ್ ಕಾಡ್‌ಗೆ ಪರ್ಯಾಯವಾಗಬಲ್ಲದು. ಈಗ ಸರ್ಕಾರದಿಂದ ಮಾನ್ಯ ಮಾಡಲಾಗುವ ಮತ್ತು ಸುರಕ್ಷಿತವಾದ ವಿದ್ಯುನ್ಮಾನ ದಾಖಲೆಯಾಗಿ “ಇ ಆಧಾರ್’ನ್ನು ಬಳಸಬಹುದು. ಆಧಾರ್ ಕಾರ್ಡ್ ಕಳೆದುಹೋಗಿದ್ದಲ್ಲಿ, ಹಾಳಾಗಿದ್ದಲ್ಲಿ ಅಥವಾ ಅಂಚೆ ಇಲಾಖೆಯಿಂದ ವಾಪಾಸು ಹೋಗಿದ್ದಲ್ಲಿ ಡಿಜಿಟಲ್ ಆಧಾರ್ ಕಾರ್ಡ್ ಪಡೆಯಬಹುದು. https://uidai.gov.in/ನ ವೆಬ್ ಪುಟ ಪ್ರವೇಶಿಸಿ ನಮ್ಮ ಇ ಆಧಾರ್ ಕಾರ್ಡ್‌ನ್ನು ಡೌನ್‌ಲೋಡ್ [//www.eaadharcard. co.in/aadhaar-card-download/] ಮಾಡಿಕೊಳ್ಳಬಹುದು. ಈ ಮಾಹಿತಿಗಳುಳ್ಳ ಇ ಆಧಾರ್ ಪಡೆಯಲು ನೋಂದಣಿಯಾದ ಮೊಬೈಲ್ ಸಹಿತವಾಗಿ ಪ್ರಯತ್ನಿಸಬೇಕಾಗುತ್ತದೆ. ಇದು ಧೋಕಾ!
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನ್ನು ಪ್ಲಾಸ್ಟಿಕ್ ಕಾರ್ಡ್‌ನಲ್ಲಿ ಮುದ್ರಿಸಿಕೊಡುವ, ಮನೆಬಾಗಿಲಿಗೆ ತಲುಪಿಸುವ ಆಕರ್ಷಕ ವೆಬ್‌ಪುಟಗಳನ್ನು ಗಮನಿಸಬಹುದು. 10 ರೂ. ನಿಂದ ಆರಂಭಿಸಿ 30, 50, ಕೊನೆಗೆ 200 ರೂ.ಗೆ ಈ ಸ್ಮಾರ್ಟ್ ಕಾರ್ಡ್ ಒದಗಿಸುವ ಆನ್‌ಲೈನ್ ವ್ಯಾಪಾರಿಗಳಿದ್ದಾರೆ. ಸಹವಾಸ ಬೇಡ. ಖುದ್ದು ಯುಐಡಿಎಐ ಈ ಬಗ್ಗೆ ಸ್ಪಷ್ಟನೆ ನೀಡಿದೆ, ಆಧಾರ್ ಕಾರ್ಡ್ ವಿಚಾರದಲ್ಲಿ ಸ್ಮಾರ್ಟ್ ಕಾರ್ಡ್ ಎಂಬ ಮಾದರಿಯ ಅವಕಾಶವೇ ಇಲ್ಲ. ಸ್ಮಾರ್ಟ್ ಕಾರ್ಡ್ ಎಂಬುದು ಒಂದು ನೆನಪಿನ ಕೋಶವನ್ನು ಹೊಂದಿರುವಂತ ವ್ಯವಸ್ಥೆ. ಆಧಾರ್ ಕಾರ್ಡ್‌ನಲ್ಲಿ ಈ ವಿಧಾನ ಇಲ್ಲ. ಕಾರ್ಡ್‌ದಾರನ ಸಂಪೂರ್ಣ ಮಾಹಿತಿ ಆಧಾರ್‌ನ ಕೇಂದ್ರ ಕಚೇರಿಯಲ್ಲಿ ಸುರಕ್ಷಿ$ತವಾಗಿರುತ್ತದೆ. ಆಧಾರ್ ಕಾರ್ಡ್‌ನ್ನು ಎಲ್ಲೋ ಸ್ವೀಪ್ ಮಾಡುವ ಪ್ರಮೇಯವೇ ಇಲ್ಲ. ಅಷ್ಟಕ್ಕೂ ಆಧಾರ್ ಕಾರ್ಡ್‌ನ ಕಪ್ಪು ಬಿಳುಪು ಝೆರಾಕ್ಸ್ ಮುದ್ರಣವೂ ಕೂಡ ಬಣ್ಣದ, ಆಧಾರ್ ಕಚೇರಿ ಕಳುಹಿಸಿದ ಆಧಾರ್ ಕಾರ್ಡ್‌ನಷ್ಟೇ ಬೆಲೆಯುಳ್ಳದ್ದು. ತೆಳು ಕಾಗದದ ಮುದ್ರಣವಾದರೂ ಆಧಾರ್ ಆಗಿಯೇ ಪರಿಗಣನೆಯಾಗುತ್ತದೆ. ಆಧಾರ್ ಕಾರ್ಡ್‌ನ ಮುದ್ರಣದ ನೆಪದಲ್ಲಿ ಭಾರತೀಯ ನಾಗರಿಕನ ಪೂರ್ವಾಪರಗಳ ಮಾಹಿತಿ ಸಂಗ್ರಹಿಸುವುದು ಕಾನೂನು ಪ್ರಕಾರ ಶಿûಾರ್ಹ ಅಪರಾಧ. ಇದೇ ವೇಳೆ, ಇ ಆಧಾರ್ ಮುದ್ರಿಸಿಕೊಡುವ ಆಶ್ವಾಸನೆಯ ಸಹಿತವಾದ ಹಲವು ಕಳ್ಳ ವೆಬ್‌ಗಳೂ ಚಾಲ್ತಿಯಲ್ಲಿವೆ. ಎಚ್ಚರಿಕೆಯಿರಲಿ. – ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ