Advertisement
ಸಂವಿಧಾನ ದಿನಾಚರಣೆ ಪ್ರಯುಕ್ತ ಸುಬ್ರಹ್ಮಣ್ಯದಲ್ಲಿ ಶನಿವಾರ ನಡೆದ “ಸಂವಿಧಾನ ಸಂಭ್ರಮ’ ವಿಚಾರ ಸಂಕಿರಣದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು.
Related Articles
Advertisement
ವ್ಯವಸ್ಥೆಯನ್ನು ತಿಧ್ದೋಣರಾಜ್ಯದಲ್ಲಿ ಮೀಸಲಾತಿ ಹೋರಾಟ ದಿಕ್ಕು ತಪ್ಪುತ್ತಿದೆ. ಜಾಗೃತ ಸಮಾಜ ಒಟ್ಟು ವ್ಯವಸ್ಥೆಯನ್ನು ತಿದ್ದುವ ದಿಕ್ಕಿನಲ್ಲಿ ಹೋರಾಟ ನಡೆಸಬೇಕು ಎಂದರು. ಸಚಿವ ಎಸ್. ಅಂಗಾರ ಮಾತನಾಡಿ, ಸಂವಿಧಾನದ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಇದರಿಂದ ಬದುಕಿ ಔನ್ನತ್ಯ ಸಾಧ್ಯ. ಸಂವಿಧಾನದ ಮೇಲೆ ಸರ್ವರೂ ನಂಬಿಕೆ ಇಟ್ಟು ಪಾಲನೆ ಮಾಡಬೇಕು ಎಂದರು. ಸಂವಾದ
ಸಚಿವ ಎ. ನಾರಾಯಣ ಸ್ವಾಮಿ ಅವರು ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಾಧ್ಯಮಗಳು ಸಂವಿಧಾನದ ಜಾಗೃತಿಯನ್ನು ಹೇಗೆ ಮಾಡಬಹುದು ಎಂದು ವಿದ್ಯಾರ್ಥಿನಿ ಚುಂಚನಾ ಪ್ರಶ್ನಿಸಿದರು. ಸಚಿವರು ಉತ್ತರಿಸಿ, ಸಂವಿಧಾನದ ಬಗ್ಗೆ ಚರ್ಚೆ ಮತ್ತು ಸಂವಾದಗಳ ಮೂಲಕ ಜನತೆಯಲ್ಲಿ ಮತ್ತು ಯುವ ಜನತೆಯಲ್ಲಿ ಸಂವಿಧಾನದ ಜಾಗೃತಿ ಮೂಡಿಸಬಹುದು ಎಂದರು. ಸಮ್ಮಾನ
ಎ. ನಾರಾಯಣ ಸ್ವಾಮಿ ಅವರನ್ನು ಸಚಿವ ಎಸ್. ಅಂಗಾರ ಸಮ್ಮಾನಿಸಿದರು. ಇದೇ ವೇಳೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರಿಗೆ 6ನೇ ವೇತನ ಜಾರಿಯಾಗುವಂತೆ ಮಾಡಿದ ಸಚಿವ ಎಸ್. ಅಂಗಾರ ಅವರನ್ನು ದೇವಸ್ಥಾನದ ಸಿಬ್ಬಂದಿಯ ಪರವಾಗಿ ಸಚಿವ ಎ. ನಾರಾಯಣ ಸ್ವಾಮಿ ಸಮಾನಿಸಿದರು. ಕುಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾ.ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿದ್ದರು.
ಯತೀಶ್ ಅರ್ವಾರ ಸ್ವಾಗತಿಸಿ, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್ ವಂದಿಸಿದರು. ಉಪನ್ಯಾಸಕರಾದ ಆರತಿ ಮತ್ತು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.