ಲಾಸ್ ಏಂಜಲಿಸ್ : 59ನೇ ವರ್ಷದ ಗ್ರ್ಯಾಮಿ ಪ್ರಶಸ್ತಿಗಳ ಸಿಂಹಪಾಲನ್ನು ಬ್ರಿಟಿಷ್ ತಾರೆ ಆ್ಯಡೆಲ್ ಅವರು ತಮ್ಮದಾಗಿಸಿಕೊಂಡಿದ್ದಾರೆ.
ಆ್ಯಡೆಲ್ ಅವರು ಆಲ್‌ಬಂ ಆಫ್ ದಿ ಇಯರ್, ರೆಕಾರ್ಡ್ ಆಫ್ ದಿ ಇಯರ್ ಮತ್ತು ಸಾಂಗ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಯಲ್ಲಿ ಬೆಯೋನ್ಸ್ ವಿರುದ್ಧ ವಿಕ್ರಮ ಸಾಧಿಸಿದ್ದಾರೆ.
ಬೆಯೋನ್ಸ್ ಅವರು ಗ್ರ್ಯಾಮಿ ಕಾರ್ಯಕ್ರಮದಲ್ಲಿ ಅತ್ಯದ್ಭುತ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರ ಮೆಚ್ಚುಗೆ, ಹೊಗಳಿಕೆಗೆ ಪಾತ್ರರಾಗಿದ್ದಾರೆ.
ಆ್ಯಡೆಲ್ ಅವರ ಅದ್ಭುತ ಪುನರಾಗಮನದ “ಹಲೋ’ ಟ್ರ್ಯಾಕ್ ಮತ್ತು ಆಲ್‌ಬಂ “25′, ಆಕೆಗೆ ಎಲ್ಲ ಐದು ವಿಭಾಗಗಳಲ್ಲಿ ನಾಮಾಂಕನ ದೊರಕಿಸಿತ್ತು. ಇವುಗಳಲ್ಲಿ ಬೆಸ್ಟ್ ಪಾಪ್ ಸೋಲೋ ಪರ್ಫಾರ್‌ವೆುನ್ಸ್ ಮತ್ತು ಬೆಸ್ಟ್ ಪಾಪ್ ವೋಕಲ್ ಆಲ್‌ಬಂ ಕೂಡ ಸೇರಿತ್ತು.
ಆ್ಯಡೆಲ್‌ಗೆ ಬೆಯಾನ್ಸ್ ಅವರಿಂದ ತೀವ್ರ ಪೈಪೋಟಿ ಎದುರಾಗಿತ್ತು. ಆಕೆಯ ಲೆಮೋನೇಡ್‌ಗೆ 9 ಅನುಮೋದನೆಗಳು ಸಿಕ್ಕಿದ್ದವು. ಆದರೆ ಅಂತಿಮವಾಗಿ ಆಕೆಗೆ ಎರಡು ವಿಭಾಗಗಳಲ್ಲಿ ಮಾತ್ರವೇ ಜಯ ಸಾಧಿಸುವುದು ಸಾಧ್ಯವಾಯಿತು. ಅವೆಂದರೆ ಬೆಸ್ಟ್ ಅರ್ಬನ್ ಕಂಟೆಂಪರರಿ ಮತ್ತು ಬೆಸ್ಟ್ ಮ್ಯೂಸಿಕ್ ವಿಡಿಯೋ.
ಪ್ರಶಸ್ತಿ ಸ್ವೀಕಾರದ ಭಾಗವಾಗಿ ಆ್ಯಡೆಲ್, ಜೇಮ್ಸ್ ಕಾರ್ಡನ್ ನಡೆಸಿಕೊಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ಅತ್ಯಮೋಘ ನಿರ್ವಹಣೆಯ “ಹಲೋ’ ಹಿಟ್ ಸಾಂಗ್ ಹಾಡುವ ಮೂಲಕ, ತನ್ನ ಅಭಿಮಾನಿಗಳಲ್ಲಿ ಕ್ವೀನ್ ಬೇ ಎಂದೇ ಜನಪ್ರಿಯರಾಗಿರುವ ಬೆಯೋನ್ಸ್ ಳ ಗುಣಗಾನ ಮಾಡಿದರು.