ಅಡಿಲೇಡ್: ಆಸ್ಟ್ರೇಲಿಯನ್ ಓಪನ್‌ಗೆ ಅಭ್ಯಾಸಾರ್ಥವಾಗಿ ನಡೆಯುತ್ತಿರುವ “ಅಡಿಲೇಡ್ ಇಂಟರ್‌ನ್ಯಾಶನಲ್ ಟೆನಿಸ್ ಪಂದ್ಯಾ ವಳಿ’ಯಲ್ಲಿ ಶುಕ್ರವಾರ ಭಾರತ ಮಿಶ್ರ ಫಲ ಅನುಭವಿಸಿದೆ.
ರೋಹನ್ ಬೋಪಣ್ಣ-ರಾಮ್‌ಕುಮಾರ್ ರಾಮನಾಥನ್ ಜೋಡಿ ಸೆಮಿಫೈನಲ್ ತಲುಪಿದರೆ, ವನಿತಾ ಜೋಡಿ ಸಾನಿಯಾ ಮಿರ್ಜಾ-ನಾದಿಯಾ ಕಿಚೆನೋಕ್ ಪರಾಭವಗೊಂಡಿದೆ.
ಬೋಪಣ್ಣ-ರಾಮ್‌ಕುಮಾರ್ ಸೇರಿಕೊಂಡು ಬೆಂಜಮಿನ್ ಬೋಂಝಿ-ಹ್ಯೂಗೊ ನೈಸ್ ಜೋಡಿಯನ್ನು 6-1, 6-3ರಿಂದ ಪರಾಭವಗೊಳಿಸಿದರು. ಯಾವುದೇ ಶ್ರೇಯಾಂಕ ಹೊಂದಿಲ್ಲದ ಭಾರ ತೀಯ ಜೋಡಿಯಿನ್ನು 4ನೇ ಶ್ರೇಯಾಂಕದ ಟಾಮಿಸ್ಲಾವ್ ಬ್ರಿಕ್-ಸ್ಯಾಂಟಿಯಾಗೊ ಗೊಂಜಾಲೆಝ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ:ವಿದೇಶದಿಂದ ಬರುವವರಿಗೆ 7 ದಿನ ಕ್ವಾರಂಟೈನ್ ಕಡ್ಡಾಯ
ಸಾನಿಯಾ ಮಿರ್ಜಾ-ನಾದಿಯಾ ಕಿಚೆನೋಕ್ ಆಸ್ಟ್ರೇಲಿಯದ ಪ್ರಬಲ ಜೋಡಿಯಾದ ಆ್ಯಶ್ಲಿ ಬಾರ್ಟಿ-ಸ್ಟಾರ್ಮ್ ಸ್ಯಾಂಡರ್ ವಿರುದ್ಧ ದಿಟ್ಟ ಹೋರಾಟ ನೀಡಿಯೂ 1-6, 6-2, 8-10 ಅಂತರದ ಸೋಲು ಕಾಣಬೇಕಾಯಿತು.