Advertisement

ಸರಕಾರಿ ನೌಕರರಿಗೆ ಹೆಚ್ಚುವರಿ ರಜೆ ಅಂಗಾಂಗ ದಾನಕ್ಕೆ ಉತ್ತೇಜನ

01:08 AM Apr 28, 2023 | Team Udayavani |

ವೈದ್ಯಕೀಯ ಕ್ಷೇತ್ರದ ಮಹಾನ್‌ ಸಂಶೋಧನೆಗಳಲ್ಲೊಂದಾದ ಅಂಗಾಂಗ ಕಸಿ ಮಾನವನ ಪ್ರಾಣ ರಕ್ಷಣೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಮಾನವನ ಕೆಲ ವೊಂದು ಅಂಗಗಳು ಯಾವುದೇ ಕಾಯಿಲೆ ಅಥವಾ ಸಮಸ್ಯೆಯಿಂದಾಗಿ ನಿಷ್ಕ್ರಿಯ ವಾದಾಗ ಆತನ ಜೀವಕ್ಕೆ ಅಪಾಯ ಬಂದೆರಗಬಹುದು. ಇಂತಹ ಸಂದರ್ಭದಲ್ಲಿ ಹಾನಿಗೀಡಾದ ಅಂಗದ ಬದಲಿಗೆ ಇನ್ನೊಬ್ಬರ ಅಂಗವನ್ನು ಶಸ್ತ್ರಕ್ರಿಯೆಯ ಮೂಲಕ ಜೋಡಣೆ ಮಾಡುವುದರಿಂದ ಆತನಿಗೆ ಮರುಜೀವ ನೀಡಲು ಸಾಧ್ಯ. ಆದರೆ ಈ ಬಗ್ಗೆ ಜನರು ಅಷ್ಟೊಂದು ಆಸಕ್ತಿ ತೋರದ ಪರಿಣಾಮ ಅಂಗಾಂಗಗಳ ಕೊರತೆಯ ಕಾರಣದಿಂದಾಗಿ ಅನಾರೋಗ್ಯಪೀಡಿತರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಆದರೆ ಕಳೆದೊಂದು ದಶಕದಿಂದೀಚೆಗೆ ಸರಕಾರದ ಉತ್ತೇಜನ ಕ್ರಮಗಳು, ಕಾನೂನು ನಿಯಮಾವಳಿಗಳಲ್ಲಿನ ಸಡಿಲಿಕೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಅಂಗಾಂಗ ದಾನದ ಬಗೆಗೆ ಜನರಲ್ಲಿ ನಿರಂತರವಾಗಿ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿರುವುದರಿಂದಾಗಿ ನಿಧಾನವಾಗಿ ಜನರಲ್ಲಿ ಅಂಗಾಂಗ ದಾನದ ಮಹತ್ವದ ಬಗೆಗೆ ಜಾಗೃತಿ ಮೂಡತೊಡಗಿದೆ.

Advertisement

ಕೇಂದ್ರ ಸರಕಾರ ಇತ್ತೀ ಚೆಗೆ ಅಂಗಾಂಗ ದಾನದ ಕಾನೂನಿನಲ್ಲಿ ಕೆಲವು ಮಾರ್ಪಾ ಡುಗಳನ್ನು ಮಾಡಿ ಮತ್ತಷ್ಟು ಸರಳಗೊಳಿಸಿದೆ. ಅದರಂತೆ 65ವರ್ಷ ಮೇಲ್ಪಟ್ಟ ರೋಗಿಗಳೂ ಅಂಗಾಂಗ ಪಡೆಯುವುದಕ್ಕೆ ನೋಂದಣಿ ಮಾಡಿಸಿಕೊ ಳ್ಳಬಹುದಾಗಿದೆ. ಅಲ್ಲದೆ ಅಂಗಾಂಗ ದಾನ ಪಡೆದುಕೊಳ್ಳಲು ನಿಗದಿಪಡಿಸಲಾಗುತ್ತಿದ್ದ ವಾಸಸ್ಥಳ ಮಾನದಂಡವನ್ನು ತೆಗೆದು ಹಾಕಲು ರಾಜ್ಯ ಸರ ಕಾರಗಳಿಗೆ ಸೂಚಿಸಿತ್ತು. ಇದರಿಂದಾಗಿ ಅಂಗಾಂಗದ ಆವಶ್ಯಕತೆ ಇರುವವರು ಯಾವ ರಾಜ್ಯದಿಂದ ಬೇಕಾದರೂ ಅಂಗಾಂಗ ವನ್ನು ದಾನವಾಗಿ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ವೇಳೆ ಯಾವುದೇ ಶುಲ್ಕವನ್ನು ಪಡೆಯದಂತೆ ನಿರ್ದೇಶಿಸಿತ್ತು.

ಈಗ ಕೇಂದ್ರ ಸರಕಾರ ಅಂಗಾಂಗ ದಾನ ಮಾಡುವ ತನ್ನ ನೌಕರರಿಗೆ ಈ ಹಿಂದಿನ 30 ದಿನಗಳ ಬದಲಾಗಿ 42 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಅಂಗಾಂಗ ದಾನಕ್ಕೆ ಇನ್ನಷ್ಟು ಹೆಚ್ಚಿನ ಉತ್ತೇಜನ ನೀಡಲು ಮುಂದಾಗಿದೆ. ಅಂಗಾಂಗ ದಾನದ ಸಂದರ್ಭದಲ್ಲಿ ಶಸ್ತ್ರಕ್ರಿಯೆಗೆ ಒಳ ಗಾಗುವುದು ಅನಿವಾರ್ಯವಾದ್ದರಿಂದ ದಾನಿಗಳು ಸಂಪೂರ್ಣವಾಗಿ ಗುಣಮುಖ ರಾಗಲು ಸಹಾಯಕವಾಗುವಂತೆ 12 ದಿನಗಳ ಹೆಚ್ಚುವರಿ ರಜೆಯನ್ನು ನೀಡಲು ಸರಕಾರ ತೀರ್ಮಾನಿಸಿದೆ. ಅಂಗಾಂಗ ದಾನ ಮಾಡಿದ ಕೇಂದ್ರ ಸರಕಾರಿ ನೌಕರರು ಸರಕಾರಿ ನೋಂದಾಯಿತ ವೈದ್ಯರಿಂದ ಪ್ರಮಾಣಪತ್ರವನ್ನು ಪಡೆದುಕೊಂಡು ರಜೆಗಾಗಿ ಮನವಿ ಸಲ್ಲಿಸಿದಲ್ಲಿ ಗರಿಷ್ಠ 42 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗುವುದು ಎಂದು ಕೇಂದ್ರ ಸಿಬಂದಿ ಸಚಿವಾಲಯ ಹೊರಡಿಸಿ ರುವ ಆದೇಶದಲ್ಲಿ ತಿಳಿಸಿದೆ. ಈ ರಜೆಯನ್ನು ಅಂಗಾಂಗವನ್ನು ದಾನ ನೀಡುವ ಸಲುವಾಗಿ ಆಸ್ಪತ್ರೆಗೆ ದಾಖಲಾದ ಸಮ ಯ ದಿಂದ ಪಡೆಯಬಹುದು. ಒಂದು ವೇಳೆ ಸಂಬಂಧಪಟ್ಟ ವೈದ್ಯರು ಅಂಗಾಂಗ ದಾನ ಮಾಡುವ ವಾರ ಮುಂಚಿತವಾಗಿ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿ ಶಿಫಾರಸು ಮಾಡಿದಲ್ಲಿ ಈ ವಿಶೇಷ ರಜೆಯನ್ನು ಪಡೆಯಲು ಅನುಮತಿ ನೀಡಲಾಗುವುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂಗಾಂಗ ದಾನ ಮಾಡು ವವರ ಪ್ರಮಾಣ ತೀರಾ ಕಡಿಮೆ ಇದೆ. ಇದೇ ವೇಳೆ ಸರಿಸುಮಾರು 5ಲಕ್ಷದಷ್ಟು ಮಂದಿ ಅಂಗಾಂಗದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರ ದೇಹದ ಕೆಲವೊಂದು ಅಂಗಾಂಗಗಳನ್ನು ಶಸ್ತ್ರಕ್ರಿಯೆ ಮೂಲಕ ಬದಲಾಯಿಸಿ ಅವರಿಗೆ ಮರುಜೀವ ನೀಡಲು ಅವಕಾಶ ಇದ್ದರೂ ದಾನಿಗಳ ಅಲ ಭ್ಯತೆಯಿಂದಾಗಿ ಇವರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅಂಗಾಂಗ ದಾನದ ಮಹತ್ವದ ಜಾಗೃತಿ ಜತೆಯಲ್ಲಿ ಪ್ರೋತ್ಸಾಹಕ ಕ್ರಮಗಳನ್ನು ಜಾರಿಗೊಳಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next