Advertisement

ಹೊಸ ಮೀಸಲಾತಿಗೆ ಹೆಚ್ಚುವರಿ ಅನುದಾನ ಅಗತ್ಯ

02:44 AM Jan 27, 2019 | Team Udayavani |

ಹೊಸದಿಲ್ಲಿ: ಮೇಲ್ವರ್ಗದ ಬಡವರಿಗೂ ಶೇ. 10ರ ಮೀಸಲಾತಿ ಒದಗಿಸಲು ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಜಾರಿಗೆ ತರಲು ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ದೇಶದ ಐಐಟಿಗಳು ಆಗ್ರಹಿಸಿವೆ. ಈ ಮೀಸಲಾತಿ ನಿಯಮ ಪೂರೈಸಲು ಮೂಲ ಸೌಕರ್ಯ ವೃದ್ಧಿಸಬೇಕಿದೆ. ಹೆಚ್ಚುವರಿ ಅನುದಾನ ಒದಗಿಸಿ ಎಂದು ಐಐಟಿಗಳು ಕೇಳಿದ್ದು, ಇದಕ್ಕೆ ಪೂರಕವಾಗಿ ಪ್ರತಿ ಸಂಸ್ಥೆಯ ಡೇಟಾವನ್ನು ನೀಡುವಂತೆ ಸರಕಾರ ಕೇಳಿದೆ. ಸದ್ಯ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ ಮೂಲಕ ಐಐಟಿಗಳಿಗೆ ಹಣಕಾಸು ನೆರವು ಒದಗಿಸಲಾಗುತ್ತದೆ. ಇದು ಕೆನರಾ ಬ್ಯಾಂಕ್‌, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಂಟಿ ಸಂಸ್ಥೆಯಾಗಿದ್ದು, ಈ ಸಂಸ್ಥೆ ಒದಗಿಸುವ ಆರ್ಥಿಕ ನೆರವು ಸಾಲದು ಎಂದು ಐಐಟಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next