Advertisement

ಮಣಿಪುರಕ್ಕೆ ಹೆಚ್ಚುವರಿ ಪಡೆ ನಿಯೋಜನೆ: ಇಂಫಾಲ್‌ ತಲುಪಿದ 900 ಯೋಧರು

08:30 PM Aug 06, 2023 | Pranav MS |

ಇಂಫಾಲ್‌: ಮಣಿಪುರದಲ್ಲಿ ಹಿಂಸಾ ಕೃತ್ಯಗಳು ಮತ್ತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿಯ 900 ಯೋಧರನ್ನು ಹೆಚ್ಚುವರಿಯಾಗಿ ಕಳುಹಿಸಿಕೊಟ್ಟಿದೆ. ಶನಿವಾರ ರಾತ್ರಿಯೇ ಅವರೆಲ್ಲರೂ ಮಣಿಪುರ ರಾಜಧಾನಿ ಇಂಫಾಲ್‌ಗೆ ಆಗಮಿಸಿದ್ದಾರೆ. ಮೇ 3ರಿಂದ ಹಿಂಸಾತ್ಮಕ ಘಟನೆಗಳು ಶುರುವಾದ ಬಳಿಕ ಕೇಂದ್ರ ಸರ್ಕಾರ ಇದುವರೆಗೆ 40 ಸಾವಿರ ಮಂದಿ ಅರೆಸೇನಾ ಪಡೆಗಳ ಯೋಧರನ್ನು ನಿಯೋಜಿಸಿದೆ.

Advertisement

ಇದೇ ವೇಳೆ, ಈಶಾನ್ಯ ರಾಜ್ಯದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಶನಿವಾರ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಹೀಗಾಗಿ, 24 ಗಂಟೆಗಳ ಅವಧಿಯಲ್ಲಿ ಒಟ್ಟು ಆರು ಮಂದಿ ಅಸುನೀಗಿದ್ದಾರೆ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಗುಂಪುಗಳೆರಡರ ನಡುವೆ ಬಡಿದಾಟ ನಡೆದಿದೆ. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಗುಂಪು ನಿಯಂತ್ರಿಸಲು ಗಂಡು ಹಾರಿಸಿದ್ದಾರೆ. ಇದೇ ವೇಳೆ, ಇಂಫಾಲ ಪೂರ್ವ ಜಿಲ್ಲೆಯಲ್ಲೂ ಹಿಂಸಾಕೃತ್ಯಗಳು ನಡೆದಿವೆ.

ಐವರ ಸಸ್ಪೆಂಡ್‌:
ಮೇ 4ರಂದು ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿದೆ. ಇದೇ ವೇಳೆ, ಪೊಲೀಸ್‌ ಠಾಣೆಗಳಿಂದ ದೋಚಲಾಗಿದ್ದ ಶಸ್ತ್ರಾಸ್ತ್ರಗಳ ಪೈಕಿ 1,195ನ್ನು ಮತ್ತೆ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next