Advertisement
ವೆನ್ಲಕ್ ಆಸ್ಪತ್ರೆ ಮಕ್ಕಳ ವಿಭಾಗದ ಹಿಂಭಾಗದಲ್ಲಿ ಹೊಸ ಕಟ್ಟಡ ತಲೆ ಎತ್ತಲಿದ್ದು, ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣ ಹಂತದಲ್ಲಿದೆ. 176 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ವಿಭಾಗದ ನೂತನ ಕಟ್ಟಡವನ್ನು 15.16 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿಗಾಗಿ ಆರೋಗ್ಯ ರಕ್ಷಾ ಸಮಿತಿಯ ಕ್ಲಿನಿಕಲ್ ವೆಚ್ಚದಿಂದ 5.10 ಕೋಟಿ ರೂ. ಗಳನ್ನು ಕೆಎಚ್‌ಎಸ್‌ಡಿಆರ್‌ಪಿಗೆ ಪಾವತಿಸಲಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗದ ಕೆಳ ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಮುಗಿದಿದ್ದು, ಎರಡನೇ ಅಂತಸ್ತಿನ ಕಾಮಗಾರಿ ಪ್ರಗತಿಯಲ್ಲಿದೆ.
ಬ್ರಿಟಿಷ್ ರಾಣಿ ವಿಕ್ಟೋರಿಯಾ ಕಾಲದಲ್ಲಿ ನಿರ್ಮಾಣವಾದ ಹಳೆ ಲಾಂಡ್ರಿ ಆಸ್ಪತ್ರೆ ಆವರಣದಲ್ಲಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ರೋಗಿ ಮತ್ತು ಸಂಬಂಧಿಕರ ಬಟ್ಟೆ ಒಗೆಯಲು ತೊಂದರೆಯಾಗುತ್ತಿದೆ. ಇದನ್ನು ಕೆಡವಿ ಹೊಸ ಲಾಂಡ್ರಿ ನಿರ್ಮಾಣ ಮಾಡುವ ಚಿಂತನೆಯಿದೆ. ರೀಜನಲ್ ಎಡ್ವಾನ್ಸ್‌ಡ್ ಪೀಡಿಯಾಟ್ರಿಕ್ ಕೇರ್ ಸೆಂಟರ್‌ನ್ನು (ಆರ್ ಎಪಿಸಿಸಿ) ಮಕ್ಕಳ ಆರೋಗ್ಯ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದಕ್ಕಾಗಿ 3 ಕೋ. ರೂ. ಬಿಡುಗಡೆಯಾಗಿದೆ. ಕಟ್ಟಡದ ಪೈಂಟಿಂಗ್, ಮರು ನವೀಕರಣ ಜತೆಗೆ 40 ಕೋಣೆಗಳ ವಿಶೇಷ ವಾರ್ಡ್‌ನ್ನು ನಿರ್ಮಿಸಲಾಗುತ್ತಿದೆ. ಈಗಿರುವ ಎನ್‌ಐ ಸಿಯು ವಿಭಾಗ ಸಂಕೀರ್ಣವಾಗಿದ್ದು, ಅದನ್ನು ವಿಸ್ತರಿಸುವ ಯೋಜನೆಯಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ‘ಉದಯವಾಣಿಯ ಸುದಿನ’ಕ್ಕೆ ತಿಳಿಸಿದ್ದಾರೆ.
Related Articles
ವೆನ್ಲಾಕ್‌ಆಸ್ಪತ್ರೆಗೆ ರಾಜ್ಯದ ನಾನಾ ಭಾಗಗಳಿಂದ ರೋಗಿಗಳು ಬರುತ್ತಾರೆ. ಸರಕಾರಿ ಆಸ್ಪತ್ರೆಗಳ ಪೈಕಿ ಉತ್ತಮ ಆಸ್ಪತ್ರೆ ಎಂದೂ ಗುರುತಿಸಿ ಕೊಂಡಿದ್ದರೂ ಆಸ್ಪತ್ರೆ ಕಟ್ಟಡವು 170 ವರ್ಷ ಹಳೆಯದಾಗಿದ್ದು, ಶಿಥಿಲಾ ವಸ್ಥೆಯಲ್ಲಿದೆ. ಅದು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಆತಂಕ ಸೃಷ್ಟಿಸುವಂತಿದೆ. ಅದರಲ್ಲೂ 2 ಬ್ಲಾಕ್‌ನ ಕಟ್ಟಡ ಸಂಪೂರ್ಣ ಹಾಳಾಗಿದೆ. ಈ ಹಿನ್ನೆಲೆ ಯಲ್ಲಿ ಶೀಘ್ರ ಕಟ್ಟಡದ ದುರಸ್ತಿ ನಡೆಸಲಾಗುವುದು. 1000 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯನ್ನು ತಜ್ಞ ವೈದ್ಯರಿಂದ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸುವ ತರ್ಶರಿ ಕೇರ್ (Tertiary Care) ರೀಜನಲ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.
Advertisement
ಹಂತ-ಹಂತವಾಗಿ ಅಭಿವೃದ್ಧಿವೆನ್ಲಾಕ್ ಅನ್ನು ಮಾದರಿ ಆಸ್ಪತ್ರೆಯಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ನಡೆಯುತ್ತಿದೆ. ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣ ಹಂತದಲ್ಲಿದೆ. ಮೆಡಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗ ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ. ಹಂತ ಹಂತವಾಗಿ ಎಲ್ಲ ಅಭಿವೃದ್ಧಿ ನಡೆಸಲಾಗುವುದು.
– ಡಾ| ರಾಜೇಶ್ವರಿ ದೇವಿ, ವೈದ್ಯಕೀಯ
ಅಧೀಕ್ಷಕಿ, ವೆನ್ಲಾಕ್ ಆಸ್ಪತ್ರೆ ಧನ್ಯಾ ಬಾಳೆಕಜೆ