Advertisement
91.09 ಕೋ. ರೂ. ವೆಚ್ಚದ ಯೋಜನೆ ರಾಜ್ಯ ಬಂದರು ಮತ್ತು ಒಳ ಜಲಸಾರಿಗೆ ಇಲಾಖೆ ಕರಾವಳಿ ತೀರದ ಸುರಕ್ಷತೆಗೆ ಈ ಯೋಜನೆಯನ್ನು ಪರಿಷ್ಕೃತ ಮೊತ್ತ ಮೊತ್ತ 91.09 ಕೋಟಿ ರೂ.ನಲ್ಲಿ ಅನುಷ್ಠಾನಗೊಳಿಸಿದ್ದು ಈಗಾಗಲೇ ಶೇ.45ರಷ್ಟು ಕಾಮಗಾರಿ ಪೂರೈಸಲಾಗಿದೆ. ಕರಾವಳಿ
ಯಲ್ಲಿ ಇದನ್ನು ಪ್ರಾಯೋಗಿಕ ಯೋಜನೆಯಾಗಿ ಅನುಷ್ಠಾನಿಸ ಲಾಗುತ್ತಿದೆ.
ಯೋಜನೆ ಏನು?
ಉದ್ಯಾವರ ಗ್ರಾಮ ಪಂಚಾಯತ್ ಇದರ 13ನೇ ವಾರ್ಡಿನ 5 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ 35 ರಾಕ್‌ಗ್ರೋಯ್ನಗಳನ್ನು ಪರಸ್ಪರ 125 ರಿಂದ 130 ಮೀಟರ್ ಅಂತರಗಳಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ 16ರಷ್ಟು ರಾಕ್‌ಗ್ರೋಯ್ನಗಳನ್ನು ನಿರ್ಮಿಸಲಾಗಿದ್ದು, ಉಳಿದ ರಾಕ್‌ಗ್ರಾಯಿನ್ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಕಲ್ಲುಗಳನ್ನು ಹೇರುವ ಮೊದಲು ತಳಭಾಗದಲ್ಲಿ ಜಿಯೋ ಟೆಕ್ಸ್ ಟೈಲ್ಸ್ ಫೈಬರ್ ಹೊದಿಕೆಯನ್ನು ಬಳಸಿಕೊಂಡು ಅದರ ಮೇಲ್ಭಾಗದಲ್ಲಿ 10 ರಿಂದ 100 ಕೆ.ಜಿ. ಭಾರದ ಕಲ್ಲುಗಳು, ಅನಂತರದಲ್ಲಿ 100 ರಿಂದ 200 ಕೆ.ಜಿ. ಭಾರದ ಕಲ್ಲುಗಳನ್ನು ಹಾಕಲಾಗುತ್ತದೆ. ಅದರ ಮೇಲ್ಭಾಗದಲ್ಲಿ 1ರಿಂದ 3 ಟನ್ ಭಾರದ ಕಲ್ಲುಗಳನ್ನು ಪೇರಿಸಿಡಲಾಗುತ್ತದೆ. ಬಳಿಕ 2 ರಿಂದ 4 ಟನ್ ಭಾರದ ಕಲ್ಲುಗಳ ಪದರವನ್ನು ನಿರ್ಮಿಸಲಾಗುತ್ತಿದೆ.
ರಾಕ್‌ಗ್ರೋಯ್ನಗಳನ್ನು ಬಳಸಿ ಸಮುದ್ರ ತೀರಗಳನ್ನು ಸುರಕ್ಷಿತವಾಗಿಡುವ ಯೋಜನೆಗಳು ವಿದೇಶಗಳ ಪ್ರಖ್ಯಾತ ಬೀಚ್‌ಗಳಲ್ಲೂ ಮಾಡಲಾಗಿದೆ. ಸ್ಪೇನ್‌ನ ಕ್ಯಾಟಲೋನಿಯಾ ಸಮುದ್ರತೀರ, ಅಮೆರಿಕದ ನ್ಯೂಜೆರ್ಸಿಯ ಸೀ ಬ್ರೈಟ್ ಬೀಚ್‌ಗಳಲ್ಲಿ ಅಳವಡಿಸಲಾಗಿದೆ. ಯುಕೆಯ ಮುಂಡ್‌ಸ್ಲೆ„ ಬೀಚ್‌ನಲ್ಲಿ ಮರದ ದಿಮ್ಮಿಗಳನ್ನು ಹಾಕಿದ ಗ್ರೋಯ್ನಗಳನ್ನು ಅಳವಡಿಸಲಾಗಿದೆ.
Related Articles
ಯೋಜನೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಸಮುದ್ರ ತೀರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಂಗ್ರಹಗೊಳ್ಳುತ್ತಿದೆ. ಕಡಲ್ಕೊರೆತದ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ಮೀನುಗಾರಿಕೆಗೆ ಅಡ್ಡಿ, ಆತಂಕ ಇಲ್ಲ .
– ಕೃಷ್ಣ ಜಿ.ಕೋಟ್ಯಾನ್,
ಗ್ರಾ. ಪಂ. ಸದಸ್ಯ, ಉದ್ಯಾವರ
Advertisement
– ವಿಜಯ ಆಚಾರ್ಯ ಕಟಪಾಡಿ