Advertisement

ಅಡವಿರಾಯ ಅದ್ಧೂರಿ ರಥೋತ್ಸವ

01:44 PM May 19, 2019 | Suhan S |

ಕುಷ್ಟಗಿ: ಭಕ್ತರ ಆರಾಧ್ಯ ದೈವ ಶ್ರೀಅಡವಿ ಮುಖ್ಯ ಪ್ರಾಣೇಶ ರಥೋತ್ಸವ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶನಿವಾರ ಸಂಜೆ ಜಯಘೋಷದೊಂದಿಗೆ ವೈಭವದಿಂದ ಜರುಗಿತು.

Advertisement

ತಾಲೂಕಿನ ಪ್ರಮುಖ ಜಾತ್ರೆಗಳಲ್ಲೊಂದಾದ ಶ್ರೀ ಅಡವಿ ಮುಖ್ಯ ಪ್ರಾಣೇಶ ಜಾತ್ರೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ಇಲ್ಲಿನ ಮುಖ್ಯ ಪ್ರಾಣೇಶ ದೇಗುಲದಲ್ಲಿ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ರಥಾಂಗ ಹೋಮ, ಪವಮಾನ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ನೈವೇದ್ಯ, ತೀರ್ಥ ಪ್ರಸಾದ ಕಾರ್ಯಕ್ರಮಗಳು ಜರುಗಿದವು.

ಸಂಜೆ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next