Advertisement

ಯೋಗ ಅಳವಡಿಸಿಕೊಳ್ಳಿ ಸದೃಢರಾಗಿ: ಪದಕಿ

05:54 PM Feb 08, 2022 | Team Udayavani |

ಧಾರವಾಡ: ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಬೇಕೆಂದು ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹೇಳಿದರು.

Advertisement

ನಗರದ ಮಾಳಮಡ್ಡಿ ಕೆ.ಇ.ಬೋರ್ಡ್‌ ಹೈಸ್ಕೂಲ್‌ ಮೈದಾನದಲ್ಲಿ ಕೆ.ಇ.ಬೋರ್ಡ್‌ನ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಇಂಗ್ಲಿಷ್‌ ಮಾಧ್ಯಮ ಹಾಗೂ ಸಿಬಿಎಸ್‌ಸಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪತಂಜಲಿ ಯೋಗ ಶಿಕ್ಷಣ ಕೇಂದ್ರ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಥಸಪ್ತಮಿ ದಿನದ 75 ಕೋಟಿ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯೋಗ ಮಕ್ಕಳ ಆರೋಗ್ಯ ವೃದ್ಧಿಸುವಲ್ಲಿ ಸಹಾಯಕವಾಗಿದೆ. ಆದ್ದರಿಂದ ಎಲ್ಲರೂ ಯೋಗ ಮಾಡಿ ರೋಗ ಓಡಿಸಿ ಎಂದು ಸಲಹೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಪ್ರಭಾರಿ ಯೋಗಾಚಾರ್ಯ ಡಾ|ಭವರಲಾಲ ಆರ್ಯ ಮಾತನಾಡಿ, ಸರ್ವರೋಗ ನಿವಾರಣೆಗಾಗಿ ಯೋಗ ಮಾಡುವ ಮೂಲಕ ಆರೋಗ್ಯ ಪಡೆಯಿರಿ ಎಂದರು.

ಈ ಯೋಗ ಅಭಿಯಾನದಲ್ಲಿ ಪಾಲ್ಗೊಂಡಿದ್ದ 2 ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಯೋಗದ ಮಾದರಿ ಹಾಗೂ ಸೂರ್ಯ ನಮಸ್ಕಾರ ಮಾಡಿಸಲಾಯಿತು. ಪತಂಜಲಿ ಯೋಗ ಕೇಂದ್ರದ ಜಿಲ್ಲಾ ಪ್ರಭಾರಿ ರಮೇಶ ಸುಲಾಖೆ, ಮಹಿಳಾ ಪ್ರಭಾರಿ ಶೈಲಾ ಮಡೇಕರ್‌, ನಾಗರತ್ನ ಸುಲಾಖೆ, ಲೀಲಾವತಿ ಸಾಮ್ರಾಣಿ, ಬಸವರಾಜ ಮಮ್ಮಿಗಟ್ಟಿ, ಶ್ರೀದೇವಿ ದೇಶಪಾಂಡೆ, ವಸಂತ ಮುರ್ಡೇಶ್ವರ, ಮಂಜುನಾಥ ಅಡಿವೇರ, ಎನ್‌. ಎಸ್‌. ಗೋವಿಂದರಡ್ಡಿ, ಅಶ್ವಿ‌àನ್‌ಕುಮಾರ, ಸ್ಮಿತಾ ಕುಲಕರ್ಣಿ, ವಂದನಾ ಹರಪನಹಳ್ಳಿ, ಎನ್‌.ಎನ್‌. ಸವಣೂರ, ಶರಣಪ್ಪ ಗುತ್ತೂರ, ಮಹಾಂತೇಶ ದೇಸಾಯಿ, ಆರ್‌.ವಿ. ಕಾತರಕಿ, ಕೆ.ಡಿ.ಈರನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next