Advertisement

ವಿವೇಕರ ಆದರ್ಶ ಅಳವಡಿಸಿಕೊಳ್ಳಿ

11:14 AM Jan 14, 2019 | Team Udayavani |

ಶಹಾಪುರ: ತಾಲೂಕಿನ ಸಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ಪರಿಸರ ಸುರಕ್ಷಾ ಟ್ರಸ್ಟ್‌ ಹಾಗೂ ಶ್ರೀ ಕರಿಬಸವೇಶ್ವರ ಯುವಕ ಸಾಂಸ್ಕೃತಿಕ ಕಲಾ ಸಂಘದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

Advertisement

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ದೇಶ್ವರ ಶಿವಚಾರ್ಯರು ಮಾತನಾಡಿ, ಸ್ವಾಮಿ ವಿವೇಕಾನಂದರು ಇಡೀ ಜಗತ್ತಿನಲ್ಲಿ ಧಾರ್ಮಿಕತೆ ಕುರಿತು ಸತ್ಯಾಂಶವನ್ನು ಸಾರಿದರು. ವಿವೇಕಾನಂದರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ಧಾರ್ಮಿಕತೆಗೆ ಎಂಥಹ ಶಕ್ತಿ ಇದೆ ಎಂಬುದನ್ನು ಇಡೀ ಜಗತ್ತಿಗೆ ಸಾರಿದ ಮೊದಲ ಸಂತ ಸ್ವಾಮಿ ವಿವೇಕಾನಂದರು. ನೀವು ಕೂಡ ಮಹಾನ್‌ ಸಾಧಕರ ಜೀವನ ಚರಿತ್ರೆ ತಿಳಿದುಕೊಂಡು ಬದಕನ್ನು ರೂಪಿಸಿಕೊಳ್ಳಬೇಕು ಎಂದರು. ಗ್ರಾಮದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಯೋಗಪಟು ಮಹೇಶ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಶ್ರೀಶೈಲ ಬಂಟನೂರು ನಿರೂಪಿಸಿದರು. ನ್ಯಾಮಣ್ಣ ಪ್ರತಿಹಸ್ತ ಸ್ವಾಗತಿಸಿದರು. ಶಿವಬಸಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next