Advertisement

ಕೃಷ್ಣನ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಳ್ಳಿ

11:06 AM Aug 15, 2017 | Team Udayavani |

ಚಿತ್ತಾಪುರ: ಶ್ರೀ ಕೃಷ್ಣನ ತತ್ವ ಮತ್ತು ಸಿದ್ಧಾಂತ, ಸಾಧನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗದುಗಿನ ವಾಗ್ಮಿ ಪಂಡಿತ ಪುಟ್ಟರಾಜರು ಹೀರೆಮಠ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜಯಂತಿ ಕಾರ್ಯಕ್ರಮ
ಹಮ್ಮಿಕೊಳ್ಳುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದರು. ಯಾದವ ಸಮಾಜದ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಯಾದವ, ಹಣಮಂತಪ್ಪ ಯಾದವ ಮಾತನಾಡಿದರು. ತಹಶೀಲ್ದಾರ ಮಲ್ಲೇಶಾ ತಂಗಾ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಬಾಬು ಜಗಜೀವನರಾಂ ಸಮಿತಿ ಅಧ್ಯಕ್ಷ
ರಾಜಣ್ಣ ಕರದಾಳ, ಗ್ರೇಡ್‌-2 ತಹಶೀಲ್ದಾರ ರವೀಂದ್ರ ದಾಮಾ, ತಾಲೂಕು ಅಧಿಕಾರಿಗಳಾದ ಡಾ| ಬಸಲಿಂಗಪ್ಪ ಡಿಗ್ಗಿ, ಜಾಲೇಂದ್ರ ಗುಂಡಪ್ಪ, ಜಗದೀಶ, ಶಂಕರಗೌಡ, ವಿಜಯಕುಮಾರ ಲೊಡ್ಡೆನೋರ, ದೇವಿಂದ್ರರೆಡ್ಡಿ ದುಗನೂರ, ಸಿದ್ರಾಮಪ್ಪ ನಾಚವಾರ, ತಮ್ಮಣ್ಣ ಡಿಗ್ಗಿ, ಧನರಾಜ ಯಾದವ, ಮೋಜನರಾಜ ಯಾದವ, ಅನೀಲ ಯಾದವ, ಹಣಮಂತ ಯಳವಂತಗಿ, ಅಂಬ್ರೀಷ ಸುಲೇಗಾಂವ, ಅಶ್ವತ ರಾಠೊಡ, ಮಹೇಶ ಜಾಯಿ, ನರಹರಿ ಕುಲಕರ್ಣಿ, ಭೀಮು ಹೊತಿನಮಡಿ ಇದ್ದರು. ಪಾಯಲ್‌ ಪ್ರಾರ್ಥಿಸಿದರು. ಅಕ್ಷತಾ, ಭಾಗ್ಯಶ್ರೀ ಕೃಷ್ಣನ ಗೀತೆ ಹಾಡಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ, ವಂದಿಸಿದರು. ತಹಶೀಲ್ದಾರ ಕಚೇರಿಯಿಂದ ಆರಂಭವಾದ ಶ್ರೀಕೃಷ್ಣನ
ಭಾವಚಿತ್ರದ ಮೆರವಣಿಗೆ ನಾಗಾವಿ ಚೌಕ್‌, ಜನತಾ ಚೌಕ್‌, ಕಪ್ಪಡ ಬಜಾರ, ಭುವನೇಶ್ವರಿ ಚೌಕ್‌, ಅಂಬೇಡ್ಕರ್‌ ಚೌಕ್‌, ಬಸ್‌ ನಿಲ್ದಾಣ,
ಬಸವೇಶ್ವರ ಚೌಕ್‌ ಮೂಲಕ ಸಂಚರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next