ಮುಂಬೈ: ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ನ ಅದಾನಿ ಪೋರ್ಟ್ಸ್ (ಬಂದರು)ನ ಅಡಿಟರ್ ಸ್ಥಾನಕ್ಕೆ ಡೆಲಾಯ್ಟ್ ಆಡಿಟಿಂಗ್ ಸಂಸ್ಥೆ ರಾಜೀನಾಮೆ ನೀಡಿದ್ದು, ಸೋಮವಾರ (ಆಗಸ್ಟ್ 14) ಷೇರುಪೇಟೆ ವಹಿವಾಟಿನಲ್ಲಿ ಅದಾನಿ ಪೋರ್ಟ್ಸ್ ಶೇರು ಮೌಲ್ಯ ಶೇ.4ರಷ್ಟು ನಷ್ಟ ಕಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Sandalwood Couple:ಶುರುವಾಯ್ತು ಭುವನ್-ಹರ್ಷಿಕಾ ಮದುವೆ ಸಂಭ್ರಮ;ಆ. 24ರಂದು ಅದ್ದೂರಿ ವಿವಾಹ
ಡೆಲಾಯ್ಟ್ ರಾಜೀನಾಮೆ ಸುದ್ದಿ ಬೆನ್ನಲ್ಲೇ ಬಾಂಬೆ ಷೇರುಪೇಟೆಯಲ್ಲಿನ ಆರಂಭಿಕ ವಹಿವಾಟಿನಲ್ಲಿ ಅದಾನಿ ಪೋರ್ಟ್ಸ್ ಷೇರು ಬೆಲೆ ಶೇ.4ರಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿದೆ.
ಹಿಂಡೆನ್ ಬರ್ಗ್ ವರದಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವಂತೆ ಅದಾನಿ ಪೋರ್ಟ್ಸ್ ಡೆಲಾಯ್ಟ್ ಸಂಸ್ಥೆಗೆ ಸೂಚಿಸಿತು. ಆದರೆ ಈ ಆರೋಪದಿಂದ ಅದಾನಿ ಪೋರ್ಟ್ಸ್ ವಹಿವಾಟು, ಆರ್ಥಿಕ ಪ್ರಗತಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ತಿಳಿಸಿತ್ತು. ಈ ಭಿನ್ನಾಭಿಪ್ರಾಯದಿಂದ ಡೆಲಾಯ್ಟ್ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.
ಆದರೆ ಸ್ಟಾಕ್ ಎಕ್ಸ್ ಚೇಂಜ್ ಗೆ ಸಲ್ಲಿಸಿರುವ 163 ಪುಟಗಳ ಫೈಲಿಂಗ್ ನಲ್ಲಿ ಡೆಲಾಯ್ಟ್ ಹಸ್ಕಿನ್ಸ್ & ಸೆಲ್ಸ್ ಎಲ್ ಎಲ್ ಪಿ ರಾಜೀನಾಮೆ ನೀಡಿರುವ ಬಗ್ಗೆ ವಿವರಣೆ ನೀಡಿದ್ದು, ಅದಾನಿ ಕಂಪನಿಯ ಬೃಹತ್ ಆಡಿಟ್ ಕಾರ್ಯ ಕೈಗೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಿವರಿಸಿದೆ.