Advertisement
ಸಂಸತ್ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, “ದೇಶದಲ್ಲಿ ಸಣ್ಣ ಸಣ್ಣ ಆರೋಪಿಗಳಿಗೂ ಜನರನ್ನು ಬಂಧಿಸುತ್ತಿರುವಾಗ, ಅದಾನಿ ಯನ್ನು ಏಕೆ ಬಂಧಿಸುತ್ತಿಲ್ಲ. ಅದಾನಿ ಸಾವಿ ರಾರು ಕೋಟಿ ರೂ. ಪ್ರಕರಣದಲ್ಲಿ ಆರೋಪಿ ಯಾಗಿದ್ದಾರೆ. ಹೀಗಾಗಿ ಬಂಧಿಸಬೇಕು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಗೌತಮ್ ಅದಾನಿ, ಸಾಗರ್ ಅದಾನಿ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿರುವ ಅದಾನಿ ಗ್ರೂಪ್ ಎಲ್ಲ ಆರೋಪಗಳನ್ನು ತಿರಸ್ಕರಿಸಿದೆ. ಈ ಬಗ್ಗೆ ಬಾಂಬೆ ಷೇರು ಪೇಟೆಗೆ ಲಿಖೀತ ಉತ್ತರ ನೀಡಿರುವ ಗ್ರೂಪ್ ಗೌತಮ್ ಮತ್ತು ಸಾಗರ್ ವಿರುದ್ಧ ಅಮೆರಿಕದ ಭ್ರಷ್ಟಾಚಾರ ಕಾಯ್ದೆಯ ಅನ್ವಯ ಕೇಸು ದಾಖಲಾಗಿಲ್ಲ ಎಂದಿದೆ. ಅದಾನಿ ಪರ ರೋಹ್ಟಗಿ, ಜೇಠ್ಮಲಾನಿ ವಾದ
ಅದಾನಿ ಗ್ರೂಪ್ ಪರ ಖ್ಯಾತ ವಕೀಲರಾ ಗಿರುವ ಮುಕುಲ್ ರೋಹ್ಟಗಿ, ಮಹೇಶ್ ಜೇಠ್ಮಲಾನಿ ವಾದ ಮಂಡಿಸ ಲಿದ್ದಾರೆ. ಅದಾನಿ ವಿರುದ್ಧ 5 ಪ್ರಕರಣಗ ಳನ್ನು ದಾಖಲಿಸಲಾಗಿದೆ. ಇದರಲ್ಲಿ ಪ್ರಮುಖ ಎನಿಸಕೊಂಡಿರುವ ಮೊದಲ ಮತ್ತು 5ನೇ ಪ್ರಕರಣಗಳಲ್ಲಿ ಗೌತಮ್ ಹಾಗೂ ಸಾಗರ್ ಅದಾನಿ ಹೆಸರಿಲ್ಲ ಎಂದು ರೋಹrಗಿ ಹೇಳಿದ್ದಾರೆ.