Advertisement

ಎನ್‌ಡಿಟಿವಿಯ ಶೇ.26 ಷೇರು ಖರೀದಿಸಿದ ಅದಾನಿ

08:38 PM Aug 23, 2022 | Team Udayavani |

ನವದೆಹಲಿ: ದೇಶದ ಜನಪ್ರಿಯ ಇಂಗ್ಲಿಷ್‌ ಸುದ್ದಿವಾಹಿನಿ ನ್ಯೂಡೆಲ್ಲಿ ಟೆಲೆವಿಷನ್‌ ಲಿಮಿಟೆಡ್‌ (ಎನ್‌ಡಿಟಿವಿ)ಯ ಶೇ.26ರಷ್ಟು ಷೇರುಗಳನ್ನು ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಖರೀದಿಸಲಿದೆ.

Advertisement

ಒಟ್ಟಾರೆಯಾಗಿ ಕಂಪನಿ ಪರೋಕ್ಷವಾಗಿ ಚಾನೆಲ್‌ನ ಶೇ.29.18ರಷ್ಟು ಷೇರುಗಳನ್ನು ಪರೋಕ್ಷವಾಗಿ ಹೊಂದಲಿದೆ.

ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈ.ಲಿ, ಎಎಂಜಿ ಮೀಡಿಯಾ ನೆಟ್‌ರ್ಕ್‌ ಅದಾನಿ ಎಂಟರ್‌ಪ್ರೈಸಸ್‌ ಜತೆಗೂಡಿ ಎನ್‌ಡಿಟಿವಿಯ ಪ್ರತಿ ಷೇರಿಗೆ 294 ರೂ. ನೀಡುವ ಆಫ‌ರ್‌ ಮಾಡಿದ್ದಾರೆ. ಅದರಂತೆ 1,67,62,530 ಷೇರುಗಳನ್ನು ಕಂಪನಿ ಖರೀದಿಸಲಿದೆ.

ಮಾ.31ಕ್ಕೆ ಮುಕ್ತಾಯಗೊಂಡಂತೆ ಎನ್‌ಡಿಟಿವಿ 230.91 ಕೋಟಿ ರೂ. ಆದಾಯ ಹೊಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next