Advertisement

ಅದಮಾರು ಮಠ ಬಿಎಸ್‌ಕೆಬಿಎ ಗೋಕುಲದಿಂದ ಮಕರ ಸಂಕ್ರಾಂತಿ

12:33 PM Jan 17, 2019 | |

ಮುಂಬಯಿ: ಗೋಪಾ ಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜ. 14 ರಂದು  ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ  ಅದಮಾರು ಮಠ ದಲ್ಲಿ ವಾರ್ಷಿಕ ಮಕರ ಸಂಕ್ರಾಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಹರಿ ನಾರಾಯಣ ಹರಿ ಗೋವಿಂದ ಧ್ಯೇಯವಾಗಿಸಿಕೊಂಡು  ಧಾರ್ಮಿಕ ಕಾರ್ಯಕ್ರಮಗಳು ನಡೆ ಯಿತು. ಮುಂಜಾನೆ ಸಾಮೂಹಿಕ ಸಂಕಲ್ಪ ಮತ್ತು ಸಾಮೂಹಿಕ ಶ್ರೀ ಸತ್ಯನಾರಾ ಯಣ ಮಹಾಪೂಜೆ, ಸಂಜೆ ಗೋಕುಲ ಭಜನಾ ಮಂಡಳಿ ಮತ್ತು ಗೋಪಾಲಕೃಷ್ಣ ಭಜನಾ ಮಂಡಳಿ ಅಂಧೇರಿ, ಶ್ರೀಕೃಷ್ಣ ಭಜನಾ ಮಂಡಳಿ ಮುಲುಂಡ್‌, ಹರಿಕೃಷ್ಣ ಭಜನಾ ಮಂಡಳಿ ನವಿಮುಂಬಯಿ, ಮಧೆÌàಶ ಭಜನಾ ಮಂಡಳಿ ಸಾಂತಾಕ್ರೂಜ್‌, ವಿಠಲ ಭಜನಾ ಮಂಡಳಿ ಮೀರಾ ರೋಡ್‌ ಪ್ರಾದೇಶಿಕ ಭಜನಾ ಮಂಡಳಿಗಳಿಂದ  ಭಜನೆ ಮತ್ತು¤ ದಾಸರ ಪದಗಳು, ಹರಿ ನಾರಾಯಣ ಹರಿ ಗೋವಿಂದ ನಾಮ ಸಂಕೀರ್ತನೆ ನಡೆಯಿತು.  ಎಂ. ಎಸ್‌. ರಾವ್‌ ಚಾರ್ಕೋಪ್‌ ಅವರಿಂದ ಸಂಕೀರ್ತನೆ ನಡೆಯಿತು. ಗೋಕುಲದ ಬಾಲ ಕಲಾವೃಂದದಿಂದ ನೃತ್ಯ ವೈವಿಧ್ಯ ನಡೆಯಿತು.

ವಿದ್ವಾನ್‌ ಕೃಷ್ಣರಾಜ ಉಪಾಧ್ಯಾಯ ಮೀರಾರೋಡ್‌ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿ ದರು. ಪುರೋಹಿತರಾದ ಶ್ರೀಷಾ ಉಡುಪ, ಶ್ರೀನಿವಾಸ ಭಟ್‌, ಮನೋಹರ ರಾವ್‌, ಪ್ರಸಾದ್‌ ಭಟ್‌ ಇತರ ಪೂಜೆಗಳನ್ನು ನೆರವೇರಿಸಿದರು. ಸುಭಾಶ್ಚಂದ್ರ ರಾವ್‌ ಮತ್ತು ಸುಭಾಶಿನಿ ಸುಭಾಶ್ಚಂದ್ರ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯರಾದ  ಉಷಾ ಭಟ್‌ ಅವರು ಸುವಾಸಿನಿ ಪೂಜೆ ನಡೆಸಿದರು.

ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ವಿಶ್ವಸ್ಥ ಹಾಗೂ ಪೂಜಾ ಸಮಿತಿಯ ಮುಖ್ಯಸ್ಥ ಎ. ಎಸ್‌. ರಾವ್‌, ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಎ. ಪಿ. ಕೆ ಪೋತಿ,  ಕೋಶಾಧಿಕಾರಿ ಹರಿದಾಸ್‌ ಭಟ್‌, ಜೊತೆ ಕಾರ್ಯದರ್ಶಿ ಪಿ.ಸಿ.ಎನ್‌ ರಾವ್‌, ಗುರುರಾಜ್‌ ಭಟ್‌, ಎಂ. ನರೇಂದ್ರ, ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ಸೇರಿದಂತೆ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಹಾಗೂ ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಾಯನ್‌ ಇದರ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು  ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

ಉಭಯ ಸಂಸ್ಥೆಗಳ ಪದಾಧಿಕಾರಿ ಗಳ ಸಾರಥ್ಯದಲ್ಲಿ ನಡೆಸಲ್ಪಟ್ಟ ವಾರ್ಷಿಕ ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ಐ. ಕೆ. ಪ್ರೇಮಾ ಎಸ್‌. ರಾವ್‌, ಡಾ| ಸಹನಾ ಎ. ಪೋತಿ, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್‌, ವಿಜಯಲಕ್ಷಿ ¾à ಸುರೇಶ್‌ ರಾವ್‌, ಶಾಂತಲಾ ಶ್ರೀನಿವಾಸ ಉಡುಪ ಜೆರಿಮೆರಿ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದು ಅರಸಿನ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿ ಶುಭಹಾರೈಸಿದರು. 

Advertisement

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next