Advertisement
ಡಿ. 5ರ ಸಂಜೆ 4ಕ್ಕೆ ಅದಮಾರು ಮಠದ ಉಭಯ ಶ್ರೀಪಾದರು “ವಿಶ್ವಾರ್ಪಣಮ್’ಗೆ ಚಾಲನೆ ನೀಡಲಿದ್ದಾರೆ. ಪ್ರತೀ ದಿನ ಸಂಜೆ 4ರಿಂದ ವಿವಿಧ ಮಠಾಧೀಶರಿಂದ ಆಶೀರ್ವಚನ ಮತ್ತು ಚಿಂತಕರಿಂದ ಉಪನ್ಯಾಸ ನಡೆಯಲಿದೆ.
Related Articles
Advertisement
ಡಿ. 5ರಂದು ಕಿರುತೆರೆ ನಟ ಎಸ್.ಎನ್. ಸೇತುರಾಮ್, ಡಿ. 6- ಚಕ್ರವರ್ತಿ ಸೂಲಿಬೆಲೆ, ಡಿ. 7- ರೋಹಿತ್ ಚಕ್ರತೀರ್ಥ, ಡಿ. 8-ಮಾಜಿ ಸಚಿವ ಸುಬ್ರಹ್ಮಣ್ಯನ್ ಸ್ವಾಮಿ, ಡಿ. 9- ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ, ಡಿ. 10- ಯಕ್ಷಗಾನ ಪ್ರಸಂಗಕರ್ತ ಪ್ರೊ| ಪವನ್ ಕಿರಣಕೆರೆ, ಡಿ. 11-ಪತ್ರಕರ್ತ ರಂಗನಾಥ ಭಾರದ್ವಾಜ್, ಥಟ್ ಅಂತ ಹೇಳಿ ಖ್ಯಾತಿಯ ಡಾ| ನಾ. ಸೋಮೇಶ್ವರ, ಡಿ. 12-ಸಂಸ್ಕೃತಿ ಚಿಂತಕಿ ಡಾ| ವಿ.ಬಿ. ಆರತಿ, ಡಿ. 13-ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಕಿನ್ನಿಗೋಳಿ, ಡಿ. 14- ಎಂ. ವಿಜಯರಾಮ, ಡಿ. 15-ಬಿಜೆಪಿ ನಾಯಕ ಬಿ.ಎಲ್. ಸಂತೋಷ್, ಡಿ. 16- ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್, ಹಿರಿಯ ಚಿತ್ರನಟ ರಮೇಶ ಭಟ್, ದೈವಾರಾಧಕ ಕುಮಾರ ಪಂಬದ, ಡಿ. 17-ಆರೆಸ್ಸೆಸ್ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ಡಿ. 18-ಸಂಸ್ಕೃತಿ ಚಿಂತಕಿ ಸಹನಾ ವಿಜಯಕುಮಾರ್, ಡಿ. 19-ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸಾಯಿ ದೀಪಕ್, ಬೆಂಗಳೂರಿನ ನ್ಯಾಯವಾದಿ ಶ್ರೀಹರಿ ಕುತ್ಸ, ಡಿ. 20-ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಡಿ. 21- ಅಂಕಣಕಾರ ಟಿ. ದೇವಿದಾಸ್, ಡಿ. 22-ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ, ಡಿ. 24-ಭಾಷಾತಜ್ಞ ಚ.ಮೂ. ಕೃಷ್ಣಶಾಸ್ತ್ರಿ, ಡಿ. 25-ಸಂಸದ ತೇಜಸ್ವೀ ಸೂರ್ಯ.
ವಿಶೇಷ ಕಾರ್ಯಕ್ರಮ:
ಡಿ. 11ರಂದು ರಾಷ್ಟ್ರೀಯ ಕರಕುಶಲ ವಸ್ತುಗಳ ಪ್ರದರ್ಶನ, ಡಿ. 12ರಿಂದ 14ರ ವರೆಗೆ ಕೃಷಿಕ, ಗೋ ಉತ್ಪನ್ನ ತಯಾರಕರ ಸಮ್ಮೇಳನ, ಈ ಮೂರೂ ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ನಾಡಿ ಚಿಕಿತ್ಸಾ ಶಿಬಿರ, ಡಿ. 19ರ ಬೆಳಗ್ಗೆ 8.30ಕ್ಕೆ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಕಲಾವಿದರು, ಜನಪ್ರತಿನಿಧಿಗಳು :
ಕೇಂದ್ರದ ಸಚಿವ ಪ್ರಹ್ಲಾದ ಜೋಶಿ, ರಾಜಸ್ಥಾನದ ಡಿಸಿಎಂ ಸಚಿನ್ ಪೈಲಟ್, ಕರ್ನಾಟಕದ ಸಚಿವರಾದ ಎ. ಶಿವರಾಮ ಹೆಬ್ಟಾರ್, ಪ್ರಭು ಚವ್ಹಾಣ್, ವಿ. ಸುನಿಲ್ ಕುಮಾರ್ ಮೊದಲಾದವರು ಪಾಲ್ಗೊಳ್ಳುವರು. ನಿತ್ಯ ಸಂಜೆ 7ರಿಂದ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವೈದ್ಯಕೀಯ, ನಾಟಿ ವೈದ್ಯ, ಸಾಹಿತ್ಯ, ಕಲೆ, ವಿದ್ವತ್, ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಈ ದಿನಗಳಲ್ಲಿ ಸಮ್ಮಾನಿಸಲಾಗುವುದು.