ಉಡುಪಿ: ಅದಮಾರು ಮಠ-ರಥ ಬೀದಿ ಸಂಪರ್ಕಿಸುವ ದ್ವಾರದ ಗೇಟ್ ತೆರವಿಗೆ ಮಠದಿಂದ ಒಪ್ಪಿಗೆ ಲಭಿಸಿದೆ.
ಉಡುಪಿ ಅದಮಾರು ಮಠದ ಬಳಿ ರಥ ಬೀದಿ ಸಂಪರ್ಕಿಸುವ ಅದಮಾರು ಮಠ ಲೇನ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಮಠಕ್ಕೆ ಒಳಪ್ರವೇಶಿಸುವ ದಾರಿಗೆ ತೊಂದರೆಯಾಗಬಾರದೆಂದು ಮಠದವರು ರಸ್ತೆಗೆ ಅಡ್ಡವಾಗಿ ಗೇಟ್ ಅಳವಡಿಕೆ ಮಾಡಿದ್ದರು. ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು.
ಈ ಬಗ್ಗೆ ರವಿವಾರ ಶಾಸಕ ಕೆ. ರಘುಪತಿ ಭಟ್ ಅವರು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ರಸ್ತೆಗೆ ಅಡ್ಡಲಾಗಿ ಅಳವಡಿಸಿರುವ ಗೇಟ್ ತೆರವುಗೊಳಿಸಿ ಮಠದ ಉತ್ತರ ದ್ವಾರದ ಪ್ರವೇಶಕ್ಕೆ ತಡೆಯಾಗದಂತೆ ನೋ ಪಾರ್ಕಿಂಗ್ ಝೋನ್ ಮಾಡಿ, ಪಾರ್ಕಿಂಗ್ ವ್ಯವಸ್ಥೆಯನ್ನು ಸುಲಲಿತಗೊಳಿಸುವಂತೆ ವಿನಂತಿಸಿದರು. ಅದರಂತೆ ಸ್ವಾಮೀಜಿಗಳು ಗೇಟ್ ತೆರವುಗೊಳಿಸುವುದಾಗಿ ತಿಳಿಸಿದರು.
ಇದನ್ನೂ ಓದಿ:ರಾಮನನ್ನು ವಿರೋಧಿಸಿದವರು ನತದೃಷ್ಟದಿಂದ ಬಳಲಿದ್ದಾರೆ: ಯೋಗಿ ಆದಿತ್ಯನಾಥ
ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ, ಪೌರಾಯುಕ್ತ ಉದಯ್ ಶೆಟ್ಟಿ, ಟ್ರಾಫಿಕ್ ಉಪ ನಿರೀಕ್ಷಕ ಶೇಖರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.