Advertisement

ಬಿಎಸ್ವೈ ಮಾತಿಗೆ ತಪ್ಪದ ನಾಯಕ, ಅದನ್ನು ಉಳಿಸಿಕೊಳ್ಳಿ: ಪರೋಕ್ಷವಾಗಿ ವಿಶ್ವನಾಥ್ ಹೇಳಿದ್ದೇನು?

01:28 PM Jun 28, 2020 | keerthan |

ಮೈಸೂರು: ಈ‌ ನಾಡಿನಲ್ಲಿ ಕೊಟ್ಟ ಮಾತಿಗೆ ತಪ್ಪದ ನಾಯಕರೆಂದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತ್ರ. ಈ‌ ಮಾತಿಗೆ ನೀವು ಅಪವಾದ ಆಗಬೇಡಿ ಎಂದು ಎಚ್ ವಿಶ್ವನಾಥ್ ಅವರು ಪರೋಕ್ಷವಾಗಿ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದಾರೆ.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಟ್ಟೆ ಕೊಡಬೇಕು ಅಂತ ಹೇಳುತ್ತಿಲ್ಲ. ನನಗೆ ಸಚಿವ ಸ್ಥಾನ ಕೊಡುವುದು ನಿಮಗೆ ಬಿಟ್ಟ ವಿಚಾರ. ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಬಿಎಸ್ ವೈಯವರಿಗೆ ಹೇಳಿದರು.

ದೇಶದ ರಾಜಕಾರಣ ನಡೆಯೋದೆ ಭಾವನೆ ಮತ್ತು ನಂಬಿಕೆ ಮೇಲೆ. ಇದು ಎರಡು ಮುಗಿದು ಹೋದರೆ ರಾಜಕಾರಣ ಇರೋದಿಲ್ಲ. ಜನನಾಯಕರು ಈ ಭಾವನೆ ಮತ್ತು ನಂಬಿಕೆಯನ್ನ ಉಳಿಸಿಕೊಳ್ಳಬೇಕಿದೆ ಎಂದರು.

ಯಡಿಯೂರಪ್ಪನವರೇ ನೀವೂ ಮಾತು ತಪ್ಪದ ಮಗನಾಗಿದ್ದೀರಿ. ನೀವು ಮಾತು ತಪ್ಪಿದ ಮಗನಾಡಬೇಡಿ. ಯಡಿಯೂರಪ್ಪನವರೇ ನಾಲಿಗೆ ಮೇಲೆ ನಿಂತ ನಾಯಕನಾಗಿ. ನಾಲಿಗೆ ಕಳೆದುಕೊಂಡ ನಾಯಕನಾಗಬೇಡಿ. ಇದು ಜನರ ಅಭಿಪ್ರಾಯ ಎಂದು ಪರೋಕ್ಷವಾಗಿ ನುಡಿದರು.

ನನಗೇನು ಶಾಸಕ ಸ್ಥಾನ, ಪರಿಷತ್ ಸ್ಥಾನ ಕೊಟ್ಟರೆ ನನ್ನ ವ್ಯಕ್ತಿತ್ವ ಮೇಲೂ ಹೋಗಲ್ಲ, ಅದು ಕೆಳಗೂ ಹೋಗಲ್ಲ. ವಿಶ್ವನಾಥ್ ಹೇಗಿದ್ದರೂ ವಿಶ್ವನಾಥ್ ಆಗಿಯೇ ಇರುತ್ತೇನೆ. ಆದರೆ ನನ್ನ ಅನುಭವವನ್ನ ಉಪಯೋಗಿಸಿಕೊಳ್ಳಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next