Advertisement

ಬಾಳೆಹಣ್ಣಿನ ಬೆಲೆಯೇ ಜಾಹೀರಾತು!

01:33 AM Jul 30, 2019 | mahesh |

ನವದೆಹಲಿ: ಇತ್ತೀಚೆಗೆ ಪಂಚಾತಾರಾ ಹೋಟೆಲ್ ಒಂದರಲ್ಲಿ ಎರಡು ಬಾಳೆಹಣ್ಣಿಗೆ 442 ರೂ. ಬಿಲ್ ಮಾಡಿದ್ದನ್ನು ಟ್ವಿಟರ್‌ನಲ್ಲಿ ಬಾಲಿವುಡ್‌ ನಟ ರಾಹುಲ್ ಬೋಸ್‌ ಹಂಚಿಕೊಂಡ ನಂತರ ಬಾಳೆಹಣ್ಣಿನ ಬೆಲೆ ಕುರಿತ ಜೋಕುಗಳು ಹಾಗೂ ಮೀಮ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಓಡಾಡುತ್ತಿವೆ. ಅದಕ್ಕೆ ಪೂರಕವಾಗಿ, ಇದೇ ಟ್ರೆಂಡ್‌ ಬಳಸಿಕೊಂಡು ಹಲವು ಕಂಪನಿಗಳು ತಮ್ಮ ಉತ್ಪನ್ನದ ಜಾಹೀರಾತುಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಿವೆ. ದಿನಸಿ ಹಾಗೂ ತರಕಾರಿಗಳನ್ನು ಮಾರಾಟ ಮಾಡುವ ನೇಚರ್ಸ್‌ ಬಾಸ್ಕೆಟ್ ಎಂಬ ಕಂಪನಿಯು ನಮ್ಮಲ್ಲಿ ಬಾಳೆಹಣ್ಣಿಗೆ 442 ರೂ. ಕೊಡಬೇಕಿಲ್ಲ, ಕೇವಲ 14 ರೂ. ಸಾಕು ಎಂಬ ರೀತಿಯ ಜಾಹೀರಾತು ನೀಡಿದೆ. ಇನ್ನು ಹಾಲು ಹಾಗೂ ಹಾಲು ಉತ್ಪನ್ನ ಮಾರಾಟ ಕಂಪನಿ ಮದರ್‌ ಡೈರಿಯು ಬಾಳೆಹಣ್ಣಿಗಿಂತ ನಮ್ಮ ಮೊಸರಿನ ಬೆಲೆಯೇ ಕಡಿಮೆ. ಕೇವಲ 25 ರೂ.ನಲ್ಲಿ ಸಿಗುತ್ತದೆ ಎಂಬ ಜಾಹೀರಾತನ್ನು ಪ್ರಕಟಿಸಿದೆ.

Advertisement

ಇದೇ ರೀತಿ, ರಿಲಯನ್ಸ್‌ ಮಾರ್ಟ್‌, ಓಯೋ, ಓಲಾ, ಪಾಲಿಸಿಬಜಾರ್‌, ಪಿಜ್ಜಾ ಹಟ್, ಅಮೆಜಾನ್‌ ಪ್ರೈಮ್‌ ವಿಡಿಯೋ ಸೇರಿದಂತೆ ಹಲವು ಕಂಪನಿಗಳು ಈ ಬಾಳೆಹಣ್ಣಿನ ಬೆಲೆಯ ಸುತ್ತವೇ ಆಕರ್ಷಕ ಜಾಹೀರಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next