Advertisement

ಆಕ್ಯುಪಂಚರ್‌ ಎಂಬ ಅಚ್ಚರಿಯ ವಿದ್ಯೆ

06:36 AM Sep 18, 2018 | |

ಚೀನಾ ಮೂಲದ ಚಿಕಿತ್ಸಾ ಕಲೆ “ಆಕ್ಯುಪಂಚರ್‌’, ಇಂದು ಪರ್ಯಾಯ ಚಿಕಿತ್ಸೆಯ ಒಂದು ಪ್ರಮುಖ ವಿಧಾನವಾಗಿದೆ. ಪ್ರಪಂಚದಾದ್ಯಂತ ಇದಕ್ಕೆ ಮನ್ನಣೆ ದೊರೆತಿದೆ. ಅತಿ ಸಣ್ಣ ಸೂಜಿಗಳನ್ನು ದೇಹದ ನಿರ್ದಿಷ್ಟ ಭಾಗಗಳಲ್ಲಿ ಚುಚ್ಚಿ ಖಾಯಿಲೆಗಳನ್ನು, ನೋವುಗಳನ್ನು ಗುಣಪಡಿಸುವುದೇ ಆಕ್ಯುಪಂಚರ್‌. ದೇಹದ ನರಮಂಡಲ, ನರಕೇಂದ್ರಗಳ ಅರಿವಿನ ಹಿನ್ನೆಲೆಯಲ್ಲಿ ಖಾಯಿಲೆಯ ಅಥವಾ ನೋವಿನ ಮಟ್ಟವನ್ನು ಗಮನದಲ್ಲಿರಿಸಿಕೊಂಡು ಆಯಾ ನರಕೇಂದ್ರಗಳನ್ನು ಉದ್ದೀಪನಗೊಳಿಸಿ ಅಲ್ಲಿ ತಡೆಯಾಗಿರುವ ಸೂಕ್ಷ್ಮಶಕ್ತಿಯ ಹರಿವನ್ನು ಮುಕ್ತಗೊಳಿಸಿ ಆರೋಗ್ಯವನ್ನು ಮರಳಿಸುವುದೇ ಈ ಚಿಕಿತ್ಸೆಯ ವಿಧಾನ. ದೇಹದ ಒಳ-ಹೊರಗೆ ಹರಿಯುತ್ತಿರುವ ಶಕ್ತಿಯು ಕೆಲವು ಕೇಂದ್ರಗಳನ್ನು ಹಾದು ಹೋಗುತ್ತವೆ. ಇದಕ್ಕೆ ತಡೆಯುಂಟಾದಾಗ ಅನಾರೋಗ್ಯ ಕಾಡುತ್ತದೆ, ಆಕ್ಯುಪಂಚರ್‌ ಮೂಲಕ ಈ ತಡೆಯನ್ನು ನಿವಾರಿಸಬಹುದು ಎನ್ನುತ್ತಾರೆ ಆಕ್ಯುಪಂಚರ್‌ ತಜ್ಞರು.

Advertisement

ಆಕ್ಯುಪಂಚರ್‌ ಚಿಕಿತ್ಸಕರು ನಿರ್ದಿಷ್ಟ ಖಾಯಿಲೆ, ನೋವನ್ನಷ್ಟೆ ಗುರಿಯಾಗಿಸದೆ ವ್ಯಕ್ತಿಯ ಸರ್ವತೋಮುಖ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಚಿಕಿತ್ಸೆ ನೀಡುತ್ತಾರೆ. ರೋಗಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯ ಪೂರ್ಣ ಚಿತ್ರಣ ಪಡೆದ ಬಳಿಕ ದೀರ್ಘ‌ಕಾಲಿಕ ಸಮಸ್ಯೆಗಳಾದ ಮೈಗ್ರೇನ್‌ ತಲೆನೋವು, ಬೆನ್ನುನೋವು, ಸಂಧಿವಾತ, ಹೊಟೆತೊಳಸು, ವಾಂತಿ (ಕೀಮೊಥೆರಪಿ ಬಳಿಕ ಕಾಣಿಸಿಕೊಳ್ಳುವ ಬಹುದಿನ ಕಾಡುವ ತೊಂದರೆ) ಪಾರ್ಶ್ವವಾಯು, ಮುಟ್ಟಿನ ನೋವು, ಕೆಲವು ಚರ್ಮರೋಗಗಳು – ಇವುಗಳ ಶಮನಕ್ಕೆ ಆಕ್ಯುಪಂಚರ್‌ ಚಿಕಿತ್ಸೆ ನೆರವಾಗುತ್ತದೆ.

ಆಕ್ಯುಪಂಚರ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಗಳಿಸಿದವರು ಆಕ್ಯುಪಂಚರ್‌ ಚಿಕಿತ್ಸಕರಾಗಿ ಸೇವೆ ಸಲ್ಲಿಸಬಹುದು. ಅಕ್ಯುಪಂಚರ್‌ ಕೋರ್ಸು ಕಲಿಸುವ ಅನೇಕ ವಿಶ್ವದ್ಯಾಲಯಗಳು ಮತ್ತು ಇತರ ಸಂಸ್ಥೆಗಳು ಭಾರತದಲ್ಲಿಂದು ಲಭ್ಯ ಇವೆ. ಈ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ದೇಹದ ಆಕ್ಯುಪಂಚರ್‌ ಕೇಂದ್ರಗಳು, ಆಕ್ಯುಪಂಚರ್‌ನ ಮೂಲ ತಣ್ತೀಗಳು, ಆಕ್ಯುಪಂಚರ್‌ನ ಗರಿಷ್ಠ ಶಕ್ತಿ ಕೇಂದ್ರಗಳು (ಮೆರಿಡಿಯನ್ಸ್‌), ಪಂಚಧಾತು ತಣ್ತೀಗಳು, ಪೂರಕ ಆಕ್ಯುಪಂಚರ್‌, ಶಾಸ್ತ್ರೀಯ ವಿಧಾನಗಳು ಇತ್ಯಾದಿ ವಿಚಾರಗಳನ್ನು ಬೋಧಿಸಲಾಗುತ್ತದೆ.

ಈ ಕೋರ್ಸ್‌ ಮಾಡಲು ಕನಿಷ್ಠ ಅರ್ಹತೆ 10 + 2 ಆಗಿರುತ್ತದೆ. 1 ವರ್ಷದ ಡಿಪ್ಲೊಮ, 3 ವರ್ಷದ ಪದವಿ ಮತ್ತು 2 ವರ್ಷದ ಸ್ನಾತಕೋತ್ತರ ಪದವಿ ಪಡೆಯಬಹುದು. ಇತರೆ ವೈದ್ಯಕೀಯ ಕೋರ್ಸುಗಳನ್ನು ಮುಗಿಸಿದವರು ನೇರವಾಗಿ 2 ವರ್ಷದ ಸ್ನಾತಕೋತ್ತರ ಪದವಿಗೆ ಸೇರಬಹುದು.

ಕೋರ್ಸ್‌ಗಳು ಮತ್ತು ಲಭ್ಯರುವ ಕಲಿಕಾ ಕೇಂದ್ರಗಳು
ಅಸೋಸಿಯೇಟಡ್‌ ಡಿಗ್ರಿ ಇನ್‌ ಆಕ್ಯುಪಂಚರ್‌- ಆಲ್ಟರ್‌ನೆಟಿವ್‌ ಮೆಡಿಸಿನ್‌ ಕಾಲೇಜ್‌, ಕೊಯಂಬತ್ತೂರು
ಬ್ಯಾಚಲರ್‌ ಆಫ್ ಆಕ್ಯುಪಂಚರ್‌- ಬಿಹಾರ್‌ ಇಂಡಿಯಾ ಆಲ್ಟರ್‌ನೆಟಿವ್‌ ಮೆಡಿಕಲ್‌ ಕೌನ್ಸಿಲ್‌, ನೈನಿತಾಲ್‌
ಆಲ್‌ ಇಂಡಿಯಾ ಪ್ಯಾರಾ ಮೆಡಿಕಲ್‌ ಟೆಕ್ನಾಲಜಿ ಆಂಡ್‌ ಆಲ್ಟರ್‌ನೆàಟಿವ್‌ ಮೆಡಿಸಿನ್‌ ಕೌನ್ಸಿಲ್‌, ಲುಧಿಯಾನ
ಆಲ್ಟರ್‌ನೆàಟಿವ್‌ ಮೆಡಿಕಲ್‌ ಕೌನ್ಸಿಲ್‌, ಕೊಲ್ಕತ್ತ
ಆಕ್ಯುಪಂಚರ್‌ ಆನ್‌ಲೈನ್‌, ಬೆಂಗಳೂರು
ಇಂಡಿಯನ್‌ ಅಕಾಡೆಮಿ ಆಫ್ ಆಕ್ಯುಪಂಚರ್‌ ಸೈನ್ಸ್‌, ಔರಂಗಾಬಾದ್‌
ಡಿಪ್ಲೊಮಾ ಇನ್‌ ಆಕ್ಯುಪಂಚರ್‌- ಬ್ರೆçಟ್‌ ಆಕ್ಯುಪ್ರಷರ್‌, ಅಣ್ಣಾನಗರ
ಆತ್ಮ ಆಕ್ಯುಪಂಚರ್‌ ಟ್ರೆçನಿಂಗ್‌ ಆಂಡ್‌ ರಿಸರ್ಚ್‌ ಸೆಂಟರ್‌, ಸೇಲಮ್‌
ಆಕ್ಯುಪಂಚರ್‌ ವೆಲ್‌ನೆಸ್‌ ಸೆಂಟರ್‌, ಕೊಯಂಬತ್ತೂರು
ಶ್ರಾವಸ್ತಿ ಇನ್ಸ್‌ಟಿಟ್ಯೂಟ್‌ ಆಫ್ ಆಲ್ಟರ್‌ನೆàಟಿವ್‌ ಮೆಡಿಸಿನ್‌, ಶ್ರಾವಸ್ತಿ
ಮಾಸ್ಟರ್‌ ಆಫ್ ಆಕ್ಯುಪಂಚರ್‌    – ಇಂಡಿಯನ್‌ ಅಕಾಡೆಮಿ ಆಫ್ ಆಕ್ಯುಪಂಚರ್‌ ಸೈನ್ಸ್‌, ಔರಂಗಾಬಾದ್‌
ಆತ್ಮ ಆಕ್ಯುಪಂಚರ್‌ ಟ್ರೆçನಿಂಗ್‌ ಆಂಡ್‌ ರಿಸರ್ಚ್‌ ಸೆಂಟರ್‌, ಸೇಲಮ್‌
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು
ಇನ್‌ ಆಕ್ಯುಪಂಚರ್‌ ಭಾರತ್‌ ಸೇವಕ್‌ ಸಮಾಜ್‌ ವೊಕೇಷನಲ್‌ ಎಜುಕೇಷನ್‌, ಚೆನ್ನೆç
ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ
ಮಾಸ್ಟರ್‌ ಆಫ್ ಆಕ್ಯುಪಂಚರ್‌    – ಆತ್ಮ ಆಕ್ಯುಪಂಚರ್‌ ಟ್ರೆçನಿಂಗ್‌ ಆಂಡ್‌ ರಿಸರ್ಚ್‌ ಸೆಂಟರ್‌, ಸೇಲಮ್‌

Advertisement

ಇರಬೇಕಾದ ಕೌಶಲಗಳು:
ಉತ್ತಮ ಸಂವಹನ ಕೌಶಲ
ಸೂಕ್ಷ್ಮಗ್ರಹಿಕೆ
ತಾಳ್ಮೆ
ತಾರ್ಕಿಕ ಚಿಂತನೆ, ಭಾವನೆಗಳ ಸಮತೋಲನ
ದೃಢವಾದ ಕೈ, ಹಸ್ತ ಮತ್ತು ಚುರುಕಾದ ಕಣ್ಣು

ಎಲ್ಲ ವೃತ್ತಿಗಳಲ್ಲಿರುವಂತೆ ಈ ವೃತ್ತಿಯಲ್ಲೂ ಆರಂಭಿಕ ಹಂತದಲ್ಲಿ ಗಳಿಕೆ ಕಡಿಮೆ. ಆದರೆ ಕ್ರಮೇಣ ಉತ್ತಮ ಚಿಕಿತ್ಸೆ ನೀಡುತ್ತ ಜನರ ವಿಶ್ವಾಸ ಗಳಿಸುತ್ತಿದ್ದಂತೆ ಆದಾಯವೂ ಹೆಚ್ಚುತ್ತದೆ. ಜನರ ನೋವಿಗೆ ಸ್ಪಂದಿಸುತ್ತ, ಅದರ ಶಮನವನ್ನೇ ಗುರಿಯಾಗಿಸಿಕೊಂಡರೆ ಉಳಿದುದೆಲ್ಲ ತಾನಾಗಿಯೇ ದೊರೆಯುತ್ತದೆ. 

ರಘು, ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next