ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಕಾರು ನಜ್ಜುಗುಜ್ಜಾಗಿದೆ. ಅವರು ಇಂದು ಇದೇ ವಾಹನದಲ್ಲಿ ಬರುವರಿದ್ದರು ಎಂದು ಹೇಳಲಾಗಿದೆ.
ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಬೊಲೆನೋ ಕಾರಿನ ನಡುವೆ ಶುಕ್ರವಾರ ರಾತ್ರಿ ಢಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದಲ್ಲಿ ಮೂಲತಃ ಮುದ್ದೇಬಿಹಾಳ ತಾಲೂಕ ನಾಲತ್ವಾಡ ಗ್ರಾಮದ ಇಲ್ಲಿನ ಗೋಕುಲ ರಸ್ತೆ ಮಂಜುನಾಥ ಕ್ರಾಸ್ ನಿವಾಸಿ ಶೋಭಾ ಶರಣಪ್ಪ ಕಟ್ಟಿ ಹಾಗೂ ಬೊಲೆನೋ ಕಾರು ಚಾಲಕ ವಿಭೂತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಬಂಧಿತ ಸಿದ್ದಿಕ್ ಕಪ್ಪನ್ ಪತ್ರಕರ್ತನಲ್ಲ, ಕೇರಳದ ಪಿಎಫ್ಐ ಕಾರ್ಯದರ್ಶಿ!
ಅಪಘಾತದಲ್ಲಿ ವೈದ್ಯೆ ಸ್ಮಿತಾ ಕಟ್ಟಿ ಹಾಗೂ ಉಮಾಶ್ರೀ ಅವರ ಇನ್ನೋವಾ ಕಾರು ಚಾಲಕ ಗಾಯಗೊಂಡಿದ್ದಾರೆ. ಸ್ಮಿತಾ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.