Advertisement

Actress Tara: ನಟಿ ತಾರಾ ಫೇಸ್‌ಬುಕ್‌ ಖಾತೆ ಹ್ಯಾಕ್‌!

11:10 AM Dec 21, 2023 | Team Udayavani |

ಬೆಂಗಳೂರು: ಸೈಬರ್‌ ವಂಚಕರು ನಟಿ ಹಾಗೂ ರಾಜಕಾರಣಿ ತಾರಾ ಅನುರಾಧ ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಟಿ ತಾರಾ ದಕ್ಷಿಣ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ತಮ್ಮ ಫೇಸ್‌ಬುಕ್‌ ಖಾತೆಯಾದ ತಾರಾ ಅನುರಾಧ ಮತ್ತು ತಾರಾ ಅನುರಾಧವೇಣು ಈ ಎರಡು ಖಾತೆಗಳು ಬಳಕೆಯಲ್ಲಿವೆ. ಈ ಪೈಕಿ ತಾರಾ ಅನುರಾಧವೇಣು ಎಂಬ ಖಾತೆಯನ್ನು ಹೆಚ್ಚು ಬಳಸುತ್ತಿದ್ದೇನೆ. ಈ ಮಧ್ಯೆ ಕೆಲ ದಿನಗಳ ಹಿಂದೆ ಪರಿಚಯಸ್ಥರೊಬ್ಬರು ಕರೆ ಮಾಡಿ, ತಮ್ಮ ಹಳೇ ಖಾತೆಯಲ್ಲಿ ಪೋಸ್ಟ್‌ವೊಂದು ಬಂದಿದ್ದು, ನೋಡುವಂತೆ ಹೇಳಿದರು. ಆ ಪೋಸ್ಟ್‌ ನೋಡಿದಾಗ ಅಚ್ಚರಿಗೊಂಡಿದ್ದೇನೆ. ಈ ಪೋಸ್ಟ್‌ಗೂ ನನಗೂ ಸಂಬಂಧ ಇಲ್ಲ. ಹೀಗಾಗಿ ನನ್ನ ಅಕೌಂಟನ್ನು ಬಳಸಿ ನಕಲಿ ಪೋಸ್ಟ್‌ ಹಾಕಿರಬಹುದು. ಕೂಡಲೇ ಅದನ್ನು ಡಿಲೀಟ್‌ ಮಾಡಿಸಿಕೊಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ತಾರಾ ದೂರಿನಲ್ಲಿ ಕೋರಿದ್ದಾರೆ.

ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next