Advertisement

ತನಿಷ್ಕಾ ಜತೆ ಮದುವೆ ತಳ್ಳಿ ಹಾಕಿದ ಕ್ರಿಕೆಟಿಗ ಚಹಲ್‌

06:50 AM Apr 24, 2018 | |

ಬೆಂಗಳೂರು: ಕ್ರಿಕೆಟಿಗ ಯಜುವೇಂದ್ರ ಚಹಲ್‌ ಚಿತ್ರ ನಟಿ ತನಿಷ್ಕಾ ಕಪೂರ್‌ ಜತೆಗಿನ ತನ್ನ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ತನಿಷ್ಕಾ ಹಾಗೂ ನಾನು ಒಳ್ಳೆಯ ಸ್ನೇಹಿತರು. ಹಾಗಾಗಿ ಒಟ್ಟಿಗೆ ಓಡಾಡಿದ್ದೇವೆ ಅಷ್ಟೆ. ಅದನ್ನು ಬಿಟ್ಟು ನಮ್ಮಿಬ್ಬರ ನಡುವೆ ಯಾವುದೇ ಬೇರೆ ತರಹದ ಸಂಬಂಧವಿಲ್ಲ. ಮದುವೆಯಾಗುವ ಪ್ರಸ್ತಾಪವೂ ಇಲ್ಲ. ಸುಮ್ಮನೆ ಗಾಳಿ ಸುದ್ದಿ ಹರಡಿಸಬೇಡಿ ಎಂದು ಅಭಿಮಾನಿಗಳಲ್ಲಿ ಸ್ಪಿನ್‌ ಬೌಲರ್‌ ಚಹಲ್‌ ಟ್ವೀಟರ್‌ ಮೂಲಕ ಮನವಿ ಮಾಡಿದ್ದಾರೆ. 

Advertisement

ಚಹಲ್‌-ತನಿಷ್ಕಾ ಪರಸ್ಪರ ಪ್ರೇಮಿಸುತ್ತಿದ್ದು ಶೀಘ್ರ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಭಾನುವಾರ ಹರಡಿತ್ತು. ತನಿಷ್ಕಾ ಕನ್ನಡದ ಫ‌ಸ್ಟ್‌ ರ್‍ಯಾಂಕ್‌ ರಾಜು, ಉಪ್ಪಿ ಟು ಸಿನಿಮಾಗಳಲ್ಲಿ ನಟಿಸಿದ್ದರು. ಚಹಲ್‌ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next