ಮಂಡ್ಯ: ಲೋಕಸಭೆ ಚುನಾವಣೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ರಾಜಕೀಯ ಚಟುವಟಿಕೆ ಬಿರುಸಾಗಿಯೇ ನಡೆದಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಸದ್ಯ ಹೆಚ್ಚು ಚರ್ಚೆ, ಸುದ್ದಿಯಾಗುತ್ತಿರುವುದು ಮಂಡ್ಯ ಕ್ಷೇತ್ರ. ಮಾಜಿ ಸಚಿವ, ಚಿತ್ರನಟ ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಸಕ್ಕರೆ ನಾಡಿನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅದಕ್ಕಾಗಿ ಅಂಬರೀಶ್ ನಗರದಲ್ಲಿ ಹೊಂದಿರುವ ಹಳೆಯ ಮನೆಯನ್ನೇ ತಮ್ಮ ಕಚೇರಿಯನ್ನಾಗಿಸಿ ಕೊಳ್ಳಲು ನಿರ್ಧರಿಸಿದ್ದಾರೆ. ಜತೆಗೆ ಸದ್ಯಕ್ಕೆ ಅಲ್ಲಿಯೇ ವಾಸ್ತವ್ಯವನ್ನೂ ಹೂಡಲಿದ್ದಾರೆ. ಜತೆಗೆ ಮುಂದಿನ ದಿನಗಳಿಗಾಗಿ ಹೊಸ ಮನೆಯ ಖರೀದಿ ಮತ್ತು ಮುಂದಿನ ದಿನಗಳಲ್ಲಿ ಹೊಸ ಮನೆಯ ನಿರ್ಮಾಣ ಕಾರ್ಯದ ಬಗ್ಗೆಯೂ ಇರಾದೆ ಹೊಂದಿದ್ದಾರೆ.
ಕಾಂಗ್ರೆಸ್-ಜೆಡಿಎಸ್‌ನ ಅಧಿಕೃತ ಘೋಷಣೆಗೂ ಮುನ್ನವೇ ಅಂಬರೀಶ್ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯ ಕರ್ತರ ಒತ್ತಾ ಯದ ಮೇರೆಗೆ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದಾರೆ ಸುಮಲತಾ ಅಂಬರೀಶ್. ಹೀಗಾಗಿ, ಅವರ ಮನೆ ಹುಡುಕಾಟಕ್ಕೆ ವಿಶೇಷ ಆಕರ್ಷಣೆಯೂ ಬಂದಿದೆ. ಈ ಹಿಂದೆ ಅಂಬ ರೀಶ್ ಚುನಾ ವಣೆಯ ಸಂದರ್ಭಗಳಲ್ಲಿ ಮಂಡ್ಯ ದ ಲ್ಲಿಯೇ ಮನೆ ಮಾಡಿ ಕೊಂಡು ಉಳಿದು ಕೊಳ್ಳುವುದಾಗಿ ಹೇಳು ತ್ತಿ ದ್ದರು. ಆದರೆ, ಅದನ್ನು ನಡೆಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ.
ಚುನಾ ವಣೆಗಾಗಿ ಈಗಾಗಲೇ ಸಿದ್ಧತೆ ಚುರುಕಾಗಿ ನಡೆದಿದೆ. ಮೊದಲಿಗೆ ಮನೆ ನಿರ್ಮಾಣಕ್ಕಿಂತ ಸದ್ಯಕ್ಕೆ ಸಕ್ಕರೆ ನಗರದ ಚಾಮುಂಡೇಶ್ವರಿ ನಗರದಲ್ಲಿ ಅಂಬರೀಶ್ ವಾಸ್ತವ್ಯ ಇರುತ್ತಿದ್ದ ಮನೆಯನ್ನೇ ಬಾಡಿಗೆಗೆ ಪಡೆದುಕೊಂಡು ವಾಸ್ತವ್ಯ ಹೂಡಲಿದ್ದಾರೆ ಸುಮಲತಾ. ಅಂಬ ರೀಶ್ ಈ ಮನೆಗೆ ಬಂದ ನಂತರ 2013ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಕಂಡಿ ದ್ದರು. ಅಲ್ಲದೆ, ಅಂದಿನ ಕಾಂಗ್ರೆಸ್ ಸರ್ಕಾರ ದಲ್ಲಿ ವಸತಿ ಸಚಿವರಾಗಿ ಜೊತೆಗೆ ಜಿಲ್ಲಾ ಉಸ್ತು ವಾರಿ ಸಚಿ ವ ರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
ಅಂಬರೀಶ್ ಇದ್ದಂತಹ ಮನೆ ಸುಮ ಲತಾ ಅವರಿಗೆ ಭಾವನಾತ್ಮಕ ಸೆಳೆತವನ್ನು ಹೊಂದಿದೆಯಲ್ಲದೆ, ಈ ಮನೆ ಅದೃಷ್ಟದ ಮನೆ ಎಂಬ ನಂಬಿಕೆ ಕೂಡ ಅಂಬರೀಶ್ ಅವರ ಅಭಿಮಾನಿಗಳಲ್ಲಿ ಇದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಚಾಮುಂಡೇ ಶ್ವರಿನಗರದ ಮನೆಯಿಂದಲೇ ಚುನಾವಣಾ ರಾಜಕಾರಣ ಆರಂಭಿಸುವ ಸಿದ್ಧತೆ ಮಾಡಿ ಕೊಂಡಿದ್ದಾರೆಂದು ಹೇಳಲಾಗಿದೆ.
ಹಲವು ರಾಜ ಕೀಯ ಏರಿಳಿತಗಳ ನಡುವೆ ಮಂಡ್ಯದಲ್ಲಿ ರಾಜಕೀಯ ಸ್ಥಿರತೆಯನ್ನು ಕಂಡುಕೊಳ್ಳುವ
ಸ್ಪಷ್ಟ ನಿರ್ಧಾರಕ್ಕೆ ಬಂದಿರುವ ಸುಮಲತಾ ಅವರು, ಮುಂದಿನ ದಿನಗಳಲ್ಲಿ ಮಂಡ್ಯದ ಬಂದೀ ಗೌಡ ಬಡಾವಣೆಯ ಸಂಬಂಧಿ ಕರ ನಿವೇಶನದಲ್ಲಿ ಮನೆ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದಾರೆಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.