Advertisement

ರೀಟೆಲ್​ ಸ್ಟೋರ್​ನಲ್ಲಿ ಭಾಯ್ ಫ್ರೆಂಡ್ ಗೆ ಕಿಸ್ ಮಾಡಿದ ನಟಿ

04:04 PM Jul 18, 2021 | Team Udayavani |

ನಟಿ ಶ್ರುತಿ ಹಾಸನ್​ ತಮ್ಮ ಬಾಯ್​ಫ್ರೆಂಡ್​ಗೆ ಸಾರ್ವಜನಿಕವಾಗಿ ಕಿಸ್​ ಮಾಡಿರುವ ಫೋಟೋ ವೈರಲ್ ಆಗಿದ್ದು ಸಖತ್ ಸದ್ದು ಮಾಡ್ತಿದೆ.

Advertisement

ಶ್ರುತಿ ಹಾಸನ್​ ಅವರು ಸಂತನು ಹಜಾರಿಕ ಜೊತೆ ಡೇಟಿಂಗ್ ನಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ತಮ್ಮ ಬಾಯ್​ಫ್ರೆಂಡ್​ ಜೊತೆಗಿನ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಾರ್ವಜನಿಕವಾಗಿ ಕಿಸ್​ ಮಾಡಿದ್ದಾರೆ.

ಶ್ರುತಿ ಹಾಸನ್​ ಹಾಗೂ ಸಂತನು ಮಾಸ್ಕ್​ ಧರಿಸಿದ್ದಾರೆ. ಶ್ರುತಿ ಅವರು ಸಂತನು ಮುಖಕ್ಕೆ ಕಿಸ್​ ಮಾಡಿದ್ದಾರೆ. ಇದು ರೀಟೆಲ್​ ಸ್ಟೋರ್​ನಲ್ಲಿ ಎಂಬುದು ಫೋಟೋ ಮೂಲಕ ಸಾಬೀತಾಗಿದೆ. ಇದನ್ನು ನೋಡಿದ ಅನೇಕ ಫ್ಯಾನ್ಸ್​ ಬೇಸರ ಹೊರ ಹಾಕಿದ್ದಾರೆ. ಶ್ರುತಿ ಈ ರೀತಿ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಶ್ರುತಿ ಕಪಲ್​ ಗೋಲ್ಸ್​ ನೀಡಿದ್ದಾರೆ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಶೃತಿ ಹಾಸನ್ ಅವರ ಕೈಯಲ್ಲಿ ತುಂಬಾ ಆಫರ್ ಗಳಿವೆ. ಇತ್ತೀಚಿಗಷ್ಟೆ ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾಗಿ ಅವರು ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next