Advertisement

ಬಾಯ್‍ಫ್ರೆಂಡ್ ಜತೆ ರೊಮ್ಯಾಂಟಿಕ್ ಹಗ್…ಮತ್ತೆ ಪ್ರೀತಿಯಲ್ಲಿ ನಟಿ ಶೃತಿ ಹಾಸನ್ ?

01:00 PM Feb 28, 2021 | Team Udayavani |

ನಟಿ ಶೃತಿ ಹಾಸನ್ ಅವರಿಗೆ ಮತ್ತೆ ಲವ್ ಆಗಿಯದೇಯಾ ? ಮೊದಲ ಪ್ರೇಮ ವೈಫಲ್ಯದಿಂದ ಹೊರ ಬಂದಿರುವ ಈ ನಟಿ ಎರಡನೇ ಬಾರಿ ಪ್ರೇಮ ಪಾಶಯದಲ್ಲಿ ಬಿದ್ದಿದ್ದಾರಾ ? ಅಭಿಮಾನಿಗಳ ಈ ಪ್ರಶ್ನೆಗೆ ಕಾರಣ ಶೃತಿ ಹಾಸನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೊಗಳು.

Advertisement

ಹೌದು, ಬಹುಭಾಷಾ ನಟಿ ಶೃತಿ ಹಾಸನ್ ಸಿನಿಮಾಗಳಿಗಿಂತ ಹೆಚ್ಚು ಪ್ರೀತಿ, ಪ್ರೇಮ, ಡೇಟಿಂಗ್ ವಿಚಾರವಾಗಿಯೇ ಸಖತ್ ಸದ್ದು ಮಾಡಿದವರು. ಇವರು ಎರಡು ವರ್ಷಗಳ ಹಿಂದೆ ತಮ್ಮ ಇಟಲಿ ಬಾಯ್ ಫ್ರೆಂಡ್ ಮೈಕಲ್ ಕೊರ್ಸೇಲ್ ಜತೆ ಲವ್ ಬ್ರೇಕಪ್ ಮಾಡಿಕೊಂಡಿದ್ದರು. ಹಲವು ವರ್ಷಗಳ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಏಕಾಏಕಿ ತಮ್ಮ ಸಂಬಂಧ ಮುರಿದುಕೊಂಡಿತ್ತು. ಇದೀಗ ಶೃತಿ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಹಾಗಾದರೆ ಈ ಬಾರಿ ಶೃತಿ ಹೃದಯ ಕದ್ದ ಚೋರ ಯಾರು ?

ಶೃತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಗೆ ರೊಮ್ಯಾಂಟಿಕ್ ಹಗ್ ನೀಡಿರುವ ಫೋಟೊ ಇನ್ಸ್ಟಾ ಸ್ಟೋರಿಯಲ್ಲಿ ಅಪ್ಡೇಟ್ ಮಾಡಿದ್ದರು. ಈ ಚಿತ್ರಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದವು. ಶೃತಿ ಹಂಚಿಕೊಂಡ ಲುಕ್ ಗಳಲ್ಲಿ ಇಬ್ಬರೂ ಮಾಸ್ಕ್ ಧರಿಸಿದ್ದರಿಂದ ಆತ ಯಾರು ? ಅನ್ನೋದು ಪತ್ತೆ ಹಚ್ಚುವುದು ಸ್ಪಲ್ಪ ಕಷ್ಟವಾಯಿತು. ಕೊನೆಗೂ ಶೃತಿ ಬಾಯ್ ಫ್ರೆಂಡ್ ಹೆಸರು ರಿವೀಲ್ ಆಗಿದೆ.

ಗುವಾಹಟಿಯ ರ್ಯಾಪರ್ ಸಂತನು ಹಜರಿಕಾ ಜತೆ ಶೃತಿ ಡೇಟಿಂಗ್ ನಲ್ಲಿದ್ದಾರೆ ಎನ್ನುವ ರೂಮರ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಶೃತಿ ಭೇಟಿಯಾಗಲು ಸಂತನು ಚೆನ್ನೈಗೆ ಬಂದಿದ್ದನಂತೆ.

ಇನ್ನು ಸದ್ಯ ಶೃತಿ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಕಾಂಬಿನೇಶನ್ ನಲ್ಲಿ ಸಿದ್ಧವಾಗುತ್ತಿರುವ ‘ಸಲಾರ್’ ಚಿತ್ರಕ್ಕೆ ನಾಯಕಿಯಾಗಿ ಶೃತಿ ಹಾಸನ್ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next