Advertisement

ಎಫ್ಐಆರ್‌ ರದ್ದು ಕೋರಿದ ನಟಿ ಶೃತಿ

11:51 AM Nov 14, 2018 | Team Udayavani |

ಬೆಂಗಳೂರು: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್‌ ರದ್ದುಗೊಳಿಸುವಂತೆ ಕೋರಿ ನಟಿ ಶೃತಿ ಹರಿಹರನ್‌ ಅವರು ಹೈಕೋರ್ಟ್‌ ಮೊರೆಹೋಗಿದ್ದಾರೆ.

Advertisement

ತಮ್ಮ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿ ದುರುದ್ದೇಶಪೂರ್ವಕವಾಗಿ ಸೈಬರ್‌ ಠಾಣೆಯಲ್ಲಿ ದೂರು ನೀಡಿದ್ದು, ಸುಳ್ಳು ಆರೋಪಗಳ ದೂರಿನನ್ವಯ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್‌ನಲ್ಲಿ ದಾಖಲಾದ ಯಾವುದೇ ಆರೋಪಗಳಲ್ಲಿಯೂ ತಾವು ಭಾಗಿಯಾಗಿಲ್ಲ.

ಹೀಗಾಗಿ, ಎಫ್ಐಆರ್‌ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. “ವಿಸ್ಮಯ’ ಚಲನಚಿತ್ರದ ಶೂಟಿಂಗ್‌ ವೇಳೆ ನಟ ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಿ ಟೂ ಅಭಿಯಾನದಲ್ಲಿ ನಟಿ ಶೃತಿ ಹರಿಹರನ್‌ ಆರೋಪಿಸಿದ್ದರು.

ಈ ವಿವಾದದ ಬೆನ್ನಲ್ಲೇ ಅರ್ಜುನ್‌ ಸರ್ಜಾ ಆಪ್ತ ಶ್ರೀರಾಂ ಫಿಲಂ ಇಂಟರ್‌ನ್ಯಾಷನಲ್‌ ಸಂಸ್ಥೆಯ ಶಿವ, ನಟಿ ಶ್ರುತಿ ಹರಿಹರನ್‌ ಹಾಗೂ ಇತರರು ಅರ್ಜುನ್‌ ಸರ್ಜಾರ ವೈಯಕ್ತಿಕ ಮಾಹಿತಿ ಬಳಸಿ ಫೇಸ್‌ಬುಕ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next