Advertisement

VIRAL video; ಅಮರನಾಥ ಯಾತ್ರೆ ಕೈಗೊಂಡ ನಟಿ ಸಾರಾ ಅಲಿ ಖಾನ್

05:46 PM Jul 20, 2023 | Team Udayavani |

ಜಮ್ಮು : ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿದ್ದು,ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

Advertisement

ಕ್ರಿಯಾತ್ಮಕ ಅಭಿನಯಕ್ಕೆ ಹೆಸರುವಾಸಿಯಾಗಿರುವ ನಟಿ ಸಾರಾ ಅಲಿ ಖಾನ್ ಅವರು ಅಮರನಾಥ ಯಾತ್ರೆಯ ಮೂಲಕ ಹೊಸ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡಿದ್ದು ಭದ್ರತೆಯೊಂದಿಗೆ  ಯಾತ್ರೆ ನಡೆಸುತ್ತಿರುವುದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ.

ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಟೀಕೆಗಳ ಕುರಿತು ಪ್ರತಿಕ್ರಿಯಿಸಿ, ”ದೇವಸ್ಥಾನಗಳಿಗೆ ಭೇಟಿ ನೀಡಿದಾಗ ನಾನು ಶಾಂತಿಯನ್ನು ಕಂಡುಕೊಂಡಿದ್ದೇನೆ. ಮುಖ್ಯವಾದುದೆಂದರೆ ನನ್ನ ಕೆಲಸ ಮಾತನಾಡಬೇಕಾಗಿದೆ. ನನ್ನನ್ನು ಟ್ರೋಲ್ ಮಾಡುತ್ತಿದ್ದರೆ, ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next